fbpx
ದೇವರು

ತಿರುಪತಿ ತಿಮ್ಮಪ್ಪನಿಗೆ ಈ ರೀತಿಯ ಹರಕೆಯನ್ನು ಹೊತ್ತರೆ ಸಾಕ್ಷತ್ ತಿಮ್ಮಪ್ಪನೇ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾನಂತೆ ಹೌದ ,ಮುಂದೆ ನೋಡಿ.

ಕಲಿಯುಗದ ಆರಾಧ್ಯ ದೈವ ತಿರುಪತಿ ತಿಮ್ಮಪ್ಪ . ಕೋಟ್ಯಾಂತರ ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಿರುವ ಕರುಣಾಮಯಿ ಗೋವಿಂದನನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನೀವು ತಿಮ್ಮಪ್ಪನ ಅನುಗ್ರಹ ಪಡೆಯಲು ಈ ರೀತಿ ಮಾಡಿದರೆ ನೀವು ಗೋವಿಂದನ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಸುಖ , ಶಾಂತಿ, ನೆಮ್ಮದಿ ಪಡೆಯಬೇಕಾದರೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಅದು ಏನೆಂದರೆ ತಿರುಪತಿ ತಿಮ್ಮಪ್ಪ ಹೇಳುತ್ತಾನೆ,ನೀನೇನ್ನಾದರೂ ನೀಡಿದರೆ ನಿನಗೆ ನಾನು ಕೊಡುವೆ, ಅಂದರೆ ನೀವು ಹಣಕಾಸು, ಒಡವೆ, ನೀಡಿ ಎನ್ನುವುದಿಲ್ಲ. ಅದರ ಅರ್ಥ ಅವನಿಗೆ ಯಾವುದೇ ರೀತಿಯ ಅಹಂಕಾರ ಇಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡಬೇಕು. ನಿಮ್ಮ ಶಕ್ತಿಗೆ ಅನುಸಾರವಾಗಿ ಅವನಿಗೆ ಹರಕೆ ಹೊತ್ತು ಕೊಳ್ಳಬೇಕು. ಸಾಮಾನ್ಯವಾಗಿ ತಿಮ್ಮಪ್ಪನಿಗೆ ಮುಡುಪು ಕಟ್ಟಬೇಕು. ಆ ಮುಡುಪನ್ನು ಹೇಗೆ ಕಟ್ಟಬೇಕು ? ಎನ್ನುವುದನ್ನು ನಾವು ಇಂದು ತಿಳಿದುಕೊಳ್ಳೋಣ ಬನ್ನಿ .

 

 

 

ಮುಡುಪು ಕಟ್ಟಬೇಕಾದದ್ದನ್ನು ಅದನ್ನು ಕಟ್ಟಲು ಮೊದಲು ಒಂದು ಬಿಳಿ ಹೊಸ ವಸ್ತ್ರವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ನೀರಿನಿಂದ ಒದ್ದೆ ಮಾಡಿಕೊಂಡು ಹರಿಶಿನವನ್ನು ಹಚ್ಚಿ,, ಅದರಲ್ಲಿ ಮೂರು ರೂಪಾಯಿಯನ್ನು ಇಟ್ಟು, ನಿಮ್ಮ ಮನಸ್ಸಿನಲ್ಲಿ ಆಗಬೇಕಾದ ಕೆಲಸದ ವಿಷಯಗಳನ್ನು ಸಂಕಲ್ಪಿಸಿಕೊಳ್ಳಬೇಕು ನಂತರ ಅದನ್ನು ಎರಡು ಗಂಟುಹಾಕಿ ಒಂದು ಲೋಟದ ಕೆಳಗಡೆ ಆದನ್ನು ಮುಚ್ಚಿಡಬೇಕು.
ಹೀಗೆ ಮಾಡಿದ ಮುಡುಪನ್ನು ನಂತರ ಯಾವುದೇ ಕಾರಣಕ್ಕೂ ಸಂಕಲ್ಪ ಮುಗಿಯುವವರೆಗೂ ತೆಗೆಯಬಾರದು.ಸಂಕಲ್ಪ ನೆರವೇರಿದ ನಂತರ ತಿರುಪತಿಗೆ ನೇರವಾಗಿ ತೆಗೆದುಕೊಂಡು ಹೋಗಿ ಹಾಕಬೇಕು. ನಂತರ ಅಲ್ಲಿಂದ ಬಂದ ಮೇಲೆ ಒಂದು ತಟ್ಟೆಯಲ್ಲಿ ಹಾಲು ಮತ್ತು ಕಟ್ಟಿದ ಆ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ತುಳಸಿ ಗಿಡದ ಪೂಜೆ ಮಾಡಿ ನಂತರ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು.

ಹೀಗೆ ಮಾಡಿದರೆ ತಿಮ್ಮಪ್ಪನ ಅನುಗ್ರಹವಾಗುವುದು ಖಚಿತ. ಸಾಕ್ಷಾತ್ ತಿಮ್ಮಪ್ಪನೇ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಸೂಚಿಸುತ್ತಾನೆ. ಒಂದು ಹಿಡಿ ಹಕ್ಕಿಗೆ ತುಳಸಿ ದಳವನ್ನು ಹಾಕಿ ಅದನ್ನು ಪೂರ್ವದಿಕ್ಕಿಗೆ ಹಾಕಿ ಶ್ರೀಮನ್ನ ನಾರಾಯಣನ ಭಜನೆಯನ್ನು ಮಾಡಿದರೆ ನಿಮಗೆ ಹಣಕಾಸಿನ ತೊಂದರೆ ಇದ್ದರೆ ಸರಿ ಹೋಗುತ್ತದೆ. ಈ ಪವಾಡ ನಿಯಮವನ್ನು ಅದೆಷ್ಟೋ ಜನರು ತಪ್ಪದೇ ಇವುಗಳನ್ನು ಪಾಲಿಸಿ ಪರಿಹಾರವನ್ನು ಕಂಡುಕೊಂಡಿದ್ದಾರೆ ಮತ್ತು ಈಗಲೂ ಕಾಣುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top