ಮನೋರಂಜನೆ

‪ಸೂರಿ-ಧನಂಜಯ ಕಾಂಬಿನೇಶನ್‌ ಚಿತ್ರಕ್ಕೆ ನಾಯಕಿಯಾದ DYSP ಉಮೇಶ್‌ ಪುತ್ರಿ.

ಶಿವಣ್ಣ ಅಭಿನಯದ ಟಗರು ಚಿತ್ರದ ಮೂಲಕ ಒಂದು ಪರಿಪೂರ್ಣವಾದ ಗೆಲುವನ್ನು ದಾಖಲಿಸಿರುವ ರಾ ಸಿನಿಮಾಗಳ ಸರದಾರ ಸುಕ್ಕಾ ಸೂರಿ ತಮ್ಮ ಮುಂದಿನ ಚಿತ್ರದ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ. ಹಾಗೆಯೇ ಟಗರು ಚಿತ್ರದಲ್ಲಿ ಸೂರಿ ರೂಪಿಸಿರೋ, ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸೂರಿ-ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಕಮಾಲ್ ಮಾಡಲು ಸಜ್ಜಾಗುತ್ತಿದೆ.

 

 

ಚಿತ್ರರಂಗದಲ್ಲಿ ಚಿತ್ರವಿಚಿತ್ರ ಟೈಟಲ್ ಗಳಿಗೇನೇ ಫೇಮಸ್ ಆಗಿರುವ ಸೂರಿ ತಮ್ಮ ಮತ್ತು ಧನಂಜಯ್ ಕಾಂಬಿನೇಷನ್ನಿನ ಚಿತ್ರಕ್ಕೆ ’ಪಾಪ್‍ಕಾರ್ನ್ ಮಂಕಿ ಟೈಗರ್’.ಎಂಬ ಶೀರ್ಷಿಕೆಯಿಟ್ಟಿದ್ದಾರೆ.ಪಾಪ್‍ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಟಗರು ಚಿತ್ರವನ್ನು ನಿರ್ಮಾಣ ಮಾಡಿದ್ದ ಕೆಪಿ ಶ್ರೀಕಾಂತ್ ಅವರೇ​ ಬಂಡವಾಳ ಹಾಕ್ತಿದ್ದಾರೆ. DYSP KS ಉಮೇಶ್ ರಚಿಸಿರುವ ಕತೆಗೆ ಸೂರಿ ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಸ್ಕ್ರಿಪ್ಟ್ ಸಂಬಂದಿಸಿದ ಕೆಲಸ ಕಾರ್ಯಗಳು ಚಾಲ್ತಿಯಾಗಿವೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದು ಶೇಖರ್ ಎಸ್ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರುತ್ತದೆ.

ಈ ಚಿತ್ರಕ್ಕೆ ಇದೀಗ ನಾಯಕಿ ಆಯ್ಕೆ ಕೂಡ ಫೈನಲ್ ಆಗಿದ್ದು ಚಿತ್ರದ ಕಥೆ ಬರೆದಿರುವ DYSP ಕೆಎಸ್ ಉಮೇಶ್ ಅವರ ಪುತ್ರಿಯೇ ಧನಂಜಯ್’ಗೆ ಹೀರೋಯಿನ್ ಆಗಿದ್ದಾರೆ.. ಅಂದಹಾಗೆ ಸದರಿ ಚಿತ್ರದಲ್ಲಿ ಶುದ್ಧಿ ಖ್ಯಾತಿಯ ನಿವೇದಿತಾ ಮತ್ತು ನವನಟಿ ಅಮೃತಕೂಡ ನಟಿಸುತ್ತಿದ್ದಾರೆ. ‘ಶ್ರೀನಿವಾಸ’ ಎಂಬ ಪಾತ್ರದಲ್ಲಿ ಧನಂಜಯ್ ಮತ್ತು ‘ದೇವಿಕಾ’ ಎಂಬ ಪಾತ್ರದಲ್ಲಿ ನಿವೇದಿತಾ ಕಾಣಿಸಿಕೊಂಡರೇ ‘ನಂದಿನಿ’ ಮತ್ತು ‘ಗಿರಿಜಾ’ ಎಂಬ ಪಾತ್ರಗಳನ್ನೂ ಕ್ರಮವಾಗಿ ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ನಿರ್ವಹಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top