ಸಮಾಚಾರ

ನೋಡಿ ಆಶ್ಚರ್ಯ ಇಲ್ಲಿ ಆಲಿಕಲ್ಲು ಮಳೆಯಲ್ಲ ಕೇಸರಿ ಹಾಗೂ ಚಂದನದ ಮಳೆಯಾಗುತ್ತಂತೆ

ಭಾರತವು ವಿಸ್ಮಯಗಳಿಂದ ಕೂಡಿರುವ ದೇಶವಾಗಿದೆ . ಹಲವಾರು ವಿಭಿನ್ನ ಘಟನೆಗಳು ಇಲ್ಲಿ ನಡೆಯುತ್ತವೆ. ಇನ್ನೂ ತೀರ್ಥ ಸ್ಥಳಗಳ ಬಗ್ಗೆ ಮಾತನಾಡಿದರೆ ಈ ಸ್ಥಳಗಳು ಕೇವಲ ಪವಿತ್ರ ಮಾತ್ರವಲ್ಲ, ಬದಲಾಗಿ ಚಮತ್ಕಾರದಿಂದಲೂ ಕೂಡ ಕೂಡಿದೆ. ಇಂದು ನಾವು ನಿಮಗೆ ಒಂದು ಮಂದಿರದ ಬಗ್ಗೆ ತಿಳಿಸುತ್ತಿದ್ದೇವೆ. ಅದು ತನ್ನ ಚಮತ್ಕಾರದಿಂದ ಖ್ಯಾತಿ ಗಳಿಸಿದೆ. ಇಲ್ಲಿ ಪ್ರತಿ ಸಪ್ತಮಿ ಮತ್ತು ಚೌದಶ್‌ (14 ನೇ ದಿನ)ದಿನದಂದು ಕೇಸರಿ ಮತ್ತು ಶ್ರೀಗಂಧದ ಮಳೆ ಆಗುತ್ತದೆ ಎಂದು ತಿಳಿದು ಬಂದಿದೆ.

ಈ ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ಇಲ್ಲಿ ಕೇಸರಿ ಹಾಗೂ ಚಂದನ ಮಳೆ ಆಗುತ್ತೆ. ಅಷ್ಟೇ ಅಲ್ಲದೆ ಮುತ್ತಿನ ಮಳೆ ಕೂಡ ಆಗುತ್ತದೆ. ಇದಕ್ಕೆ ಹಲವಾರು ಜನರು ಸಾಕ್ಷಿ ಆಗಿದ್ದಾರೆ. ಈ ವಿಶೇಷ ಕ್ಷೇತ್ರ ಎಲ್ಲಿದೆ. ಹಾಗೂ ಯಾವಾಗ ಕೇಸರಿ , ಚಂದನ ಮಳೆಯಾಗುತ್ತದೆ ಹಾಗಾದ್ರೆ ಈ ಕ್ಷೇತ್ರ ಎಲ್ಲಿದೆ ನೋಡೋಣ ಬನ್ನಿ.

 

 

 

ಮಧ್ಯಪ್ರದೇಶ ಹಾಗು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ಇರುವ ಮುಕ್ತಾಗಿರಿ ತೀರ್ಥ ಕ್ಷೇತ್ರದಲ್ಲಿ ಕೇಸರಿ ಮತ್ತು ಶ್ರೀಗಂಧದ ಮಳೆಯಾಗುತ್ತದೆ ಎಂದು ತಿಳಿದು ಬಂದಿದೆ. ಈ ತಾಣವು ಮಧ್ಯಪ್ರದೇಶ ರಾಜ್ಯದ ಬೇತುಲ್‌ ಜಿಲ್ಲೆಯಲ್ಲಿರುವ ಬೇಂಸ್‌ದೇಹಿಯ ಥಪೋಡಾ ಹಳ್ಳಿಯಲ್ಲಿದೆ. ಈ ಸ್ಥಾನವನ್ನು ಮುಕ್ತಿಗಿರಿ ಎಂದು ಕೂಡ ಕರೆಯುತ್ತಾರೆ ಯಾಕೆಂದರೆ ಇಲ್ಲಿ ಜೈನ ಮುನಿಗಳು ಆತ್ಮ ಸಾಧನೆ ಮಾಡಿ, ಸರ್ವ ಕರ್ಮ ಬಂಧನಗಳಿಂದ ಮುಕ್ತಿ ಪಡೆದು ಇಲ್ಲಿ ಮೋಕ್ಷ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಶತಮಾನಗಳ ಹಿಂದೆ ಇಲ್ಲಿ ಜೈನ ಮುನಿಯೊಬ್ಬರು ಧ್ಯಾನ ಮಾಡುತ್ತಿದ್ದರು. ಆ ಸಂಧರ್ಭದಲ್ಲಿ ಅವರ ಮುಂದೆ ಒಂದು ಸತ್ತ ಕಪ್ಪೆ ಬಂದು ಬಿತ್ತು. ಮುನಿ ಕಣ್ಣು ತೆರೆದು ಕಪ್ಪೆಯ ಕಿವಿಯಲ್ಲಿ ಣಮೋಕಾರ್‌ ಮಂತವನ್ನು ಪಟನೆ ಮಾಡಿದರು. ನಂತರ ಆ ಕಪ್ಪೆಗೆ ಜೀವ ಬಂದು ದೇವತೆಯಾಗಿ ಮೋಕ್ಷ ಪ್ರಾಪ್ತಿ ಮಾಡಿತ್ತು ಎನ್ನಲಾಗಿದೆ. ಇದೇ ದಿನವನ್ನು ಇಲ್ಲಿ ನಿರ್ವಾಣ ದಿವಸ ಎಂದು ಕರೆಯುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top