ಸಮಾಚಾರ

“ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು” ಎಂದು ಆಶಿಸಿದ ಸಚಿವ ದೇವೇಗೌಡ.

ಸದ್ಯ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಆಗಿರುವ ಡಾ.ಜಿ ಪರಮೇಶ್ವರ್ ಅವರು ಮುಂದೆ ಮುಖ್ಯಮಂತ್ರಿಯಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹಾರೈಸಿದ್ದಾರೆ. ಫಸ್ಟ್​ ಱಂಕ್​ ರಾಜು ಹಾಗೂ ರಾಜು ಕನ್ನಡ ಮೀಡಿಯಂ ಚಿತ್ರಗಳ ಬಳಿಕ ನಟ ಗುರುನಂದನ್​ ನಟಿಸುತ್ತಿರುವ ‘ರಾಜು ಜೇಮ್ಸ್​ಬಾಂಡ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಿಸಿದ್ದ ಅವರು ಈ ರೀತಿಯಾಗಿ ಹೇಳಿದರು..

ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಇಬ್ಬರೂ ಕೂಡ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಡಾ.ಜಿ.ಪರಮೇಶ್ವರ್​ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರೇ, ಸಚಿವ ಜಿ.ಟಿ ದೇವೇಗೌಡ ಕ್ಯಾಮರಾ ಆನ್ ಮಾಡುವ ಮೂಲಕ ಚಾಲನೆ ಮಾಡಿದರು. ನಂತರ ಇಬ್ಬರೂ ಸೇರಿ ಜೊತೆಯಲ್ಲೇ ಚಿತ್ರದ ಟೀಸರ್ ಲಾಂಚ್ ಮಾಡಿದ್ರು.

 

 

ಇದೆ ವೇಳೆ ಮಾತನಾಡಿದ ಪರಮೇಶ್ವರ್ ಅವರು ‘ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ನಮ್ಮ ಸಮ್ಮಿಶ್ರ ಸರ್ಕಾರ ಯಾವಾಗಲೂ ಸಿದ್ಧವಾಗಿರುತ್ತೆ. ಆದರೆ, ನಾವು ನೇರವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲು ಆಗೋದಿಲ್ಲ. ಯಾಕಂದ್ರೆ ನಾವು ಜೆಡಿಎಸ್ ನವರನ್ನೂ ಕೇಳಬೇಕು.’ ಎಂದು ಹೇಳಿದರು ನಂತರ ಮಾತನಾಡಿದ ದೇವೇಗೌಡ ” ಪರಮೇಶ್ವರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ಹಾರೈಸುತ್ತೇನೆ.. ಇವತ್ತು ನಾನು ಈ ವೇದಿಕೆಯ ಮೇಲೆ ಇರೋದಕ್ಕೆ ಡಾ.ರಾಜಕುಮಾರ್ ಅವರೇ​ ಕಾರಣ. ಅವರ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ಜೀವನದಲ್ಲಿ ತುಂಬಾ ಬದಲಾವಣೆ ಮಾಡಿಕೊಂಡಿದ್ದೆ”ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top