ಸಮಾಚಾರ

ಪ್ರತಿಯೊಬ್ಬ ಎಸ್.ಬಿ.ಐ. ಗ್ರಾಹಕರು ಈ ಅತಿ ಮುಖ್ಯ ಮಾಹಿತಿ ತಪ್ಪದೆ ಓದಿ

ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ, SBI ಮೈಸೂರು, ಹೈದರಾಬಾದ್, ಟ್ರಾವಂಕೋರೆ, ಜೈಪುರ ಹಾಗು ಪಟಿಯಾಲ ಬ್ಯಾಂಕ್ ವಿಲೀನ ಆಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಈಗ ಎಲ್ಲ ಬ್ಯಾಂಕ್ ಗಳು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ಕೊಡುತ್ತಿವೆ ಎಂದು ತಿಳಿದು ಬಂದಿದೆ. ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊಬೈಲ್ ಬ್ಯಾಂಕಿಂಗ್ ನಲ್ಲಿ ಹೊಸ ಫೀಚರ್ ಒಂದನ್ನು ಅಳವಡಿಸಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೊಬೈಲ್ ಅಪ್ಲಿಕೇಷನ್ ಗಳಿಗಾಗಿ ಮಲ್ಟಿಪಲ್ ಬಯೋಮೆಟ್ರಿಕ್ ವ್ಯವಸ್ಥೆ ಪರಿಚಯ ಮಾಡಲಿ SBI ನಿರ್ಧರಿಸಿದೆ ಎನ್ನಲಾಗಿದೆ. ಅಂದ್ರೆ ಎಸ್.ಬಿ.ಐ. ಅಪ್ಲಿಕೇಷನ್ ಮೂಲಕ ವ್ಯವಹಾರ ನಡೆಸುವ ವೇಳೆ ಬೆರಳಿನ ಗುರುತು, ಮುಖ ಗುರುತು ಅಥವಾ ಧ್ವನಿ ಗುರುತನ್ನು ನೀವು ಬಳಸಬಹುದಾಗಿದೆ. ಎಸ್.ಬಿ.ಐ., ಮೊಬೈಲ್ ವಾಲೆಟ್ ಮತ್ತು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ವ್ಯವಹಾರಕ್ಕೆ ಬಯೋಮೆಟ್ರಿಕ್ ಸಿಸ್ಟಂ ಜಾರಿಗೆ ತರುವ ಯೋಜನೆ ಮೇಲೆ ಕೆಲಸ ಮಾಡ್ತಿದೆ. ಸೂಕ್ತ ಸೇವೆ ನೀಡುವವರ ಹುಡುಕಾಟದಲ್ಲಿ ಎಸ್.ಬಿ.ಐ. ಇದೆ. ಈ ಸೇವೆ ಶುರು ಮಾಡುವ ಮೊದಲು ತಜ್ಞರ ಅಭಿಪ್ರಾಯವನ್ನು ಪಡೆಯಲಿದೆ ಎನ್ನಲಾಗಿದೆ.

 

 

ಈಗಾಗಲೇ 83 ಲಕ್ಷಕ್ಕೂ ಅಧಿಕ ಜನ ಎಸ್.ಬಿ.ಐ ಮೊಬೈಲ್ ಆಪ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ಬ್ಯಾಂಕಿಂಗ್ ನಲ್ಲಿ ಈ ಬಯೋಮೆಟ್ರಿಕ್ ವ್ಯವಸ್ಥೆ ಪರಿಚಯ ಮಾಡಿದ ಬಳಿಕ ಇದು ಇನ್ನಷ್ಟು ಗ್ರಾಹಕರನ್ನು ಆಕರ್ಷಣೆ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಇನ್ನೊಂದು ಎಸ್.ಬಿ.ಐ ಸುದ್ದಿ ಇದೆ, ಎಸ್.ಬಿ.ಐ ಹಳೆಯ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್ ಬದಲಾಗಿ ಈಗ ಡೆಬಿಟ್ ಕಾರ್ಡ್ ಕೊಡುತ್ತಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹೊಸ ತಂತ್ರಜ್ಞಾನದ ಕಾರ್ಡ್ ಸುರಕ್ಷಿತವಾಗಿರಲಿವೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top