ಮನೋರಂಜನೆ

ಕಿಚ್ಚ ಸುದೀಪ್ ಗಿರಿಜಾ ಮೀಸೆ ಬಿಡುತ್ತೀರೋ ಹಿಂದಿರೋ ರಹಸ್ಯವೇನು?

ಸುದೀಪ್ ಕನ್ನಡ ಚಿತ್ರರಂಗದ ಚೆಂದದ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆಸುಪಾಸಿನ ನಟರು ಜಿಮ್ಮು ಸೇರಿಕೊಂಡು ಬೆವರಿಳಿಸಿ ಅಂಗಸೌಷ್ಠವ ವೃದ್ಧಿಸಿಕೊಳ್ಳುತ್ತಿದ್ದರೂ ಸುದೀಪ್ ಮಾತ್ರ ಅಷ್ಟಾಗಿ ಬಾಡಿ ಟ್ಯೂನಿಂಗ್‌ನತ್ತ ಗಮನ ಹರಿಸಿದವರಲ್ಲ. ಆದರೆ, ಇತ್ತೀಚೆಗೆ ಅವರ ದೇಹಾಕಾರದಲ್ಲಿ ಅದ್ಭುತ ಎಂಬಂಥಾ ಬದಲಾವಣೆಗಳಾಗಿವೆ. ಅಷ್ಟೇ ಅಲ್ಲದೆ ಹುರಿ ಹುರಿ ‘ಗಿರಿಜಾ ಮೀಸೆ’ ಬಿಟ್ಟು ಎಲ್ಲೆಲ್ಲೂ ಅದೇ ಲುಕ್ ನಲ್ಲೆ ಕಂಗೊಳಿಸುತ್ತಿದ್ದಾರೆ.. ಅಷ್ಟಕ್ಕೂ ಸುದೀಪ್ ಈ ರೀತಿಯ ವೆರೈಟಿ ಮೀಸೆ ಬಿಡುತ್ತಿರುವುದು ಇದೇ ಮೊದಲಲ್ಲ ಇದಕ್ಕೂ ಮುಂದೆ ಕೆಂಪೇಗೌಡ, ವರದನಾಯಕ ಸಿನಿಮಾಗಳಲ್ಲಿ ಕೂಡ ‘ಗಿರಿಜಾ ಮೀಸೆ’ ಬಿಟ್ಟು ಅಬ್ಬರಿಸಿದ್ದರು.. ಇದೀಗ ಮತ್ತೊಮ್ಮೆ ಗಡ್ಡ ಸಹಿತ ‘ಗಿರಿಜಾ ಮೀಸೆ’ ಬಿಡುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ..

ಸದ್ಯ ‘ಪೈಲ್ವಾನ್’ ಚಿತ್ರದಲ್ಲಿ ಬ್ಯುಸಿಯಾಗಿರುವ ಕಿಚ್ಚ ಥೇಟು ಪೈಲ್ವಾನ್​ ರೀತಿಯೇ ಕಾಣಿಸೋ ಸಲುವಾಗಿ ದೈಹಿಕ ಬದಲಾವಣೆಯಷ್ಟೇ ಅಲ್ಲದೇ, ಹುರಿ ‘ಗಿರಿಜಾ ಮೀಸೆ’ ಬಿಡುತ್ತಿದ್ದಾರೆ. ಎಂದು ಅಭಿಮಾನಿಗಳಲ್ಲೇ ಒಂದು ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ.. ಆದರೆ, ಪೈಲ್ವಾನ್​ಗಾಗಿಯೇ ಸುದೀಪ್ ‘ಗಿರಿಜಾ ಮೀಸೆ’ ಬಿಡ್ತಿದ್ದಾರೆ ಅನ್ನೋದು ಎಂದು ಹೇಳೋಕಾಗಲ್ಲ.

ಯಾಕೆಂದರೇ, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ತೆಲುಗಿನ ‘ಸೈರಾ ರೆಡ್ಡಿ’ ಎಂಬ ಐತಿಹಾಸಿಕ ಸಿನಿಮಾದಲ್ಲೂ ಸುದೀಪ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಸುದೀಪ್ ಹುರಿ ಮೀಸೆ ಬಿಡುತ್ತಿರುವುದು ಪೈಲ್ವಾನ್​ಗಾಗಿಯೋ ಅಥವಾ ಸೈರಾಗಾಗಿಯೋ ಎಂಬುದು ಪಕ್ಕಾ ಆಗಿಲ್ಲ. ಇದೇ ಸದ್ಯದ ಕುತೂಹಲ. ಅಂದಹಾಗೆ ಸುದೀಪ್ ಅವರು ಈ ಎರಡು ಸಿನಿಮಾಗಳಲ್ಲಿ ಮಾತ್ರವಲ್ಲದೆ ಕೋಟಿಗೊಬ್ಬ-3 ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಆದರೆ ಆ ಚಿತ್ರದ ಲುಕ್ ಹಿಂದಿನ ಅವತರಣಿಕೆಯಾ ಲುಕ್ ನಲ್ಲೆ ಕಾಣಿಸಿಕೊಳ್ಳಲಿದ್ದಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top