ಮನೋರಂಜನೆ

ಹುಟ್ಟಿದ ಹಬ್ಬವನ್ನು ಕೊಡಗಿನ ಸಂತ್ರಸ್ತರಿಗೆ ಮುಡಿಪಿಟ್ಟು ಮಾನವೀಯತೆ ಮೆರೆದ ಡಾಲಿ ಧನಂಜಯ್.

ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಏಕಾಏಕಿ ಸ್ಟಾರ್ ಆಗಿ ಹೊರ ಹೊಮ್ಮಿರುವವರು ಧನಂಜಯ. ಅಭಿಮಾನಿಗಳಿಂದ ಡಾಲಿ ಅಂತಲೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಟಗರು ಪಾತ್ರದಿಂದ ಧೂಳೆಬ್ಬಿಸಿರೋ ಧನಂಜಯ್‌ ಈಗ ಮಾನವೀಯತೆಯ ನೆಲೆಗಟ್ಟಿನಲ್ಲಿ ಮನುಷ್ಯತ್ವ ಮೆರೆದಿದ್ದಾರೆ. ಇಂದು ಅವರ ಜನುಮದಿನ, 32ನೇ ವಸಂತಕ್ಕೆ ಕಾಲಿಡುತ್ತಿರುವ ದಾಳಿ ತಮ್ಮ ಬರ್ತಡೇಯನ್ನು ಆಚರಿಸದೇ ಒಂದೊಳ್ಳೆ ಮಾದರಿ ಕೆಲಸ ಕೈಗೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ..

 

 

ಬೆಂಗಳೂರಿನ ಜಯನಗರ ಹತ್ತಿರ ಇರುವ ಧನಂಜಯ್ ಮನೆ ಮುಂದೆ ನಿನ್ನೆ ಮಧ್ಯೆರಾತ್ರಿಯಿಂದಲೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಧಾವಿಸಿ ನೆಚ್ಚಿನ ನಟನ ಬರ್ತಡೇ ಆಚರಿಸುವ ಸಂತೋಷದಲ್ಲಿದ್ದರು. ಆದರೆ ಕೊಡಗು ಮಂದಿ ಪ್ರವಾಹಕ್ಕೆ ತುತ್ತಾಕಿ ಕಂಗಾಲಾಗಿರೋದ್ರಿಂದ ಹುಟ್ಟುಹಬ್ಬವನ್ನು ಆಚರಿಸಲು ಧನಂಜಯ್ ನಿರ್ಧರಿಸಿದ್ದರು. ಧನಂಜಯ್​ ತಮ್ಮ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ಸಹಾಯಕ್ಕೆ ಹಣ ಸಂಗ್ರಹಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಅಭಿಮಾನಿಗಳು ತಮ್ಮ ಕೈಲಾದ ದೇಣಿಗೆಯನ್ನು ನೀಡಿದರು. ಸೆಲ್ಫೀಗೊಂದು ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ ನಟ ಧನಂಜಯ್ ಅವರ ನಡೆ ಎಲ್ಲರಲ್ಲೂ ಮೆಚ್ಚಿಗೆ ಗಳಿಸಿಕೊಂಡಿದ್ದಾರೆ.ಅದ್ಧೂರಿ ಹುಟ್ಟುಹಬ್ಬ ಬೇಡ, ಸಂತ್ರಸ್ತರಿಗೆ ನೆರವಾಗುವ ಎಂಬ ಅವರ ಗುಣಕ್ಕೆ ಮೆಚ್ಚುಗೆ ಸೂಚಿಸುತ್ತಾ, ನಮ್ಮ ಕಡೆಯಿಂದಲೂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಮೊದಲೇ ಮನವಿ ಮಾಡಿಕೊಂಡಿದ್ದ ಧನಂಜಯ್:
ಕೊಡಗಿನಲ್ಲಿ ಭಯಂಕರ ಮಳೆಯಿಂದಾಗಿ ಭೀಕರ ಪ್ರವಾಹದ ಭೀತಿ ಉಂಟಾಗಿರುವ ವಿಚಾರ ಎಲ್ಲರಿಗೂ ಗೊತ್ತು. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರಣಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.. ಜನರು ಪ್ರವಾಹಕ್ಕೆ ತುತ್ತಾಗಿ ನೋವು ಪಡುತ್ತಿರೋ ಈ ಸಮಯದಲ್ಲಿ ಬರ್ತಡೇ ಮಾಡುವುದು ಸರಿಯಲ್ಲ,, ನನ್ನ ಹುಟ್ಟುಹಬ್ಬದ ದಿನ ಯಾವುದೇ ಕೇಕ್, ಪಟಾಕಿ, ಕಟೌಟ್ ಅಂತ ಸಂಭ್ರಮಿಸುವುದು ಬೇಡ. ಹಾಗಂತ ನಿಮಗೆ(ಅಭಿಮಾನಿಗಳಿಗೆ) ನಿರಾಸೆ ಮಾಡೋದಿಲ್ಲ. ಬನ್ನಿ ನಿಮ್ಮ ಜೊತೆ ಭೇಟಿ ಆಗುತ್ತೇನೆ.. ಕೊಡಗು ಜನರ ಪರಿಹಾರಕ್ಕಾಗಿ ನಮ್ಮ ಕೈನಲ್ಲಿ ಎಷ್ಟು ಸಾಧ್ಯವೋ ಅಷ್ಟು ಅವರಿಗೆ ನೆರವಾಗೋಣ ಎಂದು ಧನಂಜಯ್ ನಾಲ್ಕು ದಿನಗಳ ಹಿಂದೆಯೇ ಫೇಸ್ಬುಕ್ ನಲ್ಲಿ ಹೇಳಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top