fbpx
ಸಮಾಚಾರ

ಮುಂಬೈನ ಈ ಸೂಪರ್ ಮಾಡೆಲ್ ಈಗ ಕರಾವಳಿಯ ದೈವಪಾತ್ರಿ ,ನೋಡಿ ಕಂಪ್ಲೀಟ್ ಸ್ಟೋರಿ

ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ನಗರಕ್ಕೂ ಹಾಗು ತುಳುನಾಡಿಗೂ ಒಂದು ಅವಿನಾಭವ ಸಂಬಂಧ ಇದೆ. ಕರಾವಳಿಯ ಕುಟುಂಬದಿಂದ ಒಬ್ಬರಾದರೂ ಹಿಂದಿನ ಕಾಲದಿಂದಲೂ ಮುಂಬೈನಲ್ಲಿ ನೆಲೆಸಿರುತ್ತಾರೆ. ಹಾಗಾಗಿ ತುಳುನಾಡಿನ ದೈವ ಭೂತಗಳು, ಯಕ್ಷಗಾನ ಇಂತಹುವುದರ ಬಗ್ಗೆ ಮುಂಬೈ ಕರಾವಳಿಗರಿಗೆ ಗೊತ್ತೇ ಇರುತ್ತದೆ. ಯುವಕನೊಬ್ಬ ಮುಂಬೈ ನಗರದಲ್ಲಿದ್ದರೆ ಫ್ಯಾಷನ್ ಲೋಕದ ತಾರೆ. ಅದೇ ತನ್ನ ಮೂಲ ನೆಲೆಗೆ ಬಂದರೆ ಪಕ್ಕಾ ದೈವದ ಪಾತ್ರಿ ಅರೆ, ಇದೇನಿದು ಮುಂಬೈನ ಫ್ಯಾಷನ್ ಲೋಕಕ್ಕೂ, ತುಳುನಾಡಿನ ದೈವಗಳಿಗೂ ಅದೇನು ಸಂಬಂಧ ಅಂತ ಅಚ್ಚರಿಯಾಗಬೇಡಿ. ಮುಂದೆ ಓದಿ.

 

ಆವೇಶಭರಿತರಾಗಿ ಮೈ ಮರೆತಿರುವ ದೈವಪಾತ್ರಿ ವೃತ್ತಿಯಲ್ಲಿ ಫ್ಯಾಷನ್ ಕೊರಿಯೋಗ್ರಾಫರ್. ಈ ಯುವಕನ ಹೆಸರು ಸನಿಧ್ ಪೂಜಾರಿ ಎಂದು ತಿಳಿದು ಬಂದಿದೆ. ಮೂಲತಃ ಉಡುಪಿಯ ಕಟಪಾಡಿಯ ಮಟ್ಟು ನಿವಾಸಿ ಆಗಿದ್ದರು ಕೂಡ, ಹುಟ್ಟಿ, ಓದಿ ಬೆಳೆದಿದ್ದು ಎಲ್ಲವೂ ದೂರದ ಮುಂಬೈ ನಗರದಲ್ಲಿ.

ಮೂಲಗಳ ಮಾಹಿತಿ ಪ್ರಕಾರ ಸನಿಧ್ ಪೂಜಾರಿ ಅವರ ಪೂರ್ವಜರು ನಡ್ಸಿಕೊಂಡು ಬರುತ್ತಿದ್ದ ದೈವದ ಚಾಕರಿ ಕೆಲವು ವರ್ಷಗಳಲ್ಲಿ ನಿಂತು ಹೋಗಿತ್ತು. ಈಗ ಮನೆ ದೈವ ಚಾಮುಂಡಿ ತಾನಾಗಿಯೇ ಮುಂಬೈ ನಗರದಲ್ಲಿ ಇದ್ದ ಯುವಕನನ್ನು ತನ್ನ ಸೇವೆಗಾಗಿ ನೇಮಿಸಿಕೊಂಡಿರುವುದು ಅಚ್ಚರಿ. ಅಲ್ಲದೇ ಫ್ಯಾಷನ್ ಲೋಕದ ಗೀಳು ಅಂಟಿಸಿಕೊಂಡಿದ್ದ ಸನಿಧ್​ಗೆ ದೈವ, ದೈವಾರಾಧನೆ ಎಲ್ಲವೂ ಹೊಸತು. ಆದರೂ ಸದ್ಯ ಹಿರಿಯರ ಮಾರ್ಗದರ್ಶನವನ್ನು ಪಡೆದು 20 ಕ್ಕೂ ಹೆಚ್ಚು ದರ್ಶನದಲ್ಲಿ ದೈವ ಪಾತ್ರಿಯಾಗಿ ದೈವದ ಸೇವೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಸನಿಧ್ ಪೂಜಾರಿ ಅವರು ದೈವ ಪಾತ್ರಿಯಾಗಿ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ದೈವ ಭಕ್ತಿಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top