ಸಮಾಚಾರ

ಕೊಡಗು ಸಂತ್ರಸ್ತರ ನೆರವಿಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ದಿವಾಕರ್

ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕೇವಲ ಸರ್ಕಾರ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಯಿಂದ ನೆರವು ಹರಿದು ಬರುತ್ತಿದೆ. ಸಿನಿಮಾ ನಟರು ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಈಗ ಬಾಗ್ ಬಾಸ್ ಮಾಜಿ ಸ್ಪರ್ಧಿ ದಿವಾಕರ್ ಕೂಡ ಪ್ರವಾಹ ಸಂತ್ರಸ್ಥರ ನೆರವಿಗೆ ನಿಂತಿದ್ದಾರೆ.

ನಟ ದಿವಾಕರ್ ರವರು, ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಪ್ರತಿ ಅಂಗಡಿಗಳಿಗೆ ತೆರಳಿ ನಿಧಿ ಸಂಗ್ರಹ ಮಾಡಿದ್ದಾರೆ. ಸದ್ಯ ದಿವಾಕರ್ ಅವರ ಈ ಕೆಲಸಕ್ಕೆ ಸಾರ್ವಜನಿಕರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಸದ್ಯ ದಿವಾಕರ್ ಈ ಎಲ್ಲಾ ಸಾಮಾಗ್ರಿಗಳನ್ನು ಸ್ವತಃ ತಾವೇ ಕೊಡಗಿನ ಜನತೆಗೆ ತಲುಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

 

 

ದಿವಾಕರ ಅವರ ಮನವಿಗೆ ಓಗೊಟ್ಟು ಅನೇಕ ಸ್ಥಳೀಯರು ದಿನನಿತ್ಯದ ಸಾಮಗ್ರಿಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಸಾಮಗ್ರಿಗಳನ್ನು ತೆಗೆದುಕೊಂಡು ದಿವಾಕರ್ ರವರು ಕೊಡಗಿನ ಸಂತ್ರಸ್ತರಿಗೆ ಹಂಚುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಂದಹಾಗೆ ಬಿಗ್‌ ಬಾಸ್ ಸೀಝನ್ ಐದರ ರನ್ನರ್ ಅಪ್ ಆಗಿ ಹೊರ ಬಂದಾತ ದಿವಾಕರ್. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್‌ಬಾಸ್ ಮನೆ ಸೇರಿದ್ದ ದಿವಾಕರ್ ಆ ನಂತರ ಪ್ರೇಕ್ಷಕರ ಮನ ಗೆದ್ದು ಈ ಶೋನಲ್ಲಿ ಕಡೇ ತನಕ ಉಳಿದುಕೊಂಡಿದ್ದ. ಓರ್ವ ಸೇಲ್ಸ್‌ಮ್ಯಾನ್ ಆಗಿದ್ದ ದಿವಾಕರ್ ಬಿಗ್ ಬಾಸ್ ಮನೆತಿಂದ ಹೊರಬಂದ ಬಳಿಕ . ದಿವಾಕರ್ ರವಿಚಂದ್ರನ್ ಪುತ್ರನ್ ಚಿಲ್ಲಂ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸ್ಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top