fbpx
ಸಮಾಚಾರ

ರಾಯರ ಜೀವನದ ಈ 8 ಪ್ರಸಂಗಗಳು ನಿಮಗೆ ಗೊತ್ತಾದ್ರೆ ರಾಘವೇಂದ್ರ ಸ್ವಾಮಿಗಳ ಮೇಲೆ ಭಕ್ತಿ ಹಾಗೂ ಮಂತ್ರಾಲಯ ಕ್ಷೇತ್ರದ ಮಹಿಮೆ ತಿಳಿಯುತ್ತೆ

ಮಂಚಾಲೆ ಊರು:
ಮಂಚಾಲೆ ಆಂಧ್ರಪ್ರದೇಶರಾಜ್ಯದಲ್ಲಿ ಇರುವ ಒಂದು ಪುಟ್ಟ ಊರು. ಆದರೆ, ಈ ಸ್ಥಳ ಗುರುರಾಯರ ಕೃಪೆಯಿಂದ ವಿಶ್ವಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಮಂಚಾಲೆ ಎಂಬುದು ಮಂತ್ರಾಲಯ ಕ್ಷೇತ್ರಕ್ಕಿದ್ದ ಹಿಂದಿನ ಹೆಸರು. ಈ ಪವಿತ್ರ ಪುಣ್ಯಸ್ಥಳದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಕಲಿಯುಗದ ಕಾಮಧೇನು ಗುರುರಾಘವೇಂದ್ರರು ಸಜೀವ ಬೃಂದಾವನಸ್ಥರಾಗಿದ್ದಾರೆ.

ಮಂಚಾಲೆ ಹಿನ್ನಲೆ:
ಹಿಂದೆ ಒಮ್ಮೆ ನವಾಬನು ದಿವಾನ್ ವೆಂಕಣ್ಣ ರವರ ಮೂಲಕ ರಾಘವೇಂದ್ರ ಸ್ವಾಮಿ ಮಹಿಮೆ ಬಗ್ಗೆ ಕೇಳಿದ್ದ. ಆದ್ರೆ ನಂಬಿಕೆ ಬರದೇ ಒಂದು ಪರೀಕ್ಷೆ ಮಾಡಲು ನಿರ್ಧಾರ ಮಾಡುತ್ತಾನೆ. ಅದರಿಂದ ನವಾಬಂಗೆ ರಾಯರ ದೈವಿಕ ಗುಣ ಗೊತ್ತಾಗತ್ತೆ. ರಾಯರನ್ನ ಪರೀಕ್ಷೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅಂತ ಅವ್ರಿಗೆ ಬೇಕಾದಷ್ಟು ಊರುಗಳ್ನ ತೆಗೊಳ್ಳೋಕೆ ಹೇಳ್ತಾನೆ. ರಾಯರು ಮೊದಲು ಬೇಡ ಅಂದ್ರೂ ಅವನ ಒತ್ತಾಯಕ್ಕೆ ಕೊನೆಗೆ ತುಂಗಭದ್ರಾ ನದಿ ದಡದಲ್ಲಿದ್ದ “ಮಂಚಾಲೆ” ಯನ್ನ ಕೇಳ್ತಾರೆ. ಅದೊಂದು ಬರಡು ಭೂಮಿ ಆಗಿರುತ್ತೆ. ಬೇರೆ ಸ್ಥಳ ತೆಗೊಳ್ಳೋಕೆ ಕೇಳ್ಕೊಂಡ್ರೂ ರಾಯರು ಒಪ್ಪಲ್ಲ. ಒಂದೊಳ್ಳೆ ದಿನ ನೋಡಿ ರಾಯರು ಮಂಚಾಲೆ ಪ್ರವೇಶಿಸಿ ಮಂಚಾಲಮ್ಮನಿಗೆ ಪೂಜೆ ಮಾಡಿ ಅಲ್ಲೇ ಬೃಂದಾವನಸ್ಥರಾಗಕ್ಕೆ ಅನುಮತಿ ಕೇಳ್ತಾರೆ.

ಮಂಚಾಲಮ್ಮ:
ಗುರುಗಳು ಎಂದರೆ ಮಂತ್ರಾಲಯದ ರಾಘವೇಂದ್ರ ಎಂದು ಹೇಳುವ ಭಕ್ತರು, ಸಜೀವವಾಗಿ ಬೃಂದಾವನದಲ್ಲಿ ತಪೋನಿರತರಾಗಿರುವ ಗುರುಗಳ ಪಾದಧೂಳಿನಿಂದ ಪಾವಿತ್ಯರ ಆಗಿರುವ ಈ ಕ್ಷೇತ್ರಕ್ಕೆ ಬಂದು ಪಾವನರಾಗುತ್ತಾರೆ. ಜಾತಿ-ಮತ-ಬೇಧಗಳಿಲ್ಲದ ಈ ಸ್ಥಳಕ್ಕೆ ಆಗಮಿಸುವ ಭಕ್ತಕೋಟಿ ತುಂಗಾನದಿಯಲ್ಲಿ ಮಿಂದು ಮಂಚಾಲಮ್ಮನ ದರ್ಶನವನ್ನು ಮಾಡಿ, ಗುರುರಾಯರ ದರ್ಶನ ಮಾಡಿ ಧನ್ಯಭಾವದಿಂದ ತಮ್ಮೂರಿಗೆ ಮರಳುತ್ತಾರೆ.

 

 

 

 

ಸೀತೆಯನ್ನು ಹುಡುಕುತ್ತ ಶ್ರೀರಾಮ ಮಂಚಾಲೆಗೆ ಬಂದಿದ್ದು:
ಶ್ರೀ ರಾಘವೇಂದ್ರ ಸ್ವಾಮಿಗಳು ವೆಂಕಣ್ಣನನು ಕಡೆದು ಅಲ್ಲಿ ಒಂದು ಕಲ್ಲು ತೋರಿಸಿದ್ದರು. ಕೃತಯುಗದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕುತ್ತ ಬಂದಾಗ ಆ ಕಲ್ಲಿನ ಮೇಲೆ ಕೆಲಹೊತ್ತು ಕುಳಿತುಕೊಂಡಿದ್ದರು ಎಂದು ತಿಳಿಸಿದ್ದರು.

ಬೃಂದಾವನ ಪ್ರವೇಶ:
ಕೃತಯುಗದಲ್ಲಿ ಶ್ರೀರಾಮನು ಕುಳಿತಿದ್ದ ಕಪ್ಪು ಬಣ್ಣದ ಕಲ್ಲಿನಿಂದಲೇ ಬೃಂದಾವನ ಮಾಡಿಸಿಕೊಂಡು ಜೀವಂತವಾಗಿ ರಾಯರು ಪ್ರವೇಶ ಮಾಡಿದರು ಎಂದು ತಿಳಿದು ಬಂದಿದೆ. ರಾಯರಿಗೂ ಮೊದಲು ಮೊದ್ಲು ವಾದಿರಾಜ ತೀರ್ಥ ಒಬ್ಬರೇ ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

 

 

ಶಿಷ್ಯನಿಗೆ ದಾರಿಮಾಡಿಕೊಟ್ಟ ನದಿ:
ಅಪ್ಪಣ್ಣ ಅವರು ರಾಯರ ಶಿಷ್ಯ ಆಗಿದ್ದರು. . ರಾಯರ ಬಗ್ಗೆ ಹೆಚ್ಚಿನ ಮಂತ್ರ, ಸ್ತೋತ್ರಗಳ್ನ ಇವರೇ ಬರೆದಿದ್ದಾರೆ. ರಾಯರು ಬೃಂದಾವನ ಸೇರುವ ದಿನ ಇವರು ನದಿ ಆಚೆ ಇರುತ್ತಾರೆ. ಸಮಯಕ್ಕೆ ಸರಿಯಾಗಿ ಮಂಚಾಲೆಗೆ ಬರಲು ಸಧ್ಯ ಆಗುವುದಿಲ್ಲ. ಆಗ ಶ್ರೀ ಪೂರ್ಣಬೋಧ ಗುರು ತೀರ್ಥ ಪಯೋಬ್ಧಿ ಪಾರಾ” ಸ್ತೋತ್ರ ರಚನೆ ಮಾಡುತ್ತಾರೆ. ಕೂಡಲೇ ರಾಯರ ಕೃಪೆಯಿಂದ ತುಂಗಭದ್ರಾ ನದಿ ಇಬ್ಬಾಗವಾಗಿ ಇವರಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿದು ಬಂದಿದೆ.

ಕೊನೆಯ ಸಾಲು ಹೇಳಿದ ರಾಯರು:
ಆದರೂ ಕೂಡ ಅಪ್ಪಣ್ಣ ಮಂಚಾಲೆಗೆ ಬರುವ ಹೊತ್ತಿಗೆ ರಾಯರು ಮಂಚಾಲೆ ಪ್ರವೇಶ ಮಾಡಿ ಕೊನೆಯ ಕಲ್ಲು ಜೋಡಿಸಿ ಆಗಿರುತ್ತದೆ. ಆಗ ಅಪ್ಪಣ್ಣ ದುಃಖಭರಿತನಾಗಿ ಕಣ್ಣೀರಿಡುತ್ತಾನೆ. ಅಪ್ಪನ ಒಣಗಿನ ಗಂಟಲಿನಿಂದಲೇ “ಕೀರ್ತಿರ್ ದಿಗ್ವಿಜಿತಾ ವಿಭೂತಿರತುಲಾ” ಸ್ತೋತ್ರ ಹೇಳುತ್ತಾರೆ. ಆದರೆ ಕೊನೆ ಸಾಲು ಹೇಳಲು ಅಪ್ಪಣ್ಣನಿಗೆ ಆಗುವುದಿಲ್ಲ. ಆಗ ಬೃಂದಾವನ ಒಳಗಿನಿಂದ “ಸಾಕ್ಷಿ ಹಯ ಸ್ಯೋತ್ರ ಹೀ” ಅನ್ನೋ ಧ್ವನಿ ಬರುತ್ತದೆ. ಇದರ ಅರ್ಥ “ಹಯಗ್ರೀವ ದೇವತೆ ಅಪ್ಪಣ್ಣಾಚಾರ್ಯರ ಮಾತಿಗೆಲ್ಲ ಸಾಕ್ಷಿ ಆಗಿದ್ದು, ಅದನ್ನೆಲ್ಲ ನಿಜ ಮಾಡ್ತಾನೆ.” ಎಂದು

ರಾಯರ ಮಹಿಮೆ:
ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾ ಇದ್ದರು. ಅವರಲ್ಲೊಬ್ಬ ಬಡ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top