ಸಮಾಚಾರ

ದಿಢೀರ್ ನಿವೃತ್ತಿ ಹಿಂದಿನ ಕಾರಣವನ್ನು ಕೊನೆಗೂ ಬಹಿರಂಗ ಪಡಿಸಿದ ಡಿವಿಲಿಯರ್ಸ್​

ಬ್ಯಾಟ್ ಹಿಡಿದು ಕಣಕ್ಕಿಳಿದರೆ ಚೆಂಡಿಗೆ ಮೈದಾನದ ಅಷ್ಟದಿಕ್ಕುಗಳನ್ನು ತೋರಿಸೋ ಖದರ್ ಹೊಂದಿರೋ ಮಿಸ್ಟರ್.360 ಖ್ಯಾತಿಯ ಸ್ಪೋಟಕ ದಾಂಡಿಗ ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾಗ ಅಭಿಮಾನಿಗಳಲ್ಲಿ ಏನೋ ಒಂಥರದ ನೀರವ ಮೌನ, ತಡೆಯಲಾಗದ ದುಃಖ ಉಕ್ಕಿಬಂದಿದ್ದು ಸುಳ್ಳಲ್ಲ.. ಸದ್ಯದ ಪೀಳಿಗೆಯ ಆಟಗಾರರಲ್ಲಿ ಜಗತ್ತಿನಾದ್ಯಂತ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಆಟಗಾರನೆಸಿಕೊಂಡಿರುವ ಎಬಿಡಿ ವಿಲಿಯರ್ಸ್ ಚೆನ್ನಾಗಿ ಆಡುತ್ತಿರುವಾಗಲೇ ಅದ್ಯಾಕೆ ಇದ್ದಕ್ಕಿಂತಂತೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇತ್ತು. ಆ ಪ್ರಶ್ನೆಗೆ ಇದೀಗ ಸ್ವತಃ ಡಿ ವಿಲಿಯರ್ಸ್ ಅವರೇ ಉತ್ತರಿಸಿದ್ದಾರೆ.

ಇತ್ತೀಚಿಗೆ ಸಂದರ್ಶನದಲ್ಲಿ ಭಾಗವಹಿಸಿದ್ದ ಎಬಿಡಿ ಈ ಪ್ರಶ್ನೆಗೆ ಉತ್ತರಿಸಿದರು. ”ನಮ್ಮ ತಂಡ, ಕೋಚ್​ ಹಾಗೂ ನನ್ನ ಅಭಿಮಾನಿಗಳು ನನ್ನಿಂದ ತುಂಬಾನೇ ನಿರೀಕ್ಷೆ ಮಾಡುತ್ತಿದ್ದರು. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾನು ದಿಢೀರ್ ಅಂತ ನಿವೃತ್ತಿ ನಿರ್ಧಾರಕ್ಕೆ ಮುಂದಾದೆ. ಆದರೆ ಈ ನಿರ್ಧಾರದಿಂದ ನನಗೆ ಯಾವುದೇ ಬೇಸರವಾಗಿಲ್ಲ. ಸದ್ಯ ಕ್ರಿಕೆಟ್ ಜೀವನದಿಂದ ದೂರವಿದ್ದೇನೆ, ಕುಟುಂಬ ಸದಸ್ಯರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ’ ಎಂದು ಎಬಿಡಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ವಿಲಿಯರ್ಸ್ ಇನ್ನೂ ಕೆಲವೊಂದಷ್ಟು ವರ್ಷ ಐಪಿಎಲ್ ನಲ್ಲಿ ಆಡಲಿದ್ದಾರೆ. ಕಳೆದ ಎಂಟು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಬ್ಯಾಟ್ ಬೀಸುತ್ತಾ ಬಂದಿರುವ ಎಬಿಡಿ ಮುಂದಿನ ವರ್ಷವೂ RCB ಪರ ಆಡಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top