ಸಮಾಚಾರ

ತನ್ನ ಅಂದವೇ ಈಕೆಗೆ ಮುಳುವಾಯಿತು,ಅದೇ ಈಕೆ ಸಿನಿಮಾದಿಂದ ಔಟ್ ಆಗುವಂತೆ ಮಾಡಿತು

ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಕೊಡುವ ಆಮಿಷವನ್ನು ವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಸಿನಿಮಾ ರಂಗದಲ್ಲಿ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

RX 100 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿ ಸಖತ್ ಬೋಲ್ಡ್ ಅಂಡ್ ಹಾಟ್ ಆಗಿ ಅಭಿನಯ ಮಾಡಿದ್ದ ನಟಿ ಪಾಯಲ್ ರಜಪೂತ್​ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ತಾವು ಎದುರಿಸಿದ್ದ ಚಿತ್ರರಂಗದಲ್ಲಿಯ ಕರಾಳತೆಯನ್ನು ಅವರು ಬಿಚ್ಚಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಆರ್​ಎಕ್ಸ್​ 100 ದೊಡ್ಡ ಯಶಸ್ಸಿನ ನಂತರ ಪಾಯಲ್​ ಅವರಿಗೆ ಅನೇಕ ಆಫರ್ ಗಳು ಹುಡುಕಿ ಬಂದಿದ್ದವು. ಆದರೆ, ಇಂಥದೊಂದು ಆಫರ್​ ಬರುತ್ತೆ ಅನ್ನೋದನ್ನು ಪಾಯಲ್​ ಕನಸಿನಲ್ಲೂ ಊಹಿಸಿರಲಿಲ್ಲ. ಆದ್ರೆ, ಆ ಚಿತ್ರದ ಡೈರೆಕ್ಟರ್ ಅಸಲಿ ಪುರಾಣವೇ ಬೇರೆ ಆಗಿತ್ತು. ಈ ಚಿತ್ರದಲ್ಲಿ ಅಭಿನಯ ಮಾಡಬೇಕೆಂದರೆ ‘ಕಾಂಪ್ರಮೈಸ್​’ ಮಾಡಿಕೊಳ್ಳಬೇಕು ಅಂತಾ ಪಾಯಲ್​ಗೆ ಆಫರ್ ಕೊಟ್ಟಿದ್ದರು.

ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ್ದ ನಟಿ ಪಾಯಲ್ ರಜಪೂತ್ ಅವರು ಈ ಭಯಾನಕ ಸತ್ಯದ ಬಗ್ಗೆ ಹೇಳಿದ್ದಾರೆ. ನಿರ್ದೇಶಕನ ಬೇಡಿಕೆಗೆ ಸಾರಾಸಗಟಾಗಿ ನೋ ಎಂದಿರುವ ತಮ್ಮ ನಟನೆಯ ಬಗ್ಗೆ ನಂಬಿಕೆ ಹೊಂದಿದ್ದಾರೆ ಎನ್ನಲಾಗಿದೆ. ಇಂದು ಆಫರ್ ಸಿಗದೇ ಇದ್ದರು ಕೂಡ ಮುಂದೊಂದು ದಿನ ಆಫರ್ ಸಿಗಬಹುದು ಎಂಬ ನಂಬಿಕೆಯಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top