ಸಮಾಚಾರ

ಸಿಎಂ ಕುಮಾರಸ್ವಾಮಿ ಆಪ್ತರ ನಿವಾಸದ ಮೇಲೆ ಐಟಿ ದಾಳಿ- ಮಹತ್ವದ ದಾಖಲೆಗಳ ವಶ

ಸಿಎಂ ಕುಮಾರಸ್ವಾಮಿಯವರ ಆಪ್ತ ಮತ್ತು ಅವರ ಎಲ್ಲಾ ವ್ಯವಹಾರಗಳ ಲೆಕ್ಕಪರೀಶೀಲನೆ ನಡೆಸುತ್ತಿರುವ ಚಾರ್ಟರ್ ಅಕೌಂಟೆಂಟ್ ನಿವಾಸದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಲೆಕ್ಕಪತ್ರಗಳನ್ನು ಪರಿಶೀಲನೇ ಮಾಡಿರುವ ಅಧಿಕಾರಿಗಳು ಕೆಲವು ಮುಖ್ಯ ಕಡತಗಳ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ವಿಧಾನಸೌಧ ಪೋಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿದ್ದಾರೆ.

ಚಾರ್ಟರ್ಡ್‌ ಅಕೌಂಟಂಟ್ ಎಚ್‌.ಬಿ.ಸುನಿಲ್ ಅವರ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಸುನೀಲ್ ಅವರ ಜೆ.ಪಿನಗರದ ಮನೆ, ಗುಟ್ಟಹಳ್ಳಿಯ ಕಛೇರಿಗಳ ಮೇಲೆ ಗುರುವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸುನೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರರ ಲೆಕ್ಕ ಪತ್ರ ವ್ಯವಹಾರ ಸಹ ನಿಬಾಯಿಸುತ್ತಿದ್ದಾರೆ. ಅಲ್ಲದೆ ಖ್ಯಾತ ರಾಜಕಾರಣಿಗಳ ಲೆಕ್ಕಪತ್ರಗಳನ್ನು ಅವರು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ..

ಕುಮಾರಸ್ವಾಮಿ ಆಪ್ತ, ಸಿಎ ನಿವಾಸದ ಮೇಲೆ ಐಟಿ ಇಲಾಖೆ ದಾಳಿ ಮಾಡಿರುವುದು ಅವರ ಆಪ್ತರಲ್ಲಿ ಆತಂಕವನ್ನುಂಟು ಮಾಡಿದೆ. ಇವರ ಮನೆಯ ಮೇಲೆ ಇದು ಎರಡನೇ ದಾಳಿ ಎನ್ನಲಾಗಿದ್ದು. ಈ ಮುಂಚೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಇಂತಹುದೇ ದಾಳಿ ನಡೆದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top