ಮನೋರಂಜನೆ

ವೈರಲ್ ಆಯ್ತು ರಾಧಿಕಾ ಪಂಡಿತ್ ಬೇಬಿ ಬಂಪ್‌ ಫೋಟೋ

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.. ಸರಿಸುಮಾರು ಒಂದೂವರೆ ವರ್ಷದ ಹಿಂದೆ ಇಬ್ಬರೂ ಸಾಂಸಾರಿಕ ಜೀವನಕ್ಕೆ ಧುಮುಕಿದ್ದಾರಲ್ಲಾ, ಆಗಿನಿಂದಲೂ ಇವರಿಬ್ಬರಿಗೂ ಅಭಿಮಾನಿಗಳಿಂದ ಹಿಡಿದು ಆಪ್ತರು ಕೇಳುತ್ತಿದ್ದುದು ಒಂದೇ ಪ್ರಶ್ನೆ ”ಮಗು ಯಾವಾಗ?”.. ಪ್ರತಿ ಸಲ ಈ ಪ್ರಶ್ನೆಗೆ ಕೆಳಿದಾಗಲೆಲ್ಲ ನಗುತ್ತಲೇ ‘ಸದ್ಯದಲ್ಲೇ’ ಎಂದು ಉತ್ತರಿಸುತ್ತಿದ್ದ ಯಶ್ ಜೋಡಿ ಕೊನೆಗೂ ಸಿಹಿ ಸುದ್ದಿ ನೀಡಿ ವಾರಗಳೇ ಕಳೆದಿದೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾ ಪಂಡಿತ್ ಗರ್ಭಿಣಿ ಅವತಾರದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು, ಅದಕ್ಕೀಗ ತೆರೆ ಬಿದ್ದಿದೆ.

 

 

ಇತ್ತೀಚೆಗಷ್ಟೆ ತಾವು ಪೋಷಕರಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದ ಯಶ್ ದಂಪತಿ, ಇದೀಗ ಫೇಸ್ಬುಕ್ ನಲ್ಲಿ ಗರ್ಭಿಣಿ ರಾಧಿಕಾ ಫೋಟೊ ಶೇರ್ ಮಾಡಿದ್ದಾರೆ. ಆಗಸ್ಟ್ 12, 2016ರಲ್ಲಿ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು,, ಯಶ್ ಹಾಗೂ ರಾಧಿಕಾ ಜೋಡಿ ಬ್ಲೂ ಹಾಗೂ ಗೋಲ್ಡನ್‌ ಕಲರ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

View this post on Instagram

 

Waiting for rocking princess👸👑 @iamradhikapandit @its.me.sahana @mangalapandit @krishna_prasad_pandit #nimmarp #iamradhikapandit

A post shared by Radhika Pandit (@radhika_yash_) on

ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಯಶ್​ರೊಂದಿಗೆ ಫೋಸ್​ ನೀಡಿರುವ ಈ ಫೋಟೋ ಶೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಗರ್ಭಿಣಿ​ ಆದ ನಂತರ ಇದೇ ಮೊದಲ ಬಾರಿ ತಮ್ಮ ಉಬ್ಬಿದ ಹೊಟ್ಟೆಯೊಂದಿಗಿನ ಫೋಟೋ ಶೇರ್​ ಮಾಡಿರುವ ರಾಧಿಕಾ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top