ಸಮಾಚಾರ

ಈ ಕಾರಣಕ್ಕಾಗಿ ಮತ್ತೆ ಕೋರ್ಟ್ ಮೆಟ್ಟಿಲೇರಿದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್.

ನಲಪಾಡ್ ಗೊತ್ತಲ್ಲಾ? ಬಹುಕೋಟಿ ಉದ್ಯಮಿಯೊಬ್ಬರ ಮಗ ವಿದ್ವತ್ ಎಂಬಾತನಿಗೆ ಮನಸೋಯಿಚ್ಚೆ ಬಡಿದು ತನ್ನ ಪುಂಡುಗರ ಸಮೇತ ಜೈಲುಹಕ್ಕಿಯಾಗಿದ್ದಾತ.. ಶಾಂತಿನಗರ ಶಾಶಕ ಹ್ಯಾರಿಸ್ ಅವರ ಸುಪುತ್ರನಾಗಿರುವ ನಲಪಾಡ್ ಸದ್ಯ ಜೈಲಿನಿಂದ ಹೊರಬಂದು ಎಂದಿನ ಜೀವನಕ್ಕೆ ಮರಳಿ ತಿಂಗಳು ಕಳೆದಿವೆ. ಹಲ್ಲೆ ಪ್ರಕರಣದಲ್ಲಿ ಅಂದರ್ ಆಗಿದ್ದ ಈತ ಬೇಲ್ ಪಡೆದು ಸದ್ಯಕ್ಕೆ ಬಚಾವಾಗಿದ್ದು ಅಖಂಡ 117 ದಿನಗಳ ಸೆರೆಮನೆ ವಾಸ ಮುಗಿಸಿ ಹೊರಬಂದಿದ್ದಾನೆ.

 

 

ಅಖಂಡ ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲೇ ಮುದ್ದೆ ಮುರಿದು ಆಚೆ ಬಂದಿದ್ದ ನಲಪಾಡ್ ಆ ನಂತರ ಯಾರಿಗೂ ಸಿಗದೇ ಒಂದಷ್ಟು ದಿನ ಕಣ್ಮರೆಯಾಗಿದ್ದ.. ಮಾಡಿದ ತಪ್ಪಿನಿಂದಾದ ಮುಜುಗರದಿಂದಲೋ ಏನೋ ಸಾರ್ವಜನಿಕವಾಗಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.. ಇಂತಿಪ್ಪ ನಲಪಾಡ್ ಇದೀಗ ವಿದೇಶಕ್ಕೆ ತೆರಳಲು ಅನುವಾಗಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ತಾನು ಇಂಗ್ಲೆಂಡ್’ಗೆ ಹೋಗಬೇಕಿದೆ ಹಾಗಾಗಿ ತನ್ನ ಜಾಮೀನು ಅರ್ಜಿ ನಿಡುವಾಗಿನ ಷರತ್ತುಗಳನ್ನು ಸಡಿಲಿಸಿ ಎಂದು ನಲಪಾಡ್ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾನೆ. ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ವ ಅವರನ್ನೊಳಗೊಂಡ ಏಕಸದಸ್ಯ ಪೀಠ ನಲಪಾಡ್ ಅವರ ಅರ್ಜಿ ವಿಚಾರಣೆ ನಡೆಸಿದೆ. ಪ್ರಾಸಿಕ್ಯೂಷನ್ ಪರ ವಕೀಲರು ಸಮಯಾವಕಾಶ ಕೇಳಿದ ಕಾರಣ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಲು ಆದೇಶಿಸಿದೆ. “ನನ್ನ ತಮ್ಮ ಲಂಡನ್’ನಲ್ಲಿದ್ದಾನೆ, ಅವನನ್ನ ನೋಡಲು ನಾನು ಬ್ರಿಟನ್’ಗೆ ಹೋಗಬೇಕಿದೆ. ಹಾಗಾಗಿ ನನಗೆ ನ್ಯಾಯಾಲಯ ಅನುಮತಿ ಕೊಡಬೇಕು” ಎಂದು ನಲಪಾಡ್ ಅರ್ಜಿಯಲ್ಲಿ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top