fbpx
ಸಮಾಚಾರ

ಸೂರ್ಯ ಮುಳುಗುತ್ತಿದ್ದಂತೆ ರಾಷ್ಟ್ರ ಧ್ವಜವನ್ನು ಏಕೆ ಕೆಳಗಿಳಿಸುತ್ತಾರೆ ಗೊತ್ತೇ

ನಮ್ಮ ದೇಶದ ಬಾವುಟ ವಿಶ್ವದಲ್ಲೇ ವಿಶಿಷ್ಟವಾಗಿ ರೂಪುಗೊಂಡಿರುವ ಬಾವುಟ. ನಮ್ಮ ಈ ಧ್ವಜವು ಒಮ್ಮಿಂದೊಮ್ಮೆಲೆ ರೂಪುಗೊಂಡಿದ್ದಲ್ಲ. ಈ ರಾಷ್ಟ್ರಧ್ವಜದ ಕಲ್ಪನೆ ಹುಟ್ಟಿದ್ದು 1906 ರಲ್ಲಿ, ಅಲ್ಲಿಂದ 1947 ರವರೆಗೆ ಹಲವಾರು ಮಾರ್ಪಾಡುಗಳನ್ನು ಹೊಂದುತ್ತ, ದೇಶ ಸ್ವಾತಂತ್ರ್ಯಗಳ್ಳುವ ಸಮಯಕ್ಕೆ ಪೂರ್ಣಪ್ರಮಾಣವಾಗಿ, ಅರ್ಥಗರ್ಭಿತವಾಗಿ ರೂಪುಗೊಂಡಿತು ನಮ್ಮ ಹೆಮ್ಮೆಯ ಧ್ವಜ. ನಮ್ಮ ಹೆಮ್ಮೆಯ ರಾಷ್ಟ್ರಧ್ವಜಕ್ಕೆ ರೂಪ ನೀಡಿದವರು ಸ್ವಾತಂತ್ರ್ಯ ಹೋರಾಟಗಾರರಾದ ಆಂಧ್ರದ ಪಿಂಗಳಿ ವೆಂಕಯ್ಯ.

 

ಇನ್ನು ಕತ್ತಲಾಗುತ್ತಿದ್ದಂತೆ ದ್ವಜ ಕೆಳಗಿಳಿಯಲು ಕಾರಣವೆಂದರೆ ಈ ದ್ವಜ ಕ್ಕೆ ನಿರ್ದಿಷ್ಟ ಪ್ರಮಾಣದ ಬೆಳಕು ಇದ್ದಾಗ ಮಾತ್ರ ಬಾವುಟ ಹಾರಬೇಕೆಂಬ ನಿಯಮ ಕಾನೂನಿನಲ್ಲಿದೆ.ಯಾವುದೇ ರೀತಿಯ ಮಂದವಾದ ಬೆಳಕಿನಲ್ಲಿ ರಾಷ್ಟ್ರ ದ್ವಜವನ್ನು ಹಾರಿಸುವುದು ಅದಕ್ಕೆ ಅಗೌರವ ತೋರಿದಂತೆ. ಈ ಬಗ್ಗೆ ಕಾನೂನಿನಲ್ಲೇ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಆದರೆ ಕೆಲವು ವರ್ಷಗಳ ಹಿಂದೆ 2009 ರಲ್ಲಿ ಸರ್ಕಾರದ ಮಂತ್ರಿಯೊಬ್ಬರು ಕತ್ತಲಾದ ನಂತರವೂ ಬಾವುಟ ಹಾರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಸೂಕ್ತವಾದ ಸಲಹೆಯೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡುತ್ತಾರೆ. ಇದಕ್ಕೆ ಒಪ್ಪಿದ ಕೋರ್ಟ್ ದ್ವಜದ ಎತ್ತರ ಕಡಿಮೆಯೆಂದರೆ 100 ಅಡಿ ಎತ್ತರ ಇರಬೇಕು ಎಂದು ತೀರ್ಪು ನೀಡುತ್ತಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ದ್ವಜ ಹಾರುವಾಗ ಯಾವುದೇ ರೀತಿಯ ಅಡಚಣೆಗಳು ಇರಬಾರದು, ಯಾವುದೇ ಮರ ಗಿಡ , ಎಲೆಗಳು ಅಡ್ಡಿ ಪಡಿಸದಂತೆ ಇರಬೇಕು . ಈ ತೀರ್ಪಿನ ನಂತರ ಈಗಲೂ ನಾವು ಕೆಲ ಸರ್ಕಾರಿ ಕಚೇರಿಗಳಲ್ಲಿ ಕತ್ತಲಾದ ಬಳಿಕವೂ ದ್ವಜವನ್ನು ನೋಡಬಹುದಾಗಿದೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top