ಹೆಚ್ಚಿನ

ಲಕ್ಷ್ಮಿದೇವಿಗೆ ಯಾವ ಯಾವ ಹಣ್ಣನ್ನು ನೈವೇದ್ಯ ಮಾಡಿ ಅರ್ಪಿಸಿದರೆ,ಏನ್ ಫಲ ಸಿಗುತ್ತೆ ಗೊತ್ತಾ

ಲಕ್ಷ್ಮಿ ದೇವಿಗೆ ಪ್ರಿಯವಾದ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸಿದರೆ ನಿಮ್ಮ ಪೂಜೆಯು ಸಂಪೂರ್ಣವಾಗುತ್ತದೆ.

ಮಹಿಳೆಯರು ಅತ್ಯಂತ ಪವಿತ್ರವಾಗಿ ಭಾವಿಸುವುದು ಶ್ರಾವಣ ಮಾಸ. ಈ ಶ್ರಾವಣ ಮಾಸದಲ್ಲಿ ಮನೆಮನೆಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆಗಳು ಮತ್ತು ವ್ರತಗಳನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ .ಹಾಗೆಯೇ ಈ ಸಮಯದಲ್ಲಿ ಮಾಡುವ ಪೂಜೆಗಳ ಪಲಿತಾಂಶ ಸಹ ಹೆಚ್ಚಾಗಿ ಕಾಣಬಹುದು. ಆದರೆ ಇನ್ನೂ ಹೆಚ್ಚಿನ ಫಲಗಳನ್ನು ನೀಡಬೇಕೆಂದರೆ ದೇವಿಗೆ ಕೆಲವು ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಆ ಹಣ್ಣುಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಬನ್ನಿ.

 

 

 

ಸೇಬು: ಸೇಬು ಹಣ್ಣನ್ನು ದೇವಿಗೆ ನೈವೇದ್ಯವಾಗಿ ಸಮರ್ಪಿಸುವುದರಿಂದ ನಿಮಗೆ ಇರುವ ದಾರಿದ್ರ್ಯ ದೂರವಾಗಿ ನೀವು ಕುಬೇರರಾಗುತ್ತೀರ.

ಬಾಳೆಹಣ್ಣು:ಬಾಳೆಹಣ್ಣನ್ನು ಲಕ್ಷ್ಮೀದೇವಿಗೆ ನೈವೇದ್ಯವಾಗಿ ಅರ್ಪಿಸುವುದರಿಂದ ನೀವು ಅಂದುಕೊಂಡ ಕೆಲಸಗಳು ಸರಳವಾಗಿ ನೆರವೇರುತ್ತವೆ.

ಬಾಳೆ ಹಣ್ಣಿನ ಗೊಜ್ಜು:ಬಾಳೆ ಹಣ್ಣಿನ ಗೊಜ್ಜನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಋಣ ಬಾಧೆ ನಿವಾರಣೆಯಾಗುತ್ತದೆ.

ಬಾಳೆಕಾಯಿ:ಬಾಳೆಕಾಯಿಯನ್ನು ದೇವಿಗೆ ನೈವೇದ್ಯ ವಾಗಿರುವುದರಿಂದ ತುಂಬಾ ದಿನಗಳಿಂದ ನಿಂತು ಹೋಗಿರುವ ಕೆಲಸಗಳು ಇರುತ್ತವೆ.

ತೆಂಗಿನ ಕಾಯಿ:ತೆಂಗಿನ ಕಾಯಿಯನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಕಾರ್ಯಸಿದ್ಧಿಯಾಗುತ್ತದೆ.

ಸಪೋಟ:ಸಪೋಟ ಹಣ್ಣನ್ನು ನೈವೇದ್ಯವಾಗಿ ದೇವಿಗೆ ಅರ್ಪಿಸುವುದರಿಂದ ನೀವು ಮಾಡುವ ಪ್ರತಿ ಕೆಲಸಗಳಲ್ಲಿಯೂ ವಿಜಯವನ್ನು ಕಾಣಬಹುದು.

ಮಾವಿನ ಹಣ್ಣು:ಲಕ್ಷ್ಮೀದೇವಿಗೆ ಮಾವಿನ ಹಣ್ಣು ಎಂದರೆ ತುಂಬಾ ಇಷ್ಟ ಇದನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಕೋರ್ಟ್ ಸಮಸ್ಯೆಗಳು ದೂರವಾಗುತ್ತವೆ ಹಾಗೆಯೇ ಸರ್ಕಾರದಿಂದ ಆಗುವ ಕೆಲಸಗಳು ಶೀಘ್ರವಾಗಿ ನೆರವೇರುತ್ತವೆ.

ಹಲಸಿನ ಹಣ್ಣು:ಶತ್ರುಬಾಧೆ ದೂರವಾಗಬೇಕೆಂದರೆ ಹಲಸಿನ ಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಬೇಕು.

ಕಿತ್ತಲೆ ಹಣ್ಣು:ಕಿತ್ತಳೆ ಹಣ್ಣನ್ನು ದೇವಿಗೆ ಅರ್ಪಿಸುವುದರಿಂದ ಬರುವ ಅಡೆತಡೆಗಳು ,ನಿಂತು ಹೋಗಿರುವ ಕೆಲಸ ಕಾರ್ಯಗಳು ಮತ್ತೆ ಪ್ರಾರಂಭವಾಗಿ ಸುಲಭವಾಗಿ ನೆರವೇರುತ್ತವೆ .

ಸೀಬೆಕಾಯಿ: ಲಕ್ಷ್ಮೀದೇವಿಗೆ ಸೀಬೆ ಹಣ್ಣನ್ನು ಅರ್ಪಿಸುವುದರಿಂದ ದೇವಿಯ ಅನುಗ್ರಹ ದೊರೆತು ನಿಮ್ಮ ಮನಸ್ಸಿನ ಕೋರಿಕೆಗಳು ನೆರವೇರುತ್ತವೆ. ಹಾಗೆಯೇ ದೇವರಿಗೆ ನೈವೇದ್ಯವಾಗಿ ಇಟ್ಟ ಸೀಬೆ ಹಣ್ಣನ್ನು ದಾನ ಮಾಡುವುದರಿಂದ ನಿಮ್ಮ ಕುಟುಂಬದವರು ಆರೋಗ್ಯವಾಗಿ ಇರುತ್ತಾರೆ.

ಸೇಬು:ದೇವಿಗೆ ಸೇಬು ಹಣ್ಣನ್ನು ನೈವೇದ್ಯವಾಗಿ ಇಟ್ಟು ಪೂಜೆ ಮಾಡಿದ ನಂತರ ಮುತ್ತೈದೆಯರಿಗೆ ಸೀಬೆ ಹಣ್ಣನ್ನು ತಾಂಬೂಲವಾಗಿ ನೀಡುವುದರಿಂದ ಒಳ್ಳೆಯ ಬಾಳಸಂಗಾತಿಯನ್ನು ಪಡೆಯಬಹುದು.

ಅಂಜೂರದ ಹಣ್ಣು:ಅಂಜೂರದ ಹಣ್ಣನ್ನು ದೇವಿಗೆ ನೈವೇದ್ಯವಾಗಿ ಸಮರ್ಪಿಸುವುದರಿಂದ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ದ್ರಾಕ್ಷಿ ಹಣ್ಣು:ಮನೆಯಲ್ಲಿ ಕಲಹಗಳು ಮನಸ್ತಾಪಗಳು ಹೆಚ್ಚಾಗಿದ್ದರೆ ದ್ರಾಕ್ಷಿ ಹಣ್ಣನ್ನು ದೇವಿಗೆ ನೈವೇದ್ಯವಾಗಿ ಸಮರ್ಪಿಸಿ ಅದನ್ನು ಚಿಕ್ಕ ಮಕ್ಕಳಿಗೆ ಹಂಚಬೇಕು .

ನೇರಳೆ ಹಣ್ಣು:ನೇರಳೆ ಹಣ್ಣನ್ನು ದೇವಿಗೆ ನೈವೇದ್ಯವಾಗಿ ಸಮರ್ಪಿಸಿ ಅದನ್ನು ಬ್ರಾಹ್ಮಣರಿಗೆ ದಾನ ಮಾಡಿದರೆ ಭೂದಾನ ಮಾಡಿದಷ್ಟೇ ಪುಣ್ಯ ಫಲ ಲಭಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top