ಸಮಾಚಾರ

ಕನ್ನಡ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್.

ಕೊಡಗಿನಲ್ಲಿ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳ ಪರಿಶೀಲನೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಆಗಮಿಸಿದ್ದಾರೆ. ಕುಶಲ ನಗರ ಮಾರ್ಗವಾಗಿ ಮಾದಾಪುರಕ್ಕೆ ಸಚಿವೆ ಭೇಟಿ ನೀಡಿದ್ದು ಆದರೆ ಕುಶಾಲನಗರ ಬಡಾವಣೆಗಳಿಗೆ ತೆರಳದೆ ಅಲ್ಲಿನ ಜನರ ಕೋಪಕ್ಕೆ ಕಾರಣರಾಗಿದ್ದಾರೆ. ಇನ್ನು ಮಾದಾಪುರದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿರುವ ನಿರ್ಮಲ ಸೀತಾರಾಮನ್ ಅಲ್ಲಿ ಯಾವ ರೀತಿಯಾದ ಹನಿಯಾಗಿ ಅದಕ್ಕೆ ಕೈಗೊಳ್ಳಬೆಕಾದ ಪರಿಹಾರ ಕಾರ್ಯಗಳೇನು ಎಂಬುದರ ಜೊತೆಗೆ ಕೇಂದ್ರ ಸರ್ಕಾರ ಈ ಪ್ರದೇಶಕ್ಕೆ ಯಾವ ರೀತಿಯ ಅನುದಾನವನ್ನು ಬಿಡುಗಡೆ ಮಾಡಬೇಕು ಎನ್ನುವ ಅಂಶಗಳನ್ನು ಅವಲೋಕಿಸಿದ್ದಾರೆ.

ಈ ವೇಳೆ ಕನ್ನಡ ಮಾಧ್ಯಮಗಳ ಮೇಲೆ ಸಚಿವೆ ನಿರ್ಬಂಧ ಹೇರಿದ್ದು ಮಾಧ್ಯಮಗಳು ಬರದಹಾಗೆ ಆಜ್ಞೆ ಮಾಡಿದ್ದರಂತೆ. ಎಸ್ಪಿ ಸುಮನ್ ಕನ್ನಡ ಮಾಧ್ಯಮದವರಿಗೆ ಪ್ರವೇಶವಿಲ್ಲ ಎಂದು ತಡೆದಿದ್ದಾರೆ. ಸಚಿವೆ ಭೇಟಿ ವೇಳೆ ಏನು ಕಂಡು ಬಂತು, ಅವರಿಗೆ ಜನರು ಏನು ಹೇಳಿದರು? ಎಂಬುದನ್ನು ತೋರಿಸೋದು ಮಾಧ್ಯಮಗಳ ಕೆಲಸ ಆದರೆ ಅಂಥಾ ಮಾಧ್ಯಮಗಳನ್ನು ಬಿಡದೇ ಕೇವಲ ತಮಗೆ ಬೇಕಾದ ಕೆಲವೊಂದು ಮಾಧ್ಯಮ ಪ್ರತಿನಿಧಿಗಳನ್ನು ಮಾತ್ರ ಕರೆಸಿಕೊಂಡು ಪ್ರವಾಹ ಪೀಡಿತರ ಭೇಟಿ ಮಾಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರವೂ ಅತ್ಯಂತ ಪ್ರಮುಖವಾದುದು. ಅದರಲ್ಲಿ ತಮಗೆ ಬೇಕಾದ ಮಾಧ್ಯಮಗಳನ್ನು ಇಟ್ಟುಕೊಂಡು ಬೇರೆಲ್ಲವನ್ನೂ ನಿರ್ಬಂಧಿಸುವುದು ಸರಿಯಲ್ಲ. ಮಾಧ್ಯಮ ಪ್ರತಿನಿಧಿಗಳನ್ನು ನಿರ್ಬಂಧ ಮಾಡಿದರೆ ಜನರೂ ಕೂಡ ಸುಮ್ಮನೆ ಇರಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಚಿವೆ ಸೀತಾರಾಮನ್ ಅವರ ಈ ನಡೆ ಶ್ರೀಸಾಮಾನ್ಯರಲ್ಲಿ ಅಸಮಧಾನ ಉಂಟು ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top