ಸಮಾಚಾರ

ಜಿಡಿಪಿ ಅಭಿವೃದ್ಧಿಯಲ್ಲಿ ಮೋದಿಗಿಂತ ಮನಮೋಹನ್ ಸಿಂಗ್’ರೇ ಮುಂದು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಾಲ್ಕು ವರ್ಷಗಳ ಅವಧಿಗಿಂತ ಮನಮೋಹನ್ ಸಿಂಗ್‍ ಅವರು ಪ್ರಧಾನಿಯಾಗಿದ್ದ ಸಂದರ್ಭದ ಯುಪಿಎ ಸರಕಾರದ ಕಾಲದಲ್ಲಿನ ಹೆಚ್ಚು ಆರ್ಥಿಕ ಬೆಳವಣಿಗೆಯೇ ಆಗಿದೆ ಎನ್ನುವ ವರದಿ ಸರ್ಕಾರಿ ವೆಬ್’ಸೈಟ್’ನಿಂದ ನಾಪತ್ತೆಯಾಗಿದೆ ಎಂದು indiatoday.in ವರದಿ ಮಾಡಿದೆ. ಕೇಂದ್ರ ಅಂಕಿಅಂಶ ಸಚಿವಾಲಯ ನಿಯೋಜಿಸಿದ ತಜ್ಞರ ಸಮಿತಿಯ ವರದಿಯನ್ನು ವೆಬ್‍ಸೈಟಿನಿಂದ ತೆರವುಗೊಳಿಸಲಾಗಿದೆ.

 

 

ವರದಿಯ ಪ್ರಕಾರ, ಮನಮೋಹನ್ ಸಿಂಗ್ ನೇತೃತ್ವದ ಸರಕಾರದ ಅವಧಿಯಲ್ಲಿ ಭಾರತವು ಶೇ. 10.08 ಆರ್ಥಿಕ ಪ್ರಗತಿ ಸಾಧಿಸಿತ್ತಂತೆ. ಮೋದಿ ನೇತೃತ್ವದಲ್ಲಿ 4 ವರ್ಷದ ಆಡಳಿತದಲ್ಲಿ ಸರಾಸರಿ ಶೇ. 7.3ರಷ್ಟು ಆರ್ಥಿಕ ಅಭಿವೃದ್ಧಿಯಾದರೆ, ಯುಪಿಎ ಸರಕಾರದ ಎರಡು ಅವಧಿಯಲ್ಲಿ ಶೇ. 8.1 ಸರಾಸರಿ ಅಭಿವೃದ್ಧಿಯಾಗಿದೆ…

1988-89ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಆಡಳಿತದ ವೇಳೆ ಭಾರತ 10.20% ಜಿಡಿಪಿ ಬೆಳವಣಿಗೆ ಸಾಧಿಸಿದ್ದೇ ಇದೂವರೆಗಿನ ಗರಿಷ್ಠ ಮಟ್ಟವಾಗಿದೆ. 2007-08ರಲ್ಲಿ 10.23 ಶೇಕಡಾ ಜಿಡಿಪಿ ದರ ಇದ್ದರೆ, 2010-11ರಲ್ಲಿ 10.78 ಶೇಕಡ ಜಿಡಿಪಿ ದರ ಆಗಿತ್ತು. ಆದರೆ ಮೋದಿ ಆಡಳಿತದಲ್ಲಿ ಈವರೆಗೆ ಆಗಿರುವ ಅತಿಹೆಚ್ಚು ಆರ್ಥಿಕ ಬೆಳವಣಿಗೆ 7.06 ಆಗಿದೆ. ಇದು 2015-16ರಲ್ಲಿ ನಡೆದಿತ್ತು ಎಂದು ವರದಿ ವಿವರಿಸಲಾಗಿದೆ. ಯುಪಿಎ ಅವಧಿಯ ಆಡಳಿತದ ಬಗ್ಗೆ ಸದಾ ಟೀಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡಕ್ಕೆ ಈ ಅಂಕಿ-ಅಂಶಗಳ ಮೂಲಕ ಕಾಂಗ್ರೆಸ್ ಪ್ರತಿಟೀಕೆಯ ಸುರಿಮಳೆ ಗೈಯುತ್ತಿದೆ. ಅಂಕಿ-ಅಂಶಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡ, ಅಂಕಿ-ಅಂಶಗಳೇ ಸರಿಯಿಲ್ಲ ಎಂದು ವಾದಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top