ಸಮಾಚಾರ

ಸಲ್ಮಾನ್‌ ಹೆಸರಿನ ಒಂದು ಮೇಕೆಗೆ ಸಿಕ್ತು 5 ಲಕ್ಷ ರೂಪಾಯಿ

ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅಥವಾ ಈದ್ ಉಲ್ ಜುಹಾ ಜಗತ್ತಿನೆಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ನಿನ್ನೆ ಮುಸ್ಲಿಂ ಭಾಂದವರು ದೇಶದೆಲ್ಲೆಡೆ ವಿಶಿಷ್ಟವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು. ಇನ್ನು ಬಕ್ರೀದ್ ಹಬ್ಬ ಬಂತಂದ್ರೆ ಸಾಕು ಕುರಿ, ಮೇಕೆ, ಆಡುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಉಂಟಾಗುತ್ತದೆ.

ಒಂದು ಕುರಿಗೆ ಎಷ್ಟು ರೇಟ್ ಇರಬಹುದು ಹೇಳಿ? ನಿಮ್ಮ ಊಹೆಗೂ ನಿಲುಕದಂತೆ ದರ ಗಗನವನ್ನು ಮುಟ್ಟುತ್ತದೆ. ಅದರಲ್ಲೂ ಬನ್ನೂರು ಕುರಿ ಕೊಂಡವನೇ ಶ್ರೀಮಂತ ಎನ್ನಬಹುದು. 10 ಸಾವಿರ 20 ಸಾವಿರ ಲೆಕ್ಕದಲ್ಲಿ ಮೇಕೆಗಳು ಮಾರಾಟವಾಗುತ್ತದೆ. ಆದರೆ ಸಲ್ಮಾನ್ ಖಾನ್ ಅವರ ಹೆಸರಿನ ಮೇಕೆಯೊಂದು 5 ಲಕ್ಷ ಹಣಕ್ಕೆ ಮಾರಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ ಎಂದು ತಿಳಿದು ಬಂದಿದೆ.

 

 

ಮೊದಲೇ ಹೇಳಿದಂತೆ ಒಳ್ಳೆ ತುಪ್ಪಟವಾಗಿ ಇರೋ ಮೇಕೆ ಸಲ್ಮಾನ್ ಎಂದು ಹೆಸರಿಟ್ಟು ಮಾರುಕಟ್ಟೆಯಲ್ಲಿ ಇಟ್ಟಿದ್ದರು. ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈ ಮೇಕೆ ಕೊಳ್ಳಲು ನಾ ಮುಂದು ನೀ ಮುಂದು ಎಂದು ಜನ ಮುಗಿಬಿದ್ದರು. ಕೊನೆಗೆ ಮೇಕೆಯ ಮಾಲೀಕ ಈ ಮೇಕೆಯನ್ನು ಹರಾಜಿಗಿಟ್ಟ ಆಗ ಮೇಕೆ ಬರೋಬ್ಬರಿ 5 ಲಕ್ಷ ಹಣಕ್ಕೆ ಮಾರಾಟ ಆಗಿದೆ ಎಂದು ತಿಳಿದು ಬಂದಿದೆ. ಮೇಕೆಯನ್ನು ಬಹಳ ತಿಂಗಳಿನಿಂದ ಸಾಕಿ ಸಲುಹಿದ್ದ ಬಡ ರೈತ ಈತ ಸಂತೋಷನಾಗಿದ್ದಾನೆ ಎಂದು ತಿಳಿದು ಬಂದಿದೆ.

ಕೆಲವು ತಿಂಗಳ ಹಿಂದೆ ರಿಲೀಸ್ ಆಗಿದ್ದ ಸಲ್ಮಾನ್ ಅಭಿನಯದ ‘ರೇಸ್‌-3’ ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡದೇ ಇದ್ದರೂ, ಸಲ್ಲು ಅಭಿಮಾನಿಯೊಬ್ಬರು ತಮ್ಮ ಮೇಕೆಗೆ ಸಲ್ಮಾನ್ ಹೆಸರಿಟ್ಟಿದ್ದು, ಈ ಮೇಕೆ ಈಗ ಭಾರೀ ಬೆಲೆಗೆ ಮಾರಾಟ ಆಗಿ ಸುದ್ದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top