ಮನೋರಂಜನೆ

ಬೀದಿಯಲ್ಲಿ ತರಕಾರಿ ವ್ಯಾಪಾರಕ್ಕೆ ನಿಂತಳು ಪುನೀತ್ ರಾಜಕುಮಾರ್ ಚಿತ್ರದ ಹೀರೋಯಿನ್.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ರಣವಿಕ್ರಮ ಚಿತ್ರದ ನಾಯಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಬೆಡಗಿ ಆದಾ ಶರ್ಮಾ ಈಗ ಬೀದಿಯಲ್ಲಿ ಕೂತು ತರಾಕಾರಿಗಳನ್ನ ವ್ಯಾಪಾರ ಮಾಡುತ್ತಿದ್ದಾರೆ. ನೋಡೋದಕ್ಕೆ ಸೌಂದರ್ಯ ದೇವತೆಯಂತಿರೋ ಈ ನಟಿ ಯಾಕೆ ಬೀದಿಗೆ ಬಂದಿದ್ದಾಳೆ ಎಂದು ಗಾಬರಿಯಾಗಬೇಡಿ, ಯಾಕೆಂದರೆ ಈಕೆ ತರಕಾರಿ ಮಾಡುತ್ತಿರುವುದು ಸಿನಿಮಾವೊಂದಕ್ಕಾಗಿ ಅಷ್ಟೇ.

 

 

‘ಹಾರ್ಟ್​ ಅಟ್ಯಾಕ್’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ಚೆಲುವೆ, ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜತೆ ‘ಸನ್ ಆಫ್​ ಸತ್ಯಮೂರ್ತಿ,’ ಹಾಗೂ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಜೊತೆ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದರು. ನಂತರ ಟಾಲಿವುಡ್ ಕಾಲಿವುಡ್ ನಲ್ಲೆ ಗಟ್ಟಿಯಾಗಿ ನೆಲೆಯೂರಿರುವ ಆದಾ ಶರ್ಮ ಇದೀಗ ಹೊಸ ಚಿತ್ರಕ್ಕಾಗಿ ಹಳೆ ಸೀರೆ, ಮೇಕಪ್ ಇಲ್ಲದಂತೆ, ಮುಖ ಬಾಡಿದಂತೆ, ಹರಿದ ಸೀರೆ ಉಟ್ಟು, ನಿದ್ದೆ ಇಲ್ಲದೆ, ಬಳಲಿದಂತೆ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಡಿಗ್ಲಾಮ್ ಲುಕ್‌ನಲ್ಲಿ ಫೋಟೋಶೂಟ್ ಮಾಡಲಾಗಿದ್ದು ಅದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.. ಕೇವಲ ಗ್ಲಾಮರ್ ನಲ್ಲಿ ಮಾತ್ರವಲ್ಲಾ ಡಿ ಗ್ಲಾಮ್ ರೋಲ್ ನಲ್ಲೂ ಆದ ಸಕ್ಕತ್ತಾಗಿ ಕಾಣಿಸುತ್ತಾರೆ ಎನ್ನುವ ಅಭಿಪ್ರಾಯಗಳನ್ನು ಅವರ ಅಭಿಮಾನಿಗಳು ಹೊರಹಾಕುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top