fbpx
ದೇವರು

ಒಂದು ಚಿಕ್ಕ ಹರಕೆ ಹೊತ್ತರೆ ಸಾಕು ಎಂತ ಕಠಿಣ ಸಮಸ್ಯೆ ಆದ್ರೂ ಕ್ಷಣದಲ್ಲಿ ನಿವಾರಣೆ ಮಾಡುವ ಸಿದ್ದೇಶ್ವರ ಸ್ವಾಮಿ ಮಹಿಮೆ ಗೊತ್ತಾದ್ರೆ ಖಂಡಿತಾ ನೀವು ಈ ದೇವಸ್ಥಾನಕ್ಕೆ ಹೋಗ್ಬರ್ತೀರ

ಅಮೋಘ ಸಿದ್ದೇಶ್ವರ ಸ್ವಾಮಿ ಮಹಿಮೆಯ ನಿಗೂಡ ರಹಸ್ಯ .ನಾವು ಬಯಸುವುದು ಇಲ್ಲಿ ಆಶ್ಚರ್ಯಕಾರಿ ರೀತಿಯಲ್ಲಿ ನೆರವೇರುತ್ತದೆ.
ಈ ಸ್ಥಳಕ್ಕೆ ಹೋದರೆ ಅಲ್ಲಿ ನೆಲೆಸಿರುವ ಆ ದೈವದಿಂದ ಸರ್ವ ಸಮಸ್ಯೆಗಳಿಗೂ ಪರಿಹಾರ ದೊರೆತಂತೆಯೇ. ಅಲ್ಲಿ ನೀವು ಏನೇ ಬೇಡಿಕೊಂಡರೂ ಕೂಡ ನೆರವೇರುತ್ತದೆ. ಇದನ್ನು ಅಲ್ಲಿನ ಪ್ರತ್ಯಕ್ಷ ಸಾಕ್ಷಿಯಾಗಿ ಕಂಡವರು ಅಲ್ಲಿಗೆ ಅವರ ಅನುಭವಕ್ಕೆ ಬಂದಂತೆ ಪರಿಹಾರ ಆನ್ನುವುದಕ್ಕೆ ಮತ್ತೊಂದು ಹೆಸರೇ ಆ ಸ್ಥಳ. ಆ ಜಾಗಕ್ಕೆ ಹೋದರೆ ಬಗೆಹರಿಯದೆ ಇರುವ ಅದೆಂತಹ ಕಷ್ಟಕರವಾದ ಸಮಸ್ಯೆಗಳು ಕೂಡ ಸುಲಭವಾಗಿ ಪರಿಹಾರವಾಗಿವೆ. ಮುಕ್ತಿ ಕೊಡಿಸುವ ಕೆಲಸ ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ನೂರಾರು ವರ್ಷಗಳಿಂದ ಬೆಟ್ಟದಲ್ಲಿ ಕುಳಿತು ಎಲ್ಲರನ್ನೂ ಎಲ್ಲವನ್ನೂ ನೋಡುತ್ತಾ ಶರಣು ಎಂದು ನೊಂದು ಬಂದವರನ್ನು ಕಾಯುತ್ತಾ ಇದ್ದಾನೆ. ಅಲ್ಲಿ ದೇವರು ಹಾಗೂ ಭಕ್ತರ ನಡುವೆ ನಡೆಯುವುದು ಸುಪ್ತ ಮನಸ್ಸಿನ ಮಾತು ಕತೆ. ಬಂಡಾರದ ಒಡೆಯನಾಗಿರುವವನ ಸನ್ನಿಧಿಯಲ್ಲಿ ಬೇವಿನ ಮರಕ್ಕೆ ಕಟ್ಟಲಾಗಿರುವ ಕಟ್ಟಿಗೆಯ ತೊಟ್ಟಿಲನ್ನು ತೂಗುವುದೇ ಒಂದು ವಿಶೇಷ . ಈ ಎಲ್ಲಾ ವಿಚಾರಗಳನ್ನು ತಿಳಿದು ಆ ಜಾಗಕ್ಕೆ ಹೊರಟಾಗ ಅನೇಕ ವಿಷಯಗಳು ಅನಾವರಣವಾಯಿತು.

 

 

ಈ ದೇವಸ್ಥಾನ ಸರ್ವಧರ್ಮದವರು ಕೇಂದ್ರಬಿಂದು. ಇಂದೂ-ಮುಸ್ಲಿಂ ಸೇರಿದಂತೆ ಎಲ್ಲ ಜನಾಂಗದ ಸಮ್ಮೇಳನ ಇಲ್ಲಿ ಆಗುತ್ತದೆ. ಇದಕ್ಕೆ ಕಾರಣ ಇಲ್ಲಿ ನೆಲೆಸಿರುವ ದೈವ. ಕಳೆದ 800 ವರ್ಷಗಳಿಂದ ಈ ಸ್ವಾಮಿ ಪವಾಡಗಳನ್ನು ಮಾಡುತ್ತಿದ್ದಾನೆ ಕಷ್ಟ ಎಂದು ಬರುವವರಿಗೆ ತನ್ನ ಚಮತ್ಕಾರವನ್ನು ತೋರಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾನೆ. ಇಲ್ಲಿ ನೆಲೆಸಿರುವ ಮಹಾಪುರುಷನನ್ನು ಸಾವಿರಾರು ಮಂದಿ ಆರಾಧಿಸುತ್ತಾರೆ. ಅನೇಕ ಮನೆತನಗಳಿಗೆ ಮನೆದೇವರು ಆಗಿರುವ ಈ ದೈವ ಸಕಲ ಜೀವರಾಶಿಗಳಿಗೆ ಒಡೆಯನಾಗಿದ್ದಾನೆ.

ಇಲ್ಲಿಗೆ ಬಂದು ಹೊತ್ತ ಹರಕೆ ಎಂದಿಗೂ ಸುಳ್ಳಾಗಿಲ್ಲ ಎಂಬ ನಂಬಿಕೆ ಇಲ್ಲಿಗೆ ಬರುವ ಜನರದ್ದು. ಇದೆ ನಂಬಿಕೆಯಿಂದಲೇ ಅನಾದಿಕಾಲದಿಂದಲೂ ಬರುತ್ತಿರುವ ಭಕ್ತರು ಹರಕೆಯನ್ನು ಹೊರುತ್ತಾರೆ. ಹೀಗೆ ಭಕ್ತರ ಇಷ್ಟಾರ್ಥಗಳನ್ನು ಪವಾಡಗಳ ಮೂಲಕ ಈಡೇರಿಸುವ ಈ ದೈವದ ಚಮತ್ಕಾರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.ಭಂಡಾರ , ನಿಂಬೆಹಣ್ಣು ಪ್ರಿಯನಾಗಿರುವ ಈತನಿಗೆ ಭಕ್ತರು ಕ್ವಿಂಟಾಲ್ ಲೆಕ್ಕದಲ್ಲಿ ಬಂಡಾರ ಎರಚುವುದು ಇಲ್ಲಿ ಸಾಮಾನ್ಯ. ಕ್ರಮೇಣ ಇಲ್ಲಿ ಭಕ್ತರು ಈ ಸ್ವಾಮಿಯ ಬಳಿ ಸಮಸ್ಯೆಯನ್ನು ಹೇಳಿಕೊಂಡು ಹರಕೆ ಹೊರುತ್ತಾರೆ . ಅವರ ಹರಕೆಗಳನ್ನು ವರ್ಷ ತುಂಬುವುದರಲ್ಲಿ ತೀರಿಸಿಯೇ ತೋರಿಸುತ್ತಾನೆ ತನ್ನ ನಿಜ ಸ್ವರೂಪವನ್ನು ಈ ಭಂಡಾರದ ಒಡೆಯ. ಆ ಬಳಿಕ ಹೆಚ್ಚು ಪ್ರಚಲಿತಕ್ಕೆ ಬಂದು ಈ ಕ್ಷೇತ್ರ .ಈ ಸ್ವಾಮಿಗಳು ಮಾಡಿದ ಪವಾಡ ಒಂದೆರಡಲ್ಲ. ಇವರ ಬಳಿ ಬಂದು ಭಕ್ತಿಯಿಂದ ಕೇಳಿಕೊಂಡು ಬಂಡಾರ ಹಚ್ಚಿಕೊಂಡರೆ ಅಂದುಕೊಂಡ ಕೋರಿಕೆ ನೆರವೇರಿದಂತೆಯೇ.

ಅದರಲ್ಲೂ ಮುಖ್ಯವಾಗಿ ಮದುವೆಯಾಗಿ ಹತ್ತಾರು ವರ್ಷವಾದರೂ ಮಕ್ಕಳಿಲ್ಲದವರು ಈ ದೇವರ ಬಳಿ ಬಂದು ಬೇವಿನ ಮರಕ್ಕೆ ಕಟ್ಟಲಾಗಿರುವ ತೊಟ್ಟಿಲನ್ನು ಮೂರು ಬಾರಿ ಭಕ್ತಿಯಿಂದ ತೂಗಿ ದೇವರಲ್ಲಿ ಕೋರಿಕೊಳ್ಳುತ್ತಾರೆ. ದೇವರನ್ನು ಬೇಡಿಕೊಂಡವರಿಗೆ ಮಸುಕಾಗಿ ಕಾಣುತ್ತಿದ್ದ ಕಣ್ಣು ಈಗ ಕಾಣುವಂತಾಗಿದೆ. ನಡೆಯಲು ಆಗದೆ ಕಷ್ಟ ಪಡುತ್ತಿದ್ದವರು ಎದ್ದು ನಡೆಯುವಂತಾಗಿದ್ದು ಈ ಕ್ಷೇತ್ರದ ಮಹಿಮೆಯಿಂದಲೇ ಬಣ್ಣಿಸುತ್ತಾರೆ.ಪವಾಡಗಳನ್ನು ಪ್ರತ್ಯಕ್ಷವಾಗಿ ಕಂಡವರು ಯಾವುದೇ ದುಶ್ಚಟಗಳನ್ನು ಮಾಡುವವರಾದರು ಸಹ ಒಂದು ಬಾರಿ ಬಿಡಬೇಕು ಎಂದು ಮನಸ್ಸು ಮಾಡಿ ,ಈ ಸ್ವಾಮಿಯ ಹೆಸರಿನ ಮೇಲೆ ಭಾರ ಹಾಕಿದರೆ ಮತ್ತೆ ದುಶ್ಚಟಗಳಿಗೆ ದಾಸರಾದ ಉದಾಹರಣೆಗಳಿಲ್ಲ.

ಒಂದರ್ಥದಲ್ಲಿ ಬಂಡಾರ ಒಡೆಯನಿಗೆ ಭಕ್ತರು ಎರಚುವ ಬಂಡಾರ ಅಡಿಯಷ್ಟು ಎತ್ತರ ಬೀಳುತ್ತದೆ. ಜಾತ್ರೆಯಲ್ಲಿ ಬರುವ ಲಕ್ಷಾಂತರ ಭಕ್ತರು ಅದರ ಮೇಲೆ ಓಡಾಡುತ್ತಾರೆ. ಆದರೆ ಇದೇ ರೀತಿಯಲ್ಲಿ ಎರಚಿ ತುಳಿಯುವುದು ದೇವರ ಕೆಂಗಣ್ಣಿಗೆ ಗುರಿಯಾದಂತೆ. ಭಂಡಾರವನ್ನು ಪ್ರಸಾದ ಎಂದು ಹಣೆಗೆ ಹಚ್ಚಿ ಕೊಳ್ಳುತ್ತಾರೆ. ಅಲ್ಲದೆ ಪಲ್ಲಕ್ಕಿಗಳು ಬರುವಾಗ ದಾರಿಯಲ್ಲಿ ಭಕ್ತರು ಪಲ್ಲಕ್ಕಿಯನ್ನು ಹೊತ್ತಿರುವವರ ಕಾಲಿನ ಕೆಳಗೆ ಮಲಗುತ್ತಾರೆ. ಈ ವೇಳೆ ಪಲ್ಲಕ್ಕಿ ಹೊತ್ತವರು ರಸ್ತೆಯ ಮೇಲೆ ಮಲಗಿರುವ ಭಕ್ತರನ್ನು ದಾಟಿ ಹೋಗುತ್ತಾರೆ . ಹೀಗೆ ಪಲ್ಲಕ್ಕಿ ದಾಟಿ ಹೋದರೆ ದೇವರ ಆಶೀರ್ವಾದ ಪಡೆದಂತೆ ಎನ್ನುವ ನಂಬಿಕೆಯೂ ಭಕ್ತರಲ್ಲಿ ಬಲವಾಗಿದೆ.

ಇಲ್ಲಿಗೆ ಬಂದು ಮಕ್ಕಳಿಲ್ಲದವರು ಕೇಳಿಕೊಂಡ ಒಂದೇ ವರ್ಷದಲ್ಲಿ ಸಂತಾನ ಭಾಗ್ಯ ಕರುಣಿಸುವನು. ಈ ದೇವರಿಗೆ ನೂರಾರು ಮಹಿಳೆಯರು ಕಾಣಿಕೆಯಾಗಿ ತೊಟ್ಟಿಲುಗಳನ್ನು ನೀಡುತ್ತಾರೆ . ಅಲ್ಲದೆ ದೇವರ ಹರಕೆಯಿಂದ ಹುಟ್ಟಿದ ಮಕ್ಕಳಿಗೆ ದೇವರ ಹೆಸರನ್ನೇ ನಾಮಕರಣ ಮಾಡುತ್ತಾರೆ. ಇಲ್ಲಿ ಮದುವೆಯಾಗದವರು ಸಹ ಹರಕೆಯನ್ನು ಹೊರುವುದು ಪ್ರಚಲಿತದಲ್ಲಿದೆ. ಹೀಗೆ ಹೊತ್ತ ಹರಕೆಯಿಂದಾಗಿ ವರ್ಷದಲ್ಲೇ ಕಂಕಣಭಾಗ್ಯ ಕೂಡಿ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಮತ್ತೊಂದು ವಿಶೇಷತೆ ಏನೆಂದರೆ ಈಗಾಗಲೇ ಬರೀ ಹೆಣ್ಣು ಮಕ್ಕಳ ಆಗಿರುವವರು ಇಲ್ಲಿಗೆ ಬಂದು ಗಂಡು ಮಗುವನ್ನು ಕರುಣಿಸು ಎಂದು ಬೇಡಿ ಸಫಲತೆಯನ್ನು ಕಂಡವರೂ ಇದ್ದಾರೆ . ಹೀಗೆ ಹುಟ್ಟಿದ ಮಕ್ಕಳಿಗೆಲ್ಲ ಈ ದೇವರ ಹೆಸರನ್ನು ಇಡುತ್ತಾರೆ. ಯಾವುದೇ ವ್ಯಾಪಾರ, ವಹಿವಾಟು ನಡೆಸಬೇಕು ಎಂದುಕೊಂಡವರು ಈ ದೇವರ ಹೆಸರಿನಲ್ಲಿ ಆರಂಭಿಸುವುದನ್ನು ಇಲ್ಲಿ ಕಾಣಬಹುದಾಗಿದೆ.

ಈ ದೈವ ಬಂಡಾರ ಪ್ರಿಯ. ಹೀಗಾಗಿಯೇ ತಮ್ಮ ಹರಕೆಯನ್ನು ತೀರಿಸಲು ಬರುವ ಭಕ್ತರು ಈ ಸ್ವಾಮಿಯ ಮೇಲೆ ಬಂಡಾರವನ್ನು ಎರಚುತ್ತಾರೆ. ಪ್ರತಿವರ್ಷ ಬರುವ ಚಂಡಿ ಅಮಾವಾಸ್ಯೆಯಂದು ನಡೆಯುವ ಜಾತ್ರೆಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಕ್ವಿಂಟಾಲ್ ಗಟ್ಟಲೆ ಬಂಡಾರವನ್ನು ಎರಚುವುದು ಇಲ್ಲಿ ನಡೆಯುವ ಆಚರಣೆಗಳಲ್ಲಿ ಒಂದು.
ಜಾತ್ರೆಯ ದಿನ ಒಂದರಲ್ಲೇ ಸುಮಾರು 2 ಟನ್ ನಷ್ಟು ಬಂಡಾರವನ್ನು ಎರಚಲಾಗುತ್ತದೆ . ಇಲ್ಲಿಗೆ ಬಂದು ನಡೆದುಕೊಳ್ಳುವ 1700 ಕುಟುಂಬಗಳಿವೆ. ಅವರೆಲ್ಲರೂ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ಜಾತ್ರೆಯ ದಿನದಂದು ಸಾವಿರದ ಐನೂರು ಪಲ್ಲಕ್ಕಿಗಳು ಆಗಮಿಸುತ್ತವೆ.ಚಟ್ಟಿ ಅಮಾವಾಸ್ಯೆಯ ದಿನದಂದು ಬರುವ ಪಲ್ಲಕ್ಕಿಗಳು ಒಂದು ವಿಶಿಷ್ಟತೆ ಇದೆ. ಅದೇನೆಂದರೆ ಆಯಾ ಗ್ರಾಮದಿಂದಲೇ ಡೊಳ್ಳು ಕುಣಿತದೊಂದಿಗೆ ತಮ್ಮ ತಮ್ಮ ಸ್ಥಳಗಳಿಂದ ಬರುವವರೆಗೂ ಸಮಾನ್ಯವಾಗಿರುವ ಪಲ್ಲಕ್ಕಿಗಳು ಸ್ವಾಮಿಯ ಆಲಯಕ್ಕೆ ಬರುತ್ತಿದ್ದಂತೆ ಹುಚ್ಚೆದ್ದು ಕುಣಿಯತೊಡಗುತ್ತವೆ.
ಯಾರ ಕೈಗೂ ಸಿಗದಂತೆ ತಮ್ಮ ಪಾಡಿಗೆ ತಾವು ತಿರುಗಲು ಶುರುಮಾಡುತ್ತವೆ . ಹೀಗಾಗಿ ಜಾತ್ರೆಯ ದಿನ ಬೆಳಗ್ಗೆ ಆರಂಭವಾಗುವ ಪಲ್ಲಕ್ಕಿಗಳ ಆಟ ಸಾಯಂಕಾಲದವರೆಗೂ ಬಲು ಜೋರಾಗಿಯೇ ನಡೆಯುತ್ತದೆ . ಈ ದೈವದ ಕುಟುಂಬಸ್ಥರು, ಸಂಬಂಧಿಕರು ಮುಖಾಮುಖಿ ಭೇಟಿಯಾಗಿ ಯೋಗ ಕ್ಷೇಮವನ್ನು ವಿಚಾರಿಸಿ ಕೊಂಡು ಹೋಗುತ್ತಾರೆ. ಬರುವಾಗ ಯಾವ ಜಾಗದಿಂದ ಪಲ್ಲಕ್ಕಿಗಳು ಬಂದಿರುತ್ತವೋ, ಹೋಗುವಾಗಲೂ ಒಂದಿಂಚೂ ಸಹ ವ್ಯತ್ಯಾಸವಾಗದಂತೆ ಅದೇ ಜಾಗದಲ್ಲಿ ಮರಳುತ್ತವಂತೆ. ಇದರಲ್ಲಿ ಕೆಲವು ಪಲ್ಲಕ್ಕಿಗಳು ಇಲ್ಲಿಗೆ ಬರುವುದಿಲ್ಲ. ಯಾಕೆಂದರೆ ಕೆಲವು ಸಿದ್ದರೂ ಕುಟುಂಬದೊಂದಿಗೆ ಮಾತನಾಡುವುದಿಲ್ಲವಂತೆ . ಹಾಗಾಗಿ ಕೆಲವು ಪಲ್ಲಕ್ಕಿಗಳು ಇಂದಿಗೂ ಕೂಡ ಇಲ್ಲಿಗೆ ಬರುವುದಿಲ್ಲ.

 

 

ಇಲ್ಲಿ ಮಕ್ಕಳಾಗಬೇಕೆಂದು ಕೋರಿಕೊಂಡರೆ ವರ್ಷ ತುಂಬುವುದರಲ್ಲಿ ಮಕ್ಕಳಾಗಿರುವ ಅದೆಷ್ಟೋ ಉದಾಹರಣೆಗಳಿವೆ ಎಂದು ಹೇಳುತ್ತಾರೆ . ಮಕ್ಕಳ ಫಲ ಕಂಡವರು ಇದ್ದಾರೆ. ಹೀಗಾಗಿಯೇ ಕರ್ನಾಟಕ ,ಮಹಾರಾಷ್ಟ್ರ ,ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ನಾಲ್ಕೈದು ರಾಜ್ಯಗಳಿಂದ ಭಕ್ತರು ಬಂದು ಇಲ್ಲಿ ಮಕ್ಕಳಿಗಾಗಿ ಹರಕೆ ಹೊರುತ್ತಾರೆ.
ವಿಜಯಪುರದಿಂದ 20 ಕಿಲೋಮೀಟರ್ ಅಂತರದಲ್ಲಿರುವ ಗೊಮ್ಮಟ ಗುಡ್ಡದಲ್ಲಿರುವ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಹಚ್ಚ ಹಸಿರು ಕಂಗೊಳಿಸುತ್ತದೆ. 20 ಕಿಲೋ ಮೀಟರ್ ಕ್ರಮಿಸಿದ ಬಳಿಕ 51 ಮೆಟ್ಟಿಲುಗಳನ್ನು ಹತ್ತಿದ ಮೇಲೆ ಅವತಾರ ಪುರುಷನನ್ನು ತಲುಪಬಹುದಾಗಿದೆ. ಈ ದೈವದ ಕುರಿತಂತೆ ಅನೇಕ ಐತಿಹ್ಯವಿದೆ. ಕಳ್ಳತನವಾಗಿರುವ ಸಾಮಾನುಗಳು ಕೂಡ ಇಲ್ಲಿ ಬಂದು ಬೇಡಿದರೆ ಸಿಗುತ್ತವೆ.

ಸುಮಾರು 800 ವರ್ಷಗಳ ಹಿಂದೆ ಭೂಲೋಕದಲ್ಲಿ ಬರಗಾಲ ಆವರಿಸಿದಾಗ , ಭಕ್ತರ ಉದ್ಧಾರಕ್ಕಾಗಿ ದೇವಾನುದೇವತೆಗಳು ಭೂಮಿಗೆ ಕಳುಹಿಸಿಕೊಟ್ಟ ಈ ದೈವವೇ ಅಮೋಘ ಸಿದ್ಧ ಈ ಸ್ವಾಮಿ ದೇವಲೋಕದಲ್ಲಿ ತಂದೆ ತಾಯಿಯ ಸೇವೆ ಮಾಡಿಕೊಂಡಿದ್ದರಂತೆ. ಆ ಬಳಿಕ ದೇವರ ಆಜ್ಞೆಯಂತೆ ಈ ವಿಜಯಪುರ ತಾಲೂಕಿನ ಜಾಲಗೇರಿ ಬಳಿ ಇರುವ ಗೊಮ್ಮಟ ಗುಡ್ಡದಲ್ಲಿ ಸುಮಾರು ಎಂಟು ನೂರು ವರ್ಷಗಳಿಂದ ಎಲ್ಲಿ ನೋಡಿದರೂ ಬಟಾ ಬಯಲಾಗಿ ಕಾಣುತ್ತಿತ್ತಂತೆ ಈ ಪ್ರದೇಶ.ಅಮೋಘ ಸಿದ್ದೇಶ್ವರನು ನೀರಿನ ಕೊರತೆಯನ್ನು ನೀಗಿಸಿ ಸುತ್ತಲೂ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರಂತೆ. ಅಂದಿನಿಂದ ಇಂದಿನವರೆಗೂ ಈ ಪವಾಡಗಳು ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ. 800 ವರ್ಷಗಳ ಹಿಂದೆ ಅಮೋಘ ಸಿದ್ಧ ಮ್ಮುಮ್ಮಟ ಗುಡ್ಡಕ್ಕೆ ಬಂದು ನೆಲೆಸಿದಾಗ ಇರುವಂತಹ ಹಳೆಯ ಚಿಕ್ಕದಾದ ದೇವಸ್ಥಾನವೇ ಇಂದಿಗೂ ಕಾಣಬಹುದು. ಆಮೋಘ ಸಿದ್ದರ ಮಹಿಮೆ ಅಪಾರವಾಗಿದ್ದರೂ ಆತನ ದೇವಸ್ಥಾನ ಮಾತ್ರ ಚಿಕ್ಕದಾಗಿದೆ.

ಜಾತ್ರೆಯ ಸಮಯದಲ್ಲಿ ಬಂಗಾರದ ಲೇಪಿತ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ . ಸಾಮಾನ್ಯ ದಿನಗಳಲ್ಲಿ 5:00 ಗಂಟೆಗೆ ಮತ್ತು ಸಂಜೆ ಏಳು ಗಂಟೆಗೆ ದಿನಕ್ಕೆ ಎರಡು ಬಾರಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಹೀಗೆ ನಿರಂತರವಾಗಿ ಪೂಜೆ ಮತ್ತು ಅನ್ನ ದಾಸೋಹವು ನಡೆಯುತ್ತದೆ.ಬಂಡಾರವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ . ಹೀಗೆ ಮನೆಗೆ ತೆಗೆದುಕೊಂಡು ಹೋದ ಬಂಡಾರವನ್ನು ಮನೆಯಲ್ಲಿ ಹಣದ ಪೆಟ್ಟಿಗೆಯೊಳಗೆ ಇಟ್ಟರೆ ಲಕ್ಷ್ಮಿ ನೆಲೆಸುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ. ರೈತಾಪಿ ವರ್ಗಕ್ಕೆ ಎತ್ತು , ಆಕಳು ಸೇರಿದಂತೆ ಜಾನುವಾರುಗಳು ಮತ್ತು ಕುರಿ ಮೇಕೆಗಳಿಗೆ ರೋಗ ಬಾರದಂತೆ ಹಚ್ಚಲಾಗುತ್ತದೆ. ಬಂಡಾರವನ್ನು ಹಚ್ಚಿದರೆ ಯಾವುದೇ ರೋಗಗಳು ಬರುವುದಿಲ್ಲ

.
ಇಂಡಿ ತಾಲೂಕಿನ ತಡವಲಗಾ ಗ್ರಾಮದ ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಹಾಕಿಕೊಂಡಿದೆ ಎಷ್ಟೇ ಪ್ರಯತ್ನಪಟ್ಟರೂ ಹೊರಗೆ ಬರಲಿಲ್ಲವಂತೆ 8 ದಿನಗಳ ಕಾಲ ಪ್ರಯತ್ನಿಸಿ ಸಲಾಕೆ ಹೊರ ಬರುವುದಿಲ್ಲ ಎಂದು ಕೊಂಡು ಹೊರಟಿದ್ದ ವೇಳೆ ಸ್ಥಳಕ್ಕೆ ಬಂದ ಅಮೋಘ ಸಿದ್ದರ ಹರಕೆ ಪುತ್ರರೋರ್ವರು ದೇವರ ಹೆಸರು ಹೇಳಿ ತನ್ನ ಬಳಿ ಇದ್ದ ಬಂಡಾರವನ್ನು ಜೈ ಅಮೋಘ ಸಿದ್ಧ ಎಂದು ಹೇಳಿ ಹಚ್ಚಿ ಪ್ರಯತ್ನಿಸಿದಾಗ ಒಂದೇ ಬಾರಿಗೆ ಸಲಾಕೆ ಹೊರ ಬಂದಿತ್ತಂತೆ . ಹೀಗೆ ಅನ್ನದಾತರ ಮೇಲೆ ಅಮೋಘ ಸಿದ್ದೇಶ್ವರನ ಆಶೀರ್ವಾದವಿದೆ.
ಮನೆಯಲ್ಲಿ ನಿವಾರಣೆ ಮಾಡಲಾಗದ ಕುಷ್ಟ ರೋಗ , ಅಸ್ತಮ, ಕ್ಷಯದಂತಹ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ಇದ್ದರೆ, ಅವರನ್ನು ಈ ಕ್ಷೇತ್ರಕ್ಕೆ ಕರೆತಂದು ದೇವರ ಭಂಡಾರವನ್ನು ಹಚ್ಚಿದರೆ ಅಂತಹ ಭಯಾನಕ ರೋಗಗಳು ಕಾಯಿಲೆಗಳು ಕೂಡ ವಾಸಿಯಾದ ಉದಾಹರಣೆಗಳಿವೆ. ಇನ್ನು ಎಲ್ಲರಿಗೂ ಕೆಡುಕನ್ನು ಬಯಸುವ ಅದೆಷ್ಟೋ ಜನರಿಗೆ ಶಿಕ್ಷಿಸದೆ ಸರಳವಾಗಿ ಮನ ಪರಿವರ್ತನೆ ಮಾಡಿದ್ದಾರೆ ಈ ದೈವೀ ಮನೋಭಾವ ಅಮೋಘ ಸಿದ್ಧ. ಕಳ್ಳತನ ,ಕೊಲೆ ,ಸುಲಿಗೆ, ದರೋಡೆ ಮಾಡುತ್ತಿದ್ದವರಲ್ಲ ಇಲ್ಲಿಗೆ ಬಂದ ಬಳಿಕ ಆ ಕೆಲಸಗಳನ್ನು ಬಿಟ್ಟು ಜನಸಾಮಾನ್ಯರಲ್ಲಿ ಒಂದಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top