ಸಮಾಚಾರ

10 ತಲೆಯ ರಾವಣ ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಲು ಹೊರಟ ಸ್ಥಳ ಇದೇ ನೋಡಿ

ರಾವಣನು ರಾಮಾಯಣದಲ್ಲಿ ಲಂಕೆಯ ಇದ್ದ ರಾಕ್ಷಸ ರಾಜ. ರಾವಣನು ಬ್ರಹ್ಮನನ್ನು ಬೇಡಿಕೊಂಡು 10 ಸಾವಿರ ವರ್ಷಗಳ ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. ರಾವಣನ ತಂದೆ ವಿಶ್ರವಸ್ ಎಂಬ ಋಷಿ. ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕ ಕಂಟಕನಾಗಿ ಪರಿಣಮಿಸುತ್ತಾನೆ. ಇವನು ಶಿವನ ಪರಮ ಭಕ್ತನು ಹೌದು. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ.

 

 

ರಾವಣನು ಹಿಮಾಚಲ ಪ್ರದೇಶದ ಸಿರ್‌ಮೋರ್‌ ಜಿಲ್ಲೆಯ ಪೋಡಿ ವಾಲಾ ಮಂದಿರದಲ್ಲಿ ತಾನು ಅಮರನಾಗಿರಬೇಕು ಆಶಿಸಿ ಶಿವನ ಕುರಿತು ತಪಸ್ಸು ಮಾಡಿದನು.ರಾವಣನ ತಪಸ್ಸಿಗೆ ಶಿವನು ಮೆಚ್ಚಿ ವರ ಕೊಡಲು ಸಿದ್ಧನಾದನು ಆದರೆ ಒಂದು ಷರತ್ತು ವಿಧಿಸಿದನು. ಒಂದೇ ರಾತ್ರಿಯಲ್ಲಿ ಸ್ವರ್ಗಕ್ಕೆ ಹೋಗುವ 5 ಮೆಟ್ಟಿಲುಗಳನ್ನು ನಿರ್ಮಾಣ ಮಾಡಲು ತಿಳಿಸಿದನು. ಹೀಗೆ ಐದು ಮೆಟ್ಟಿಲು ನಿರ್ಮಾಣ ಮಾಡಿದರೆ ಮಾತ್ರ ಅಮರನಾಗಿ ಇರುತ್ತೀಯ ಎಂದು ಹೇಳಿದನು.

ಆಗ ರಾವಣ ಐದು ಮೆಟ್ಟು ನಿರ್ಮಾಣ ಮಾಡಲು ಸಿದ್ದನಾದ. ಹೀಗೆ ಮೊದಲನೇ ಮೆಟ್ಟಿಲನ್ನು ಹರಿದ್ವಾರದಲ್ಲಿ ನಿರ್ಮಿಸಿದನು. ಹರ್‌ ಕೀ ಪೌರಿ ಎನ್ನುತ್ತಾರೆ. ಎರಡನೇ ಮೆಟ್ಟಿಲನ್ನು ಹಿಮಾಚಲಪ್ರದೇಶದ ಪೋಡಿ ವಾಲಾ ಮಂದಿರದಲ್ಲಿ ನಿರ್ಮಿಸಿದನು. ಚೂಡೇಶ್ವರ್‌ ಮಹಾದೇವ್ ಮಂದಿರದಲ್ಲಿ ಮೂರನೇ ಸ್ವರ್ಗದ ಮೆಟ್ಟಿಲನ್ನು ನಿರ್ಮಾಣ ಮಾಡಿದನು. ಕಿನ್ನರ್‌ ಕೈಲಾಶ್‌ ಮಂದಿರದಲ್ಲಿ ನಾಲ್ಕನೇ ಸ್ವರ್ಗದ ಮೆಟ್ಟಿಲನ್ನು ನಿರ್ಮಾಣ ಮಾಡಿದನು. ಆದರೆ..

ಇನ್ನೇನು ಐದನೇ ಮೆಟ್ಟಿಲು ನಿರ್ಮಾಣ ಮಾಡಲು ಸಿದ್ಧನಾಗಬೇಕಾದರೆ ದೇವತೆಗಳು ರಾವಣನಿಗೆ ಆಲಸ್ಯ ಉಂಟು ಮಾಡುತ್ತಾರೆ. ಆಗ ರಾವಣ ನಿದ್ರೆಗೆ ಜಾರುತ್ತಾನೆ. ಏಳುವಷ್ಟರಲ್ಲೇ ಬೆಳಗಾಗಿರುತ್ತದೆ. ಹಾಗಾಗಿ ರಾವಣನಿಗೆ ಸಿಕ್ಕ ವರ ವ್ಯರ್ಥವಾಗುತ್ತದೆ. ಮೊದಲ ಮೆಟ್ಟಿಲು ಹರಿದ್ವಾರದಲ್ಲಿರುವ ಹರ್‌ ಕೀ ಪೌರಿವನ್ನು ಸ್ವರ್ಗದ ಮೆಟ್ಟಿಲು ಎನ್ನುತ್ತಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top