fbpx
ಹೆಚ್ಚಿನ

ವರಮಹಾಲಕ್ಷ್ಮಿ ಹಬ್ಬದ ಪೂಜೆ, ಲಕ್ಷ್ಮೀ ಕೂರಿಸಲು ಶುಭ ಶಕುನ ಹಾಗೂ ಲಕ್ಷ್ಮೀ ದೇವಿಯನ್ನು ಹೇಗೆ ಆವಾಹನೆ ಮಾಡಿದ್ರೆ ಲಕ್ಷ್ಮಿದೇವಿ ಪ್ರಸನ್ನಳಾಗಿ ಸಕಲ ಕಷ್ಟಗಳನ್ನು ನಿವಾರಣೆ ಮಾಡುತ್ತಾಳೆ ಅಂತ ತಿಳ್ಕೊಳ್ಳಿ

ಶ್ರಾವಣ ಮಾಸದ ಇಂದೂ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ತುಂಬಾ ಮುಖ್ಯವಾದದ್ದು, ಶ್ರಾವಣ ಮಾಸದ ಎರಡನೇ ಶುಕ್ರವಾರ, ಶುಕ್ಲ ಹುಣ್ಣಿಮೆಯ ಹಿಂದಿನ ದಿನ ಶುಕ್ರ ಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ ಅಂದರೆ ಶುಕ್ರವಾರ ಅಥವಾ ಶುಕ್ಲ ಹುಣ್ಣಿಮೆಯ ಹತ್ತಿರದ ದಿನವೇ ಶುಕ್ರವಾರಗಳಂದು ವರಮಹಾಲಕ್ಷ್ಮಿ ದೇವಿಯನ್ನು ಪೂಜೆ ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ .
ವರಮಹಾಲಕ್ಷ್ಮಿ ಎನ್ನುವ ಹೆಸರೇ ಹೇಳುವಂತೆ ಇದು ಲಕ್ಷ್ಮಿ ದೇವಿಯನ್ನು ಪೂಜಿಸುವ ದಿನ. ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ಆಚರಿಸುವ ಹಬ್ಬವಾಗಿದೆ. ಈ ಹಬ್ಬ ಸುಖ, ಶಾಂತಿ, ಸಂಪತ್ತಿನ ಹಬ್ಬವಾಗಿದೆ. ಹೊಸದಾಗಿ ವರಲಕ್ಷ್ಮಿ ವ್ರತವನ್ನು ಮಾಡುವವರಿಗೆ ಈ ಪೂಜೆಗೆ ಬೇಕಾಗಿರುವ ಸಾಮಗ್ರಿಗಳ ಬಗ್ಗೆ ತಿಳಿಯದೆ ಗೊಂದಲದಲ್ಲಿರುತ್ತಾರೆ. ವರಲಕ್ಷ್ಮೀ ವ್ರತಕ್ಕೆ ಬೇಕಾಗಿರುವ ಪೂಜಾ ಸಾಮಗ್ರಿಗಳ ಬಗ್ಗೆ ಈಗ ತಿಳಿದುಕೊಳ್ಳೋಣ .

ಮೊದಲಿಗೆ ಬೇಕಾದದ್ದು ಪೀಠ ಅಂದರೆ ಮಣೆ ,ಪೀಠದ ಮೇಲೆ ಹಾಕಲು ಬಿಳಿಯ ವಸ್ತ್ರ, ರಂಗೋಲಿ ಹಾಕಿಕೊಳ್ಳಲು ಅಕ್ಕಿ ಹಿಟ್ಟು, ಕಲಶವನ್ನು ತಯಾರಿ ಮಾಡಿಕೊಳ್ಳಲು ಬೇಕಾಗಿರುವ ಪದಾರ್ಥಗಳು, ಎರಡು ತೆಂಗಿನ ಕಾಯಿಗಳು ಒಂದು ತೆಂಗಿನಕಾಯಿ ಕಳಶಕ್ಕೆ, ಮತ್ತೊಂದು ಪೂಜೆಗೆ.

ಒಂದು ಕಲಶದ ಚೊಂಬು ಈ ಕಳಸದ ಚೊಂಬಿನಲ್ಲಿ ಅಕ್ಕಿ ತುಂಬಿಸಿ, ಕರ್ಜೂರ ,ಗೋಡಂಬಿ , ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸಬೇಕು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ, ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ಇದರ ಮೇಲೆ ಕಲಶವನ್ನು ಕೂರಿಸಬೇಕು. ಕೋಸಂಬರಿ, ಬೆಲ್ಲದಿಂದ ಮಾಡಿದ ಪಾನಕ ,ದೇವಿಯ ಹತ್ತಿರ ಇಡಲು ಆನೆಗಳು, ಹಾಗೆ ಅರಿಶಿನದ ಕೊಂಬನ್ನು ಇಡಬೇಕು . ಅರಿಶಿನ-ಕುಂಕುಮ, ದೇವಿಗೆ ಇಡಲು ಒಂದು ಡಜನ್ ಬಳೆಗಳು, ತಾಂಬೂಲಕ್ಕೆ ಎರಡು ಬಳೆಗಳು, ದೇವರಿಗೆ ಸೀರೆ ಕಪ್ಪು ಬಣ್ಣದ ಸೀರೆಯನ್ನು ಮಾತ್ರ ಉಡಿಸಬಾರದು. ದೇವರಿಗೆ ಒಂದು ಬ್ಲೌಸ್ ಪೀಸ್, ತಾಂಬೂಲಕ್ಕೆ ಇನ್ನೂ ಕೆಲವು ಬ್ಲೌಸ್ ಪೀಸ್ ಗಳು .

 

 

ಹಾಗೆಯೇ ಗಂಧ ಮತ್ತು ಬಿಡಿ ಹೂಗಳು ಎಷ್ಟು ಇದ್ದರೂ ಅಷ್ಟು ಒಳ್ಳೆಯದು. ಏಕೆಂದರೆ ದೇವಿಗೆ ಅಷ್ಟೋತ್ತರ ಮಾಡುವಾಗ ಬಳಸಬೇಕು 108 ಬಿಡಿ ಹೂಗಳು ಇದ್ದರೆ ಒಳ್ಳೆಯದು. ಬಿಳಿಯ ಹಾರ ಅಂದರೆ ತುಂಬಾ ಇಷ್ಟ ,2 ಹಾರಗಳು ಬೇಕಾಗುತ್ತದೆ ಕಳಶಕ್ಕೆ ವೀಳ್ಯದೆಲೆ, ಮತ್ತು ತಾಂಬೂಲಕ್ಕೆ ಅಡಿಕೆ , ಕರ್ಜೂರ ,ಅಗರಬತ್ತಿ ಮತ್ತು ಚಿಲ್ಲರೆ ಕಾಸು ,ಮಾವಿನ ತೋರಣ, ಒಂದು ಬಾಳೆಹಣ್ಣು, ದೇವರಿಗೆ ಇನ್ನೂ ಕೆಲವು ತಾಂಬೂಲಕ್ಕೆ .
ಐದು ವಿವಿಧ ರೀತಿಯ ಹಣ್ಣುಗಳು, ದೇವಿಗೆ ಸಮರ್ಪಿಸಲು ಕಡಲೆ ಕಾಳಿನಿಂದ ಮಾಡಿದ ನೈವೇದ್ಯ, ಒಂದು ಬಾಳೆ ಎಲೆ, ನೈವೇದ್ಯವನ್ನು ನೀಡಲು ಬೇಕಾಗುತ್ತದೆ, ಅಕ್ಷತೆಯನ್ನು ಮಾಡಿ ಇಟ್ಟುಕೊಳ್ಳಬೇಕು, 9 ಬಿಳಿ ದಾರಗಳು ಹಲವು ರೀತಿಯ ತಿಂಡಿ-ತಿನಿಸುಗಳು, ವ್ರತ ಪುಸ್ತಕ, ದೀಪಾರಾಧನೆಗೆ ಬೇಕಾದ ಎಣ್ಣೆ ಅಥವಾ ಹಸುವಿನ ತುಪ್ಪ , ಹಸುವಿನ ತುಪ್ಪದ ದೀಪ ಮಾಡಿದರೆ ಇನ್ನೂ ಶ್ರೇಷ್ಠ ಬತ್ತಿ ಮತ್ತು ಕರ್ಪೂರ.
ಇವೆಲ್ಲಾ ಸಾಮಗ್ರಿಗಳನ್ನು ಜಾಗ್ರತೆಯಿಂದ ವ್ರತ ಪ್ರಾರಂಭದ ಮೊದಲೇ ತಂದು ಇಟ್ಟುಕೊಂಡರೆ ಒಳ್ಳೆಯದು. ಹೀಗೆ ಸಿದ್ಧವಾಗಿರುವುದರಿಂದ ಪೂಜೆ ಸಮಯದಲ್ಲಿ ಒತ್ತಡ ಕಡಿಮೆಯಾಗಿ ,ದೇವರ ಕಡೆ ಮನಸ್ಸನ್ನು ಪೂರ್ತಿಯಾಗಿ ಕೇಂದ್ರೀಕರಿಸಿ ಕೊಳ್ಳಬಹುದು.

ವರ ಮಹಾಲಕ್ಷ್ಮೀ ಕೂರಿಸಲು ಸೂಕ್ತ ಸಮಯ ಯಾವುದು ?
ವರ ಮಹಾಲಕ್ಷ್ಮೀ ಕೂರಿಸಲು ಸೂಕ್ತ ಸಮಯ ಶುಭ ಮುಂಜಾನೆ 5.45 ರಿಂದ 6.30 ರವರೆಗೆ
ಬೆಳಗ್ಗೆ 10 ಗಂಟೆಯಿಂದ 10.30 ವರೆಗೆ ಮತ್ತು.
ಸಂಜೆ 5.30 ರಿಂದ 6.15 ರವರೆಗೆ.
ಮೊದಲು ಗಂಗೆಯ ಆಚಮನ,ಕುಲದೇವತೆ ಮತ್ತು ಕುಲ ಗುರುಗಳ ಆರಾಧನೆ ,ಗಣಪತಿ ಪೂಜೆಯನ್ನು ಮಾಡಿ ಲಕ್ಷ್ಮೀ ದೇವಿಯನ್ನು ಆವಾಹನೆ ಮಾಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top