ಮನೋರಂಜನೆ

ಹೇಗಿದೆ ಗೊತ್ತಾ? ದಿ ವಿಲನ್‌ಗಾಗಿ ದುಬೈ ಕನ್ನಡಿಗರಿಂದ ‘ಕನ್ನಡಕ್ಕಾಗಿ ಒಂದು ದಿನ’ ಅಭಿಯಾನ

ನಿರ್ದೇಶಕ ಪ್ರೇಮ್ ಎಂದರೆ ಹಾಗೆ, ಏನನ್ನೇ ಮಾಡಿದರು ಕೊಂಚ ಸೆನ್ಸೇಷನ್ ಆಗಿ ಮಾಡುವುದು ಅವರ ಜಾಯಮಾನ ಅದು ಅವರ ಬಹುನಿರೀಕ್ಷಿತ ದಿ ವಿಲನ್ ಚಿತ್ರದಲ್ಲೂ ಮುಂದುವರೆದಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಪರೀತಿ ನಿರೀಕ್ಷೆ ಹುಟ್ಟುಹಾಕಿರುವ ಸುದೀಪ್-ಶಿವಣ್ಣ ಕಾಂಬಿನೇಷನ್ನಿನ ‘ದಿ ವಿಲನ್’ ಚಿತ್ರದ ಬಗ್ಗೆ ಪ್ರೇಕ್ಷಕರು ತಲೆಕೆಡಿಸಿಕೊಂಡು ಕೂತಿದ್ದಾರೆ.. ಈಗಾಗಲೇ ರಿಲೀಸ್ ಆಗಿರೋ ಟೀಸರುಗಳು, ಹಾಡುಗಳು ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.

 

 

ವಾರದ ಹಿಂದೆ ಬೆಂಗಳೂರಿನಲ್ಲಿ ಆಡಿಯೋ ರಿಲೀಸ್ ಮಾಡಿದ್ದ ದಿ ವಿಲನ್ ಟೀಮ್ ಇಂದು ದೂರದ ದುಬೈನಲ್ಲಿ ಕೂಡ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ. ಪ್ರೇಮ್ ಹಿಂದೆ ಅಭಿಮಾನಿಗಳಿಗೆ ಮಾತು ಕೊಟ್ಟಂತೆ ದಿ ವಿಲನ್ ಚಿತ್ರದ ಹಾಡುಗಳನ್ನ ದುಬೈನಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಈ ಹಿಂದೆ ತಮಿಳಿನ ರಜಿನಿಕಾಂತ್ ಅವರ 2.0 ಚಿತ್ರದ ಆಡಿಯೊ ಬಿಡುಗಡೆಯಾದ ಸ್ಥಳದಲ್ಲಿಯೇ ದಿ ವಿಲನ್ ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ..

ಈ ಸ್ಥಳದಲ್ಲಿ ಆಡಿಯೋ ಬಿಡುಗಡೆ ಯಾಗುತ್ತಿರುವ ಮೂರನೇ ಮತ್ತು ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ದಿ ವಿಲನ್ ಸಾಕ್ಷಿಯಾಗಿದೆ.. ಹಾಗಾಗಿ ದಿ ವಿಲನ್‌ ಚಿತ್ರತಂಡವನ್ನು ವೆಲ್ ಕಮ್ ಮಾಡಲು ದುಬೈ ಕನ್ನಡ ಸಿನಿಪ್ರೇಮಿಗಳು ‘ಕನ್ನಡಕ್ಕಾಗಿ ಒಂದು ದಿನ’ ಅನ್ನುವ ಅಭಿಯಾನ ಮಾಡ್ತಿದ್ದಾರೆ. ಈ ಮೂಲಕ ದುಬೈನಲ್ಲಿರುವ ಕನ್ನಡಿಗರೆಲ್ಲಾ ಒಟ್ಟಿಗೆ ಸೇರಿ ಸಮಾರಂಭವನ್ನು ಯಶಸ್ವೀಗೊಳಿಸಲು ರೆಡಿಯಾಗಿದ್ದಾರೆ,, ದಿ ವಿಲನ್‌ಗಳನ್ನ ಪ್ರೀತಿನಿಂದ ಬರಮಾಡಿಕೊಳ್ತಿದ್ದಾರೆ.. ಅಂದಹಾಗೆ ಈ ಕಾರ್ಯಕ್ರಮದಿಂದ ಕಿಚ್ಚ ಸುದೀಪ್ ಕಾರಣಾಂತರಗಳಿಂದ ದೂರ ಉಳಿದಿದ್ದಾರೆ. ಉಳಿದಂತೆ ಶಿವಣ್ಣ, ಅಂಬರೀಶ್, ಶ್ರೀಕಾಂತ್, ಆಮಿ ಜ್ಯಾಕ್ಸನ್, ಮಿಥುನ್ ಚಕ್ರವರ್ತಿ, ಪ್ರೇಮ್ ಮುಂತಾದವರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top