ಸಮಾಚಾರ

ಕೊಡಗು ಸಂತ್ರಸ್ತ ಮಕ್ಕಳ ಸಂಕಷ್ಟ ಆಲಿಸಿದ ಪ್ರಿಯಾಂಕಾ ಉಪೇಂದ್ರ.

ಕೊಡಗಿನಲ್ಲಿ ಭಯಂಕರ ಮಳೆಯಿಂದಾಗಿ ಭೀಕರ ಪ್ರವಾಹದ ಭೀತಿ ಉಂಟಾಗಿರುವ ವಿಚಾರ ಎಲ್ಲರಿಗೂ ಗೊತ್ತು. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರಣಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.

ಅದೇ ರೀತಿ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಕೊಡಗು ಸಂತ್ರಸ್ತ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಅವರ ಸಂಕಷ್ಟಗಳನ್ನು ಆಲಿಸಿ ಬಂದಿದ್ದಾರೆ. ಕೊಡಗು ಪ್ರವಾಹ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ಉಪ್ಪಿ ಫೊಂಡೆಷನ್ ಅಡಿಯಲ್ಲಿ ಆ ಜನರಿಗೆ ಬೇಕಾದ ಮೂಲಭೂತ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

 

 

ಜೊತೆಗೆ ಪ್ರಹಕ್ಕೆ ತುತ್ತಾಗಿರುವ ಕೊಡಗಿನ ಈಗಿನ ಪರಿಸ್ಥಿತಿಯ ಬಗ್ಗೆ ತಮ್ಮ ಫೇಸ್’ಬುಕ್ ಅಕೌಂಟ್ ನಲ್ಲಿ ತಿಳಿಸಿರುವ ಪ್ರಿಯಾಂಕಾ “ಕೊಡಗಿನಲ್ಲಿ ಉಂಟಾಗಿರೋ ಪ್ರವಾಹದಿಂದ ಇಲ್ಲಿನ ಜನರು ಮನೆ, ಆಸ್ತಿ, ಕೆಲಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ.. ಅವರು ಮತ್ತೆ ಮಾಮೂಲಿ ಜೀವನಕ್ಕೆ ಮರಳು ನಿಮ್ಮ ನೀರಾವಿನ ಅಗತ್ಯ ತುಂಬಾ ಇದೆ. ಅವರಿಗೆ ಎಲ್ಲರೂ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top