ಸಮಾಚಾರ

ಮೊಬೈಲ್ ನೀರಲ್ಲಿ ಬಿದ್ರೆ ಚಿಂತೆ ಬಿಟ್ಟು ಹೀಗೆ ಮಾಡಿ

ಸೆಲ್ ಫೋನ್, ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಅಥವಾ ಟೆಲಿಫೋನ್ ಅನೇಕ ಹೆಸರು ಹೊಂದಿರೋ ಈ ಸಾಧನದ ಮುಂದೆ ನಾವು ಸೋತಿದ್ದೇವೆ, ಊಟ ಹಾಗು ನಿದ್ದೆ ಬಿಟ್ಟೆವು ಮೊಬೈಲ್ ಬಿಡಲು ಆಗುವುದೇ ಇಲ್ಲ. ಮೊಬೈಲ್‌ಗಳು ನೀರಲ್ಲಿ ಬೀಳೋದು ಸರ್ವೇ ಸಾಮಾನ್ಯ. ಎಷ್ಟೋ ಜನ ನೀರಲ್ಲಿ ಮೊಬೈಲ್ ಕೆಡವಿ ಅದನ್ನು ಮೂಲೆಗೆ ತಳ್ಳುತ್ತಾರೆ. ಮೊಬೈಲ್ ಎಲೆಕ್ಟ್ರಾನಿಕ್ ಸಾಧನ ಆಗಿರುವುದರಿಂದ ನೀರು ಬಿದ್ದ ತಕ್ಷಣ ಮೊಬೈಲ್ ಒಳಗಿನ ಹಾರ್ಡ್‌ವೇರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಮೊಬೈಲ್ ನೀರಲ್ಲಿ ಬಿದ್ರೆ ಏನು ಮಾಡಬೇಕು ಏನು ಮಾಡಬಾರದು ನೋಡೋಣ ಬನ್ನಿ.

ಹೇರ್ ಡ್ರೈಯರ್‌ ನಿಂದ ಮೊಬೈಲ್ ಒಣಗಿಸಬೇಡಿ:

ಹೇರ್ ಡ್ರೈಯರ್ ಉಷ್ಣಾಂಶ ತುಂಬಾ ಬಿಸಿ ಆಗಿರುತ್ತದೆ. ಇದರಿಂದ ಸ್ಮಾರ್ಟ್‌ ಫೋನ್‌ ನಲ್ಲಿರುವ ದುರ್ಬಲ ಅಥವಾ ಮೆದು ಎಲೆಕ್ಟ್ರಾನಿಕ್ ಪಾರ್ಟ್ಸ್ ಗಳಿಗೆ ಹಾನಿಯಾಗುತ್ತದೆ. ಅಲ್ಲದೆ, ನಿಮ್ಮ ಸ್ಮಾರ್ಟ್‌ಫೋನ್‌ನ್ನು ಬಿಸಿ ಒವನ್ ಅಥವಾ ರೇಡಿಯೇಟರ್‌ನಲ್ಲಿ ಇಡಲೇಬೇಡಿ

ವಾರಂಟಿ ಕ್ಲೇಮ್ ಗಾಗಿ ಸುಳ್ಳು ಹೇಳಬೇಡಿ:
ಮೊಬೈಲ್ ನಲ್ಲಿ ಇಮ್ಮರ್ಶನ್ ಸೆನ್ಸಾರ್ ಇರುತ್ತದೆ, ನೀರು ಅಥವಾ ದ್ರವ್ಯದಲ್ಲಿ ಮುಳುಗಿದಾಗ ಇದರ ಬಣ್ಣ ಬದಲಾಗುತ್ತದೆ.

 

ಚಾರ್ಜರ್, ಯುಎಸ್‌ಬಿ, ಹೆಡ್‌ಫೋನ್ ಕನೆಕ್ಟ್ ಮಾಡಬೇಡಿ:
ಮೊಬೈಲ್ ನೀರಲ್ಲಿ ಬಿದ್ದಾಗ ಚಾರ್ಜ್ ಮಾಡಬೇಡಿ, ಯುಎಸ್‌ಬಿ, ಹೆಡ್‌ಫೋನ್ ಕೂಡ ಪ್ಲಗ್ ಮಾಡಬೇಡಿ ಇದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುತ್ತದೆ.

 

ಕೂಡಲೇ ಸ್ವಿಚ್ ಆನ್ ಮಾಡಬೇಡಿ:
ಇದರಿಂದ ಮೊಬೈಲ್ ನಲ್ಲಿ ಶಾರ್ಟ್ ಸರ್ಕ್ಯೂಟ್‌ ಆಗುವ ಸಾಧ್ಯತೆ ಇರುತ್ತದೆ.

 

 

ಅಕ್ಕಿಯಲ್ಲಿ ಇಡಬಹದು:

ಮೊಬೈಲ್ ತೇವಾಂಶವನ್ನು ಅಕ್ಕಿ ಹೀರಿಕೊಳ್ಳಲು ಸಹಾಯಕಾರಿಯಾಗುತ್ತೆ. ಆದರೆ ಅಕ್ಕಿಯ ಧೂಳು ಮೊಬೈಲ್ ಸೇರದಂತೆ ನೋಡಿಕೊಳ್ಳಿ.

ಸೂರ್ಯನ ಕಿರಣದಿಂದ ಒಣಗಿಸಬಹುದು:

ಮೊಬೈಲ್ ಪಾನ್ ಓಪನ್ ಮಾಡಿ ಸೂರ್ಯನ ಕಿರಣಕ್ಕೆ ಮೊಬೈಲ್ ಇಡೀ ಇದರಿಂದ ಮೊಬೈಲ್ ತೇವಾಂಶ ಬೇಗನೆ ಒಣಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top