ಸಮಾಚಾರ

ಆಶ್ಚರ್ಯ ಇಲ್ಲಿ ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ,ಏನ್ ಇದು ಪವಾಡ,ನೋಡಿ ನೀವೇ

ನಮ್ಮ ದೇಶದಲ್ಲಿ ಇರುವ ಹಲವಾರು ತೀರ್ಥ ಕ್ಷೇತ್ರಗಳು ತಮ್ಮದೇ ಆಗಿರುವ ವಿಶಿಷ್ಟವಾದ ಮಹತ್ವ ಹೊಂದಿವೆ. ಇನ್ನು ಕೆಲವೊಂದು ತೀರ್ಥ ಗಳಲ್ಲಿ ಕಂಡು ಬರುವ ತೀರ್ಥ ಕುಂಡಗಳ ಮಹಿಮೆ ಅಪಾರವಾಗಿದೆ. ತೀರ್ಥ ಕುಂಡಗಳಲ್ಲಿ ಸ್ನಾನ ಮಾಡಿದರೆ ಪಾಪ ಮುಕ್ತಿಯಾಗುತ್ತೆ, ಔಷಧೀಯ ಗುಣಗಳಿಂದ ಚರ್ಮ ರೋಗಗಳು ನಿವಾರಣೆ ಆಗುತ್ತವೆ ಎಂದು ನಂಬಿಕೆ ಇದೆ. ನಾವು ನಿಮಗಿಲ್ಲಿ ವಿಶಿಷ್ಟ ತೀರ್ಥ ಕುಂಡದ ಬಗ್ಗೆ ತಿಳಿಸುತ್ತೇವೆ. ಇಲ್ಲಿ ದೇಶದೆಲ್ಲೆಡೆಯಿಂದ ಸ್ನಾನ ಮಾಡಲು ಜನರು ಬರುತ್ತಾರೆ.

ಜಾರ್ಖಂಡ್ತ್ ರಾಜ್ಯದ ಬುಕರ್ ಜಿಲ್ಲೆಯಲ್ಲಿ ಒಂದು ತೀರ್ಥ ಕುಂಡ ಇದೆ. ಇದು ಅತ್ಯಂತ ಅಪರೂಪದ, ವಿಶಿಷ್ಟವಾದ ತೀರ್ಥ ಕುಂಡವಾಗಿದ್ದು ಇಲ್ಲಿ ಚೆಪ್ಪಾಳೆ ಹೊಡೆದರೆ ನೀರು ಬರುತ್ತದೆ ಎಂದು ತಿಳಿದು ಬಂದಿದೆ. ಬುಕರ್ ನಗರದಿಂದ ಸುಮಾರು 27 ಕಿ.ಮೀ ದೂರ ಇರುವ ಈ ಕುಂಡದಲ್ಲಿ ಸ್ನಾನ ಮಾಡಲು ಬೇರೆ ರಾಜ್ಯಗಳಿಂದಲೂ ಕೂಡ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ ಎಂದು ತಿಳಿದು ಬಂದಿದೆ.

 

 

ಈ ತೀರ್ಥ ಕುಂಡ ಔಷಧೀಯ ಗುಣ ಹೊಂದಿದ್ದು ಇಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ ಎನ್ನಲಾಗಿದೆ. ಇನ್ನೊಂದು ವಿಶೇಷತೆ ಎಂದರೆ ಬೇಸಿಗೆ ಕಾಲದಲ್ಲಿ ಇಲ್ಲಿ ತಣ್ಣಗೆ ನೀರು ಇರುತ್ತದೆ ಇನ್ನು ಚಳಿಗಾಲದಲ್ಲಿ ಬಿಸಿಯಾದ ನೀರು ಇರುತ್ತದೆ ಎನ್ನಲಾಗಿದೆ.

ವಿಜ್ಞಾನನೇ ಅಚ್ಚರಿ ಆಗುವಂತೆ ಈ ತೀರ್ಥದ ನೀರು ಒಂದು ಪಾತ್ರೆಯಲ್ಲಿ ಬಿಸಿ ನೀರು ಕುದಿಯುವಷ್ಟು ವೇಗದಲ್ಲಿ ನೀರು ಮೇಲೆ ಬರುತ್ತದೆ ಎನ್ನಲಾಗಿದೆ. ಈ ನಿಂತು ಎಲ್ಲಿಂದ ಬರುತ್ತದೆ ಎಂದು ಯಾರಿಗೂ ಇನ್ನು ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ ಚೆಪ್ಪಾಳೆ ಬಾರಿಸಿದ ಧ್ವನಿ ತರಂಗದ ಮೂಲಕ ನೀರು ಬರುತ್ತೆ ಎನ್ನಲಾಗಿದೆ. ಈ ನೀರು ಗಂಗಾ ನದಿ ಸೇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top