ಮನೋರಂಜನೆ

30ವರ್ಷಗಳ ನಂತ್ರ ದೊಡ್ಮನೆ ಮೊಮ್ಮಗನಿಗೆ ತಾಯಿ ಪ್ರೀತಿ ತೋರಲು ಬಂದ್ರು ಒನ್ ಅಂಡ್ ಓನ್ಲಿ ಅಪರ್ಣ.

ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ ಅಪರ್ಣಾ. ಎಷ್ಟೇ ಸಾಧನೆಗಳ ಶಿಖರವನ್ನು ಏರಿದರು ತೀರಾ ಸರಳ, ಸಜ್ಜನ, ಮೃದು ಸ್ವಾಭಾವಿ, ಎಲ್ಲಕ್ಕೂ ಮಿಗಿಲಾಗಿ ಸ್ವಚ್ಛ ಮನಸಿನ ಅಚ್ಚ ಕನ್ನಡತಿ, ಟಿವಿ ನಿರೂಪಕಿಯಾಗಿ , ರೇಡಿಯೋ ಜಾಕಿಯಾಗಿ ನಟಿಯಾಗಿ ಖ್ಯಾತಿಗಳಿಸಿರುವ ಅಪರ್ಣ ಬರೋಬ್ಬರಿ ಮೂವತ್ತು ವರ್ಷಗಳ ನಂತರ ಸಿನಿಮಾರಂಗಕ್ಕೆ ವಪಾಸಾಗಿದ್ದಾರೆ.

 

 

1984ರಲ್ಲಿ ‘ಮಸಣದ ಹೂವು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದ ಅಪರ್ಣಾ, ಅದಾದ ಬಳಿಕ ಮೂರ್ನಾಲ್ಕು ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಸಿನಿಮಾಗಳನ್ನು ದೂರ ಉಳಿದಿದ್ದ ಅಪರ್ಣ ಕಿರುತೆರೆಯ ನಿರೂಪಣಾ ಕಾರ್ಯಕ್ರಮಗಳು, ರೆಡಿಯೋ ಜಾಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಸದ್ಯ ಸೃಜನ್ ಲೋಕೇಶ್ ನಡೆಸುತ್ತಿರುವ ‘ಮಜಾ ಟಾಕೀಸ್’ನಲ್ಲಿ ಬ್ಯುಸಿಯಾಗಿರೋ ಅಪರ್ಣ ದೇವರನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಎಂಬ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾಗೆ ಆಯ್ಕೆಯಾಗಿದ್ದಾರೆ.

ವಿಶೇಷ ಅಂದ್ರೆ ಅಪರ್ಣಾ ಬರೊಬ್ಬರಿ 30ವರ್ಷಗಳ ನಂತ್ರ ಸಿನಿಮಾವೊಂದಕ್ಕೆ ಮತ್ತೆ ಬಣ್ಣ ಹಚ್ತಿದ್ದಾರೆ. ಎನ್.ಎಲ್.ಎನ್. ಮೂರ್ತಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಅಯ್ಯರ್ ನಟಿಸುತ್ತಿದ್ದಾರೆ. ಅಪರ್ಣಾ ಗ್ರಾಮಾಯಣ ಸಿನಿಮಾದಲ್ಲಿ ವಿನಯ್​​ರಾಜ್​​ ಕುಮಾರ್​​ ತಾಯಿಯ ಪಾತ್ರದಲ್ಲಿ ಅಭಿನಯಿಸ್ತಿದ್ದು, ಆ ಪತ್ರಕ್ಕೆ ಅತ್ಯಂತ ಪ್ರಾಮುಖ್ಯತೆ ಇದೆಯಂತೆ. ಸಪ್ಟೆಂಬರ್ 18 ರಂದು ಈ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top