ಸಮಾಚಾರ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಈಗ ಹೇಗಿದ್ದಾರೆ ಗೊತ್ತೇ

ಕೆಲವು ದಿನಗಳ ಹಿಂದೆ ತಾವು ತಾನು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಅಕ್ಷರಶಃ ವಿಧಿಯ ಆಟದಲ್ಲಿ ಸೋತು ಸುಣ್ಣವಾಗಿದ್ದರು. ತೆರೆ ಮೇಲೆ ಸ್ಟಾರ್ ಆಗಿ ಮೆರೆದ ನಟನಿಗೆ ಕ್ಯಾನ್ಸರ್ (ನ್ಯೂರೊಎಂಡ್ರೊಕ್ರೈನ್ ಟ್ಯೂಮರ್) ಎಂಬ ಮಾರಣಾಂತಿಕ ಕಾಯಿಲೆ ವಕ್ಕರಿಸಿತ್ತು. ಅದು ಅಪರೂಪದಲ್ಲೇ ಅಪರೂಪವಾದ ಕಾಯಿಲೆಯಂತೆ, ಗುಣಪಡಿಸುವುದು ಕೂಡ ಕಷ್ಟಸಾಧ್ಯವಂತೆ. ಹಾಗಂತ ಸುಮ್ಮನೆ ಕೂರಲಾಗುತ್ತದೆಯೇ? ತಮಗೆ ಆಗಿರುವ ಕಾಯಿಲೆಯನ್ನು ಹೇಗಾದರೂ ಮಾಡಿ ಗುಣಿಪಡಿಸಲೇ ಎಂದು ಪಣತೊಟ್ಟು ವಿದೇಶಕ್ಕೆ ಹೋಗಿದ್ದರು. ಇರ್ಫಾನ್ ಖಾನ್ ಅರೋಗ್ಯ ಸುಧಾರಣೆ ಆಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು.

ಈಗ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಇರ್ಫಾನ್ ಖಾನ್ ಅವರ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಇರ್ಫಾನ್ ಖಾನ್ ಭಾರತಕ್ಕೆ ವಾಪಸ್ ಆಗಲಿದ್ದಾರಂತೆ. ಹಿಂದಿ ಮೀಡಿಯಂ ಸೀಕ್ವೆಲ್ ನಲ್ಲಿ ಇರ್ಫಾನ್ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಹಿಂದಿ ಮೀಡಿಯಂ ಸೀಕ್ವೆಲ್ ನಲ್ಲಿ ಇರ್ಫಾನ್ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

 

ಇರ್ಫಾನ್ ಖಾನ್ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರ ಅಭಿನಯದ ಬ್ಲಾಕ್ಮೇಲ್ ಹಾಗೂ ಕರ್ವಾನ್ ರಿಲೀಸ್ ಆಗಿದ್ದವು. ಆದ್ರೆ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಈ ಎರಡೂ ಚಿತ್ರ ಉತ್ತಮವಾಗಿದೆ. ಆದ್ರೆ ಚಿತ್ರದ ಪ್ರಚಾರಕ್ಕೆ ಇರ್ಫಾನ್ ಬರದೆಯಿರುವುದು ಚಿತ್ರದ ಹಿನ್ನೆಡೆಗೆ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಅಭಿಮಾನಿಗಳ ಹಾರೈಕೆ ಪಾಲಿಸಿ ಕೊನೆಗೂ ಇರ್ಫಾನ್ ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಸಂತೋಷದ ವಿಚಾರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top