ಮನೋರಂಜನೆ

ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆ ಬೊಂಬಾಟ್ ಟಿಪ್ಸ್ ಕೊಟ್ಟಿದ್ದಾರೆ ನಟಿ ನಮಿತಾ.

ತೂಕವನ್ನು ಇಳಿಸಿಕೊಳ್ಳಬೇಕು ಎಂದು ಕೊರಗುತ್ತಿರುವ ದಡೂತಿ ದೇಹಿ ವ್ಯಕ್ತಿಗಳಿಗೆ ಬಹುಭಾಷಾ ನಟಿ ನಮಿತಾ ಟಿಪ್ಸ್ ನೀಡಿದ್ದಾರೆ. ಒಂದು ಕಾಲದಲ್ಲಿ ತಮ್ಮ ಸ್ಥಿಗ್ದ ಸೌಂದರ್ಯ ಮತ್ತು ಮಾದಕತೆಯಿಂದಲೇ ಪಡ್ಡೆಹುದರ ನಿದ್ದೆಗೆ ಕಣ್ಣ ಹಾಕಿದ್ದ ಈ ಬೆಡಗಿ ನೋಡ ನೋಡುತ್ತಾ ದಪ್ಪ ಆಗಿ ಹೋದರು.. ದೇಹ ಗಾತ್ರ ಹೆಚ್ಚಾದಂತೆ ನಮಿತಾ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕೂಡ ಅಷ್ಟೇ ವೇಗವಾಗಿ ಕಡಿಮೆಯಾಗಿತ್ತು.. ಆದರೆ ಸದ್ಯ ತನ್ನ ದೇಹದ ತೂಕ ಇಳಿಸಿಕೊಂಡಿರುವ ನಮಿತಾ ನೋಡುವವರನ್ನು ಹುಬ್ಬೇರುವಂತೆ ಮಾಡುತ್ತಿದ್ದಾಳೆ.

 

 

ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದ ನಮಿತಾ ಮದುವೆಯಾದ ನಂತರ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ.. ಕೇವಲ ಐದು ತಿಂಗಳಿನಲ್ಲೇ ಹತ್ತು ಕೆಜಿಯಷ್ಟು ತೂಕ ಇಳಿಸಿಕೊಂಡಿರುವ ನಮಿತಾ ಅದಕ್ಕಾಗಿ ಅವರು ತುಂಬಾ ಇಷ್ಟ ಪಟ್ಟು ಚಪ್ಪರಿಸಿಕೊಂಡು ತಿನ್ನುತ್ತಿದ್ದ ಮಾಂಸಾಹಾರ ಊಟ ಬಿಟ್ಟು ಕೇವಲ ಸಸ್ಯಾಹಾರವನ್ನೇ ಸೇವಿಸುತ್ತಿದ್ದರಂತೆ. ಕೇವಲ ಡಯಟ್ ಮಾತ್ರವಲ್ಲದೆ ಅದಕ್ಕೆ ತಕ್ಕ ವ್ಯಾಯಾಮಗಳನ್ನು ಕೂಡ ನಿಯಮಿತವಾಗಿ ಮಾಡುತ್ತಿದ್ದಾರಂತೆ. ಹಾಗಾಗಿ ಅವರು 10 ಕೆಜಿ ತೂಕ ಕರಗಿಸಿಕೊಂಡಿದ್ದಾರೆ.

ಐದು ತಿಂಗಳಿನ ದಡೂತಿ ದೇಹದ ಫೋಟೋ ಮತ್ತು ಈಗ ತೂಕ ಕಡಿಮೆಯಾದ ಫೋಟೋ ಎರಡನ್ನು ಕೂಡ ತಮ್ಮ ಶೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ತೂಕ ಇಳಿಸಿಕೊಳ್ಳುವವರೆಗೆ ಒಂದೊಳ್ಳೆ ಟಿಪ್ಸ್ ನೀಡಿದ್ದಾರೆ.. ಒಂದು ರೇಂಜಿಗೆ ತೂಕ ಕಡಿಮೆ ಮಾಡಿಕೊಂಡಿರುವ ನಮಿತಾಗೆ ಒಂದಷ್ಟು ಸಿನಿಮಾ ಆಫರುಗಳು ಬರುತ್ತಿವೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top