ಸಮಾಚಾರ

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಮತ್ತೆ ಕೆಣಕಿದ ಕಾಂಟ್ರವರ್ಷಿಯಲ್ ನಟಿ ಶ್ರೀರೆಡ್ಡಿ.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ತರೇಹವಾರಿ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ. ಕಾಸ್ಟಿಂಗ್ ಕೌಚ್ ಎಂಬ ಅನಿಷ್ಟ ಪದ್ದತಿಯ ವಿರುದ್ಧ ನಡು ರೋಡಿನಲ್ಲಿ ಬಟ್ಟೆಯನ್ನು ಕಿತ್ತೆಸೆದು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ನಂತರ ತಮಿಳು, ತೆಲುಗು ಚಿತ್ರರಂಗಗಳ ಅನೇಕ ನಿರ್ದೇಶಕ, ನಟರ ಮೇಲೆ ಯಾವುದೇ ಆಧಾರವಿಲ್ಲದೆ ಗಂಭೀರ ಆರೋಪ ಮಾಡಿ, ಅಸಹ್ಯವಾಗೆಲ್ಲಾ ಬೈದು ಹುಚ್ಚಾಟ ಪ್ರದರ್ಶಿಸಿದ್ದ ಶ್ರೀರೆಡ್ಡಿ ಇದೀಗ ಮತ್ತೊಮ್ಮೆ ಕಣಕ್ಕಿಳಿದಿದ್ದಾಳೆ.

ಪ್ರತಿ ಭಾರಿ ಯಾರಾದರೊಬ್ಬ ನಟನ ಹೆಸರೇಳಿಕೊಂಡು ಆರೋಪಗಳನ್ನು ಮಾಡುತ್ತಿದ್ದ ಶ್ರೀರೆಡ್ಡಿ ಪವನ್ ಕಲ್ಯಾಣ್ ವಿರುದ್ದ ಅವಮಾನಕಾರಿ ರೀತಿಯಾಗಿ ಪೋಸ್ಟ್ ಹಾಕಿ ಪಿಕೆ ಅಭಿಮಾನಿಗಳನ್ನು ಕೆಣಕಿದ್ದಾಳೆ. ಪವನ್ ಕಲ್ಯಾಣ್ ಚಿತ್ರವೊಂದ್ರಲ್ಲಿ ಸೀರೆ ಉಟ್ಟಿರೋ ಫೋಟೋವನ್ನ ತನ್ನ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿರುವ ಶ್ರೀರೆಡ್ಡಿ “ಪಿಕೆಗೆ ತುಂಬಾ ಇಷ್ಟವಾಗಿರೋ ಗೆಟಪ್ ಇದು” ಎಂದು ಅಡಿಬರಹ ಕೊಟ್ಟಿದ್ದಾಳೆ. ಇದರಿಂದ ಕೋಪಗೊಂಡಿರುವ ಪವನ್ ಕಲ್ಯಾಣ್ ಅಭಿಮಾನಿಗಳು ಶ್ರೀರೆಡ್ಡಿ ವಿರುದ್ಧ ಮೂದಲಿಕೆ ಮಾತುಗಳನ್ನು ಆಡುವ ಮೂಲಕ ನಿಂದನೆ ಮಾಡುತ್ತಿದ್ದಾರೆ.

 

 

ಯಾರು ಈ ಶ್ರೀರೆಡ್ಡಿ?
ತನಗೆ ಕಾಸ್ಟ್ ಕೌಚಿಂಗ್ ಮಾಡಿದವರ ಬಣ್ಣ ಬಯಲು ಮಾಡುವ ಶಪಥ ತೊಟ್ಟಿರುವ ಈಕೆ ತಿಂಗಳಿನಿಂದೆ ಫಿಲಂ ಚೇಂಬರ್ ಎದುರು ಬಟ್ಟೆ ಕಳಚಿ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಳು. ಯಾವಾಗ ನಡು ಬೀದಿಯಲ್ಲಿ ಅರೆ ಬೆತ್ತಲೆಯಾಗಿ ನಿಂತು ಬಾಯಿ ಬಡಕೊಂಡರೂ ನ್ಯಾಯವೆಂಬುದು ಮರೀಚಿಕೆಯಾಯ್ತೋ… ಆಗ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದಾಳೆ. ತನ್ನನ್ನು ಬಲವಂತವಾಗಿ, ಅವಕಾಶ ಕೊಡಿಸುವ ಆಮಿಷವೊಡ್ಡಿ ಕೆಡವಿಕೊಂಡವರ ಅಸಲಿ ಮುಖವಾಡಗಳನ್ನು ಕಳಚುತ್ತೇನೆ ಎಂದು ಹೇಳಿಕೊಂಡು ದಿನಕ್ಕೊಬ್ಬ ನಟ ನಿರ್ದೇಶಕ, ನಿರ್ಮಾಪಕರ ಹೆಸರನ್ನು ಹೊರಹಾಕುತ್ತಿದ್ದಾಳೆ. ಪವನ್ ಕಲ್ಯಾಣ್, ಮಹೇಶ್ ಬಾಬು ಅವರಂಥ ದೊಡ್ಡ ನಟರನ್ನೇ ಲೆಕ್ಕಿಸಿದೆ ಅವರನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಮೂದಲಿಸಿದ ಈಕೆಯ ವಕ್ರದೃಷ್ಟಿ ತಮಿಳು ಮತ್ತು ತೆಲುಗು ಚಿತ್ರರಂಗದ ಮೇಲೆ ಬಿದ್ದಿದ್ದು ಮತ್ತಷ್ಟು ಅನೇಕ ಹೆಸರುಗಳನ್ನೂ ಬಹಿರಂಗಪಡಿಸುವುದಾಗಿ ಸುಳಿವು ನೀಡಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top