fbpx
ಮನೋರಂಜನೆ

18 ವರ್ಷಗಳಿಂದ ರಮ್ಯಾ ಬೆಸ್ಟ್ ಫ್ರೆಂಡ್ ಆಗಿರೋ ಈತ ಯಾರು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿಲ್ಲ.. ಆ ವಿಷ್ಯ ಹಾಗಿರಲಿ, ಈಗ ರಾಜಕೀಯ ಹೊರತುಪಡಿಸಿದರೆ ರಮ್ಯಾ ಹೆಚ್ಚಾಗಿ ಸುದ್ದಿಯಾಗುತ್ತಿರೋದು ಮದುವೆ ವಿಚಾರವಾಗಿ ಮಾತ್ರ., ಈಕೆಯ ಮದುವೆ ವಿಚಾರವಾಗಿ ಬಹಳ ಹಿಂದಿನಿಂದಲೂ ಪುಂಖಾನುಪುಂಖವಾಗಿ ನಾನಾ ರೀತಿಯ ಸುದ್ದಿ ಹರಿದಾಡುತ್ತಲೇ ಇತ್ತು ಹೀಗಿರೋವಾಗಲೇ ರಮ್ಯಾ ತನ್ನ ಬಹುವರ್ಷಗಳ ಗೆಳೆಯನೊಬ್ಬನನ್ನ ಪರಿಚಯಿಸಿದ್ದಾಳೆ.

ಚಿತ್ರರಂಗದಲ್ಲಿ ಇದ್ದಷ್ಟು ಕಾಲ ಕಿರಿಕ್ಕುಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ರಮ್ಯಾ ಅಷ್ಟಾಗಿ ಯಾರನ್ನು ಹೆಚ್ಚು ಸ್ನೇಹಿತರನ್ನಾಗಿ ಮಾಡಿಕೊಂಡವರಲ್ಲ., ಹೀಗಿದ್ದರೂ ರಮ್ಯಾ ಒಂದಷ್ಟು ಮಂದಿಯ ಜೊತೆಗಿನ ಸ್ನೇಹವನ್ನು ಈಗಲೂ ಕಾಪಿಟ್ಟುಕೊಂಡು ಬಂದಿದ್ದಾರೆ. ಅಂತಹವರಲ್ಲಿ ಮಿಲಿಂದ್ ದಿಯೋರಾ ಎಂಬುವವರು ಕೂಡ ಒಬ್ಬರು. ಇವರು ರಮ್ಯಾಗೆ ಬಹು ವರ್ಷಗಳ ಗೆಳೆಯ.

 

 

ಮೂಲತಹ ಮುಂಬೈನವರಾಗಿರುವ ಮಿಲಿಂದ್​, ಕಾಂಗ್ರೆಸ್ ಪಕ್ಷದ ಯುವ ಮುಖಂಡ.. ಅತಿ ಚಿಕ್ಕ ವಯಸ್ಸಿನಲ್ಲೇ ಆಡಳಿತ ನಡೆಸಿದ ಖ್ಯಾತಿಯನ್ನು ಹೊಂದಿರೋ ಇವರು ತನ್ನ 27ನೇ ವಯಸ್ಸಿಗೆ ಸಂಸದರಾಗಿದ್ದರು., ರಮ್ಯಾ ರಾಜಕೀಯಕ್ಕೆ ಬರುವುದಕ್ಕೂ ಮೊದಲೇ ಇಬ್ಬರೂ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹಕ್ಕೆ ಅಖಂಡ 18 ವರ್ಷಗಳ ಹಿಸ್ಟರಿ ಇದೆ.

ಈ ವಿಷಯವನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ರಮ್ಯಾ ‘18 ವರ್ಷಗಳಾದವು, ಆದಾಗ್ಯೂ ನನ್ನ ಬೆಸ್ಟ್ ಫ್ರೆಂಡ್’ ಅಂತಾ ಬರೆದುಕೊಂಡಿದ್ದಾರೆ. ಇದಕ್ಕೆ ರಿಪ್ಲೆ ಮಾಡಿರೋ ಮಿಲಿಂದ್ ‘ಮತ್ತಷ್ಟು ವರ್ಷಗಳು ಹೀಗೆ ಇರೋಣ’ ಅಂತಾ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top