ಸಮಾಚಾರ

ಮನೆಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ಬಂಪರ್ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಈಗಾಗಲೇ ಅಪಾರ ಜನರು ಜನ ಮನೆಗಳಿಗಾಗಿ ಅರ್ಜಿಗಳನ್ನ ಸಲ್ಲಿಕೆ ಮಾಡಿ ಕಾಯುತ್ತಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ ಎಂದು ತಿಳಿದು ಬಂದಿದೆ. 2022ಕ್ಕೆ ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಿದ್ದು, ಅದರೊಳಗೆ ದೇಶದ ಪ್ರತಿ ಕುಟುಂಬಗಳು ಸ್ವಂತ ಮನೆ ಹೊಂದುವುದು ನನ್ನ ಕನಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕಾನೂನು ಬದ್ದವಾಗಿ ಮನೆ ಪಡೆಯಲಿರುವ ಬಗ್ಗೆ ತಾಯಂದಿರು ಮತ್ತು ಸಹೋದರಿಯರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ನಯಾಪೈಸೆ ಲಂಚವನ್ನು ಕೊಡಬೇಕಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಮನೆಯನ್ನು ಹೇಗೆ ಕಟ್ಟಬಹುದು, ಏನು ಸಾಮಾಗ್ರಿಗಳು ಬೇಕಾಗುತ್ತದೆ. ಇದನ್ನೆಲ್ಲಾ ಕುಟುಂಬಗಳೇ ನಿರ್ಧಾರ ಮಾಡುತ್ತವೆ. ಗುತ್ತಿಗೆದಾರರಲ್ಲಿ ನಮ್ಮಗೆ ನಂಬಿಕೆ ಇಲ್ಲ. ಆದರೆ, ಕುಟುಂಬಗಳು ಸ್ವಂತವಾಗಿ ಮನೆ ನಿರ್ಮಾಣ ಕೆಲಸ ಮಾಡಿದ್ದಾಗ ಅದು ಉತ್ತಮವಾಗಿರುತ್ತದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.

 

 

 

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2019 ರ ಮಾರ್ಚ್ ಒಳಗೆ 75 ಲಕ್ಷ ಮನೆಯನ್ನ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿದುಬಂದಿದೆ, ಕಳೆದ ವರ್ಷ ವಸತಿ ಹಾಗು ನಗರ ವ್ಯವಹಾರಗಳ ಸಚಿವಾಲಯ ಸುಮಾರು 30.6 ಮನೆಗಳನ್ನ ನಿರ್ಮಿಸುವಲ್ಲಿ ಯಶಸ್ವಿ ಆಗಿದೆ.

 

ದೇಶದ ಜನರಿಗೆ ಕೈಗಿಟ್ಟುವ ದರದಲ್ಲಿ ಮನೆಯನ್ನ ಕಲ್ಪಿಸಿಕೊಡುವ ಕನಸು ಕೇಂದ್ರ ಸರ್ಕಾರದ್ದಾಗಿದೆ,, ಮನೆಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 3 ವರ್ಷದಲ್ಲಿ 78000 ಕೋಟಿ ರೂಪಾಯಿಗಳನ್ನ ಮಂಜೂರು ಮಾಡಿದೆ ಎನ್ನಲಾಗಿದೆ. ಇನ್ನು ಮನೆ ನಿರ್ಮಾಣ ಮಾಡಲು ತುಂಬಾ ಸಮಯ ಹಿಡಿಯುತ್ತದೆ, ಹಲವು ಮನೆಗಳ ನಿರ್ಮಾಣ ಕಾರ್ಯ 18 ತಿಂಗಳುಗಳಲ್ಲಿ ಮುಗಿದರೆ ಇನ್ನು ಉಳಿದ ಮನೆಗಳ ಕಾರ್ಯ 36 ತಿಂಗಳುಗಳಲ್ಲಿ ಮುಗಿಯಲಿದೆ ಎಂದು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top