fbpx
ಸಮಾಚಾರ

ಮೈಸೂರು ಅರಸರು ಸರ್ವಧರ್ಮವನ್ನು ಹೇಗೆ ಕಾಣ್ತಿದ್ರು ಎಂಬುದಕ್ಕೆ ಸಿಕ್ಕ ನಿಗೂಢ ಸಾಕ್ಷಿ

ಮೈಸೂರು ಸಂಸ್ಥಾನ (1399- 1947) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯವಾಗಿದೆ. 1399ರಲ್ಲಿ ಯಧುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. 1565ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. 1565ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು ಎಂದು ತಿಳಿದು ಬಂದಿದೆ.

ಮೈಸೂರು ಅರಸರು ಎಲ್ಲ ಧರ್ಮಗಳನ್ನು ಸಮನಾಗಿ ಕಾಣುತ್ತಿದ್ದರು, ಸರ್ವಧರ್ಮ ಸಮನ್ವಯ ಸಾರುತ್ತಿದ್ದರು ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರ ಈಗ ಇದಕ್ಕೆ ಸಾಕ್ಷಿ ಸಿಕ್ಕಿದೆ. ಹೌದು ಕೆಲವು ದಿನಗಳ ಹಿಂದೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಎಂಬಲ್ಲಿ ಕ್ರಿ.ಶ.1678ರ ಶಾಸನವೊಂದು ಸಿಕ್ಕಿದೆ. ಮೈಸೂರು ಅರಸರಾದ ಚಿಕ್ಕದೇವಾರಜ ಒಡೆಯರ್ ಬೊಮ್ಮರಸ ಎಂಬ ಜೈನ ಪಂಡಿತರಿಗೆ ಅರಕೆರೆ ಎಂಬ ಗ್ರಾಮವನ್ನು ದಾನವಾಗಿ ನೀಡಲಾಗಿದೆ ಎಂದು ಶಾಸನದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

 

 

ಪಿಹೆಚ್​ಡಿ ಸಂಶೋಧನೆ ಮಾಡುತ್ತಿರುವ ಎಸ್. ಕುಮಾರಸ್ವಾಮಿ ಹಾಗು ಎಲ್.ಅನಿಲ್ ಎಂಬುವರಿಗೆ ಈ ಶಾಸನ ಸಿಕ್ಕಿವೆ ಎನ್ನಲಾಗಿದೆ. ಇವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಕೊಳ್ಳೇಗಾಲ ತಾಲೂಕಿನ ದೇವಾಲಯಗಳ ಮತ್ತು ಶಾಸನಗಳ ಒಂದು ಅಧ್ಯಯನ ಎಂಬ ವಿಷಯದಲ್ಲಿ ಪಿಹೆಚ್​ಡಿ ಸಂಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಮಾಹಿತಿ ಪ್ರಕಾರ ಇಲ್ಲಿ ಸಿಕ್ಕಿರುವ ಶಾಸನವು ಒಡೆಯರ ಕಾಲದ ಕನ್ನಡ ಲಿಪಿ ಹಾಗು ದೇವನಾಗರಿ ಲಿಪಿ ಹೊಂದಿದೆ. ಕನ್ನಡ ಮತ್ತು ಸಂಸ್ಕೃತ ಭಾಷೆ ಸೇರಿದಂತೆ ಒಟ್ಟು 24 ಸಾಲುಗಳು ಈ ಶಾಸನದಲ್ಲಿ ಇವೆ ಎನ್ನಲಾಗಿದೆ.

ಎಸ್.ಡಿ‌. ಕುಮಾರಸ್ವಾಮಿ ಹಾಗು ಎಲ್.ಅನಿಲ್ ಅವರು ಇನ್ನು ಹೆಚ್ಚಿನ ಶಾಸನಗಳ ಬಗ್ಗೆ ಸಂಶೋಧನೆ ನಡೆದುತ್ತಿದ್ದಾರೆ ಎನ್ನಲಾಗಿದೆ. ಇವರ ಸಂಶೋಧನೆ ಯಶಸ್ವಿಯಾಗಲಿ ಎಂದು ಆಶಿಸೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top