ಸಮಾಚಾರ

ದಮಯಂತಿ’ಗೆ ಮನಸೋತರಂತೆ ರಾಧಿಕಾಕುಮಾರಸ್ವಾಮಿ

ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದ ಎಂಟ್ರಿ ಮಾಡಿದಾಗಿನಿಂದ ಇಲ್ಲಿಯವರೆಗೂ ಅದೇ ಸೌಂದರ್ಯ ಉಳಿಸಿಕೊಂಡವರು. ರಾಧಿಕಾ ಅಂತ ಹೆಸರು ಕೇಳಿದ್ರೆ ಸಾಕು ‘ಅಣ್ಣ ತಂಗಿ’ ಚಿತ್ರ ನೆನಪಿಸಿಕೊಳ್ಳುವ ಜನ ಇಂದಿಗೂ ರಾಧಿಕಾ ಸಿನಿಮಾಗಳನ್ನು ಮರೆತಿಲ್ಲ. ಇತ್ತೀಚಿಗೆ ಕೊಂಚ ಸಮಯ ಸಿನೆಮಾಗಳಿಂದ ಬಿಡುವು ಪಡೆದಿದ್ದ ಈ ನಟಿ ಮತ್ತೆ ಬಣ್ಣ ಹಚ್ಚಿ ಪ್ರೇಕ್ಷಕರಿಗೆ ರಸದೌತಣ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಹೌದು ರಾಧಿಕಾ ಕುಮಾರಸ್ವಾಮಿ ಅವರು ಈಗ ದಯವಂತಿ ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಧಿಕಾ ದಮಯಂತಿ ಟೈಟಲ್ ನಂಗೆ ಈ ಪ್ರಾಜೆಕ್ಟ್ ಗೆ ಸಹಿ ಮಾಡುವಂತೆ ಆಕರ್ಷಣೆ ಮಾಡಿತು. 1980 ರ ದಶಕದ ರೀತಿಯ ಕಥೆ ಇದಾಗಿದೆ, ಹಾಸ್ಯಭರಿತ ಹಾರರ್ ಚಿತ್ರ ಇದಾಗಿದೆ. ದಮಯಂತಿ ಹೆಸರಿಗೆ ಆಕರ್ಷಿತವಾಗಿ ನಾನು ಸಹಿ ಹಾಕಿದ್ದೇನೆ , ಈ ಪಾತ್ರಕ್ಕೆ ನಾನು ಸೂಕ್ತ ಎಂದು ನನಗೆ ಎನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

 

 

 

ಎಲ್ಲವು ಅಂದುಕೊಂಡರೆ ಆದರೆ ಮುಂದಿನ ತಿಂಗಳು ಗೌರಿ ಹಬ್ಬಕ್ಕೆ ದಯವಂತಿ ಸಿನಿಮಾ ಮಹೂರ್ತ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿದು ಬಂದಿದೆ. ಚಿತ್ರದ ಬಗ್ಗೆ ರಾಧಿಕಾ ಅಭಿಮಾನಿಗಳಲ್ಲಿ ಅತೀವ ಕುತೂಹಲ ಮೂಡಿದೆ.

ಮೂಲಗಳ ಮಾಹಿತಿ ಪ್ರಕಾರ “ಅರುಂಧತಿ’, “ಭಾಗಮತಿ’ ಸಿನೆಮಾಗಳ ರೀತಿಯೇ “ದಮಯಂತಿ’ ಕೂಡ ಇರಲಿದೆ ಎನ್ನಲಾಗಿದೆ, ಕನ್ನಡದ ಮಟ್ಟಿಗೆ ಮಹಿಳಾ ಪ್ರಧಾನವಾಗಿರುವ “ದಮಯಂತಿ’ ಹೈ ಬಜೆಟ್‌ ಸಿನಿಮಾ ಆಗಿದೆ. ಚಿತ್ರವನ್ನು ನವರಸನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ತಬಲಾ ನಾಣಿ, ವಿಜಯ್‌ ಚೆಂಡೂರ್‌, ಕೆಂಪೇಗೌಡ, ಗಿರಿ, ಕಾರ್ತಿಕ್‌, “ಮಜಾ ಟಾಕೀಸ್‌’ ಪವನ್‌, ಸಾಧುಕೋಕಿಲ ಇತರೆ ಕಲಾವಿದರು ಅಭಿನಯ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top