ಸಮಾಚಾರ

ರಕ್ಷಾ ಬಂಧನಕ್ಕೆ ಪ್ರೀತಿಯ ಸಹೋದರಿಗೆ ನೀಡಬಹುದಾದ ಮಹತ್ವದ 5 ಗಿಫ್ಟಗಳು ಇವೆ ನೋಡಿ

ಭಾರತೀಯ ಸಂಪ್ರದಾಯ ಬಿಂಬಿಸುವ ರಕ್ಷಾ ಬಂಧನ ಹಬ್ಬದ ಆಚರಣೆಯನ್ನು ಅಕ್ಕ ಅಥವಾ ತಂಗಿಗೆ ಏನಾದರು ಗಿಫ್ಟ್ ಕೊಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡೋಣ. ಹಾಗಾದರೆ ನೀವು ಗಿಫ್ಟ್ ಕೊಡಬಹುದಾದ ಕೆಲವೊಂದು ಉಡುಗೊರೆಯನ್ನು ನಾವಿಲ್ಲಿ ತಿಳಿಸಿದ್ದೇವೆ.

ಎಫ್.ಡಿ:
ಸಹೋದರಿಯ ಹೆಸರಿನಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಇಡಬಹುದು. ಇದು ಅವಳ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ಕಷ್ಟದ ದಿನದಲ್ಲಿ ಅವಳಿಗೆ ಸಹಾಯವಾಗುತ್ತೆ.

ಆರೋಗ್ಯ ವಿಮೆ:
ರಕ್ಷಾ ಬಂಧನ ಸಮಯದಲ್ಲಿ ನಿಮ್ಮ ಸಹೋದರಿಗೆ ನೀಡಬಹುದಾದ ಇನ್ನೊಂದು ಅತ್ಯಮೂಲ್ಯ ಉಡುಗೊರೆ ಎಂದರೆ ಅದು ‘ ಆರೋಗ್ಯ ವಿಮೆ’. ಈ ಮುಖೇನ ನೀವು ಅವಳಿಗೆ ನಿಜಾರ್ಥದಲ್ಲಿ ಸುರಕ್ಷತೆ ಒದಗಿಸಬಹುದು. ಸೂಕ್ತವಾದ ವಿಮಾ ಮೊತ್ತವನ್ನು ಹೊಂದಿರುವ ವಿಮಾ ಯೋಜನೆಯನ್ನು ನೀವು ಅವಳ ಹೆಸರಿನಲ್ಲಿ ಖರೀದಿ ಮಾಡಬಹುದು. ವೈದ್ಯಕೀಯ ಸೇವೆಗಳು ಬಹಳ ದುಬಾರಿ ಆಗುತ್ತಿರುವ ಈ ಸಂದರ್ಭದಲ್ಲಿ, ಅನಾರೋಗ್ಯ ಕಾರಣಗಳಿಂದ ಆಸ್ಪತ್ರೆಯಲ್ಲಿ ದಾಖಲಾದಾಗ ಇದು ಆಕೆಯೆ ಸಹಾಯಕ್ಕೆ ಬರುವುದು.

 

 

ಬಂಗಾರದ ಇಟಿಎಫ್ (Gold Exchange Traded Fund):
ಹೂಡಿಕೆ ಮಾಡಲು ಬಂಗಾರವು ಭಾರತೀಯರ ಅಚ್ಚುಮೆಚ್ಚಿನ ಆಯ್ಕೆ ಅಗುರುವೂ ನಿಮಗೆ ಗೊತ್ತಿರುವ ವಿಚಾರ. ಕಷ್ಟದ ಸ್ಥಿತಿಗಳಲ್ಲಿ ಚಿನ್ನವು ಯಾವಾಗಲೂ ಸಹಾಯಕ್ಕೆ ಬರುತ್ತದೆ. ಹೀಗಾಗಿ ಚಿನ್ನದ ಮೇಲೆ ಸಹೋದರಿಯ ಹೆಸರಲ್ಲಿ ಹೂಡಿಕೆ ಮಾಡುವುದರಿಂದ ಅವಳ ಭವಿಷ್ಯದ ಜೀವನಕ್ಕೆ ಆರ್ಥಿಕ ಸುಭದ್ರತೆ ನೀಡಬಹುದಾಗಿದೆ.

 

ಶಾಪಿಂಗ್ ಗಿಫ್ಟ್ ಕಾರ್ಡ್:
ನಿಮ್ಮ ಸಹೋದರಿ ಕೆಲವೊಮ್ಮೆ ಅವಳಿಗೆ ಇಷ್ಟವಾದದನ್ನು ನಿಮ್ಮ ಬಳಿ ಕೇಳಲು ಸಾಧ್ಯ ಆಗೋಲ್ಲ ಹಾಗಾಗಿ ಅವಳಿಗೆ ಶಾಪಿಂಗ್ ಗಿಫ್ಟ್ ಕಾರ್ಡ್ ನೀಡಬಹುದು ಇದರಿಂದ ಅವಳು ತನಗಿಷ್ಟವಾದ ವಸ್ತು ಖರೀದಿ ಮಾಡುತ್ತಾಳೆ.

 

ಬ್ಯಾಂಕ್ ಅಕೌಂಟ್ ಮಾಡಿಸಿ:
ನಿಮ್ಮ ಸಹೋದರಿ ಹೆಸರಿನಲ್ಲಿ ಬ್ಯಾಂಕ್ ಖಾತೆ ಮಾಡಿಸಿ ಅವಳಿಗೆ ಅವಶ್ಯಕತೆ ಇದ್ದಾಗಲೆಲ್ಲ ಹಣ ಕಳುಹಿಸಿ.

ಇದಕ್ಕೂ ಹೊರತಾಗಿಯೂ ಅನೇಕ ಗಿಫ್ಟ್ ನೀವು ಕೊಡಬಹುದು, ನಿಮಗೆ ತಿಳಿದಿರುವ ಗಿಫ್ಟ್ ಗಳನ್ನೂ ಕಾಮೆಂಟ್ ಮಾಡಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top