ಹೆಚ್ಚಿನ

ನಿಮ್ಮ ಕೆಲಸ ಹಾಗೂ ಹಣಕಾಸಿನ ಸಮಸ್ಯೆ ಪರಿಹಾರವಾಗಬೇಕು ಅಂದ್ರೆ ‘ಅಕ್ಕಿ’ ಒಂದಿದ್ರೆ ಸಾಕು,ಅದು ಹೇಗೆ ಅಂತೀರಾ.ನೀವೇ ನೋಡಿ

ನಿಮಗೆ ಹಣದ ಅಭಾವವಿದ್ದಲ್ಲಿ ನಿಮ್ಮ ಪರ್ಸನಲ್ಲಿ ಸ್ವಲ್ಪ ಅಕ್ಕಿಯನ್ನು ಇಟ್ಟುಕೊಳ್ಳಿ ಹಾಗೆ ಇದರ ಜೊತೆಗೆ ನಿವು ಹಣ ಮತ್ತು ಉದ್ಯೋಗದ ಸಮಸ್ಯೆಯನ್ನು ,ಜೀವನದಲ್ಲಿ  ಅನೇಕ ಒತ್ತಡಗಳನ್ನು  ಎದುರಿಸುತ್ತಿದ್ದರೆ. ಈ ಸರಳವಾದ ಪರಿಹಾರಗಳನ್ನು ಮಾಡಿಕೊಳ್ಳಿ ಎಲ್ಲವೂ ಬಗೆಹರಿಯುತ್ತವೆ.

ಶಿವ ಪುರಾಣದ ಪ್ರಕಾರ,ಕೆಲವು ಸಮಸ್ಯೆಗೆ ಪರಿಹಾರ , ಅಕ್ಕಿಯನ್ನು ಬಳಸುವುದನ್ನು  ಸಹ ಒಳಗೊಂಡಿದೆ.ಅಕ್ಕಿ ಜೀವನದಲ್ಲಿ ಇರುವ ಅನೇಕ ತೊಂದರೆಗಳನ್ನು ಹೊಡೆದೋಡಿಸುತ್ತದೆ.ಆದರೆ ಅಕ್ಕಿಯನ್ನು ಸರಿಯಾಗಿ ಉಪಯೋಗಿಸುವ ಮಾರ್ಗವನ್ನು ತಿಳಿದುಕೊಳ್ಳಬೇಕು ಅಷ್ಟೇ. ಅಕ್ಕಿಯನ್ನು ಉಪಯೋಗಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.ಹಿಂದೂ ಧರ್ಮದಲ್ಲಿ   ಯಾವುದೇ  ಆಚರಣೆಗಳನ್ನು ಮಾಡಿದರು ಸಹ ಅಕ್ಷತೆ ಕಾಳು ಎಂದು ಕರೆಯುವ ಹಳದಿ ಬಣ್ಣ ಹಚ್ಚಿದ ಅಕ್ಕಿ ಕಾಳು ಇದ್ದೆ ಇರುತ್ತದೆ.ಅಕ್ಷರಶಃ ಅಕ್ಷತೆ ಎಂದರೆ ಇದರ ಅರ್ಥ ಪರಿಪೂರ್ಣ ಅಥವಾ ಭಿನ್ನ ಮಾಡಲು ಆಗದೇ ಇರುವಂತದ್ದು ಎಂದರ್ಥ.ಆದ್ದರಿಂದ ಧರ್ಮ ಕಾರ್ಯಗಳಲ್ಲಿ  ಅಕ್ಕಿಯನ್ನು ಬಳಸುವುದು  ತುಂಬಾ ಒಳ್ಳೆಯದು.ಆದರೆ ಅಕ್ಕಿಯು ಒಡೆದು ತುಂಡು ತುಂಡಾಗಿ ಹೋಗಿರಬಾರದು.

ನಮ್ಮ ಕೆಲಸದಲ್ಲಿ ಇರುವ ತೊಂದರೆಗಳನ್ನು ನೀಗಿಸಬಲ್ಲ ಸುಲಭವಾಗಿ ಬಗೆಹರಿಸಬಲ್ಲ ಅಂತಹ ಸರಳವಾದ ಪರಿಹಾರವನ್ನು ತಿಳಿದುಕೊಳ್ಳೋಣ.

ವೃತ್ತಿ ಮತ್ತು ಹಣಕಾಸಿನ ಸಮಸ್ಯೆಗೆ ಪರಿಹಾರಗಳು.

 

 

 

ಕೆಲಸಕ್ಕೆ ಸಂಬಂಧಪಟ್ಟ ಒತ್ತಡಗಳನ್ನು ನಿವಾರಿಸಲು

ನಿಮ್ಮ ಅದೃಷ್ಟವನ್ನು   ವೃದ್ಧಿಸುವ ಮತ್ತು ಉತ್ತಮ ಗೊಳಿಸುವ ಪರಿಹಾರ.ಹಾಗೆ   ನಿಮ್ಮ ಕನಸಿನ ಉದ್ಯೋಗವನ್ನು  ಪಡೆದುಕೊಳ್ಳಲು ಸಿಹಿ ಮಿಶ್ರಿತ ಅನ್ನವನ್ನು ಕಾಗೆಗಳಿಗೆ ಆಹಾರವಾಗಿ ನೀಡಿ.ಅಕ್ಕಿಯನ್ನು ಬೇಯಿಸಿದ ನಂತರ  ತಿನ್ನಲು ತಯಾರಾದ ಅನ್ನಕ್ಕೆ ಸಕ್ಕರೆ ಅಥವಾ ಬೆಲ್ಲದ  ಪುಡಿಯನ್ನು  ಮಾಡಿಕೊಂಡು ಮಿಶ್ರಣ ಮಾಡಿ ಒಂದು ಬಟ್ಟಲಿಗೆ ಹಾಕಿ ತಾರಸಿಯ ಮೇಲೆ ಅಂದರೆ ನಿಮ್ಮ ಮನೆಯ  ಮಹಡಿಯ ಮೇಲೆ ಇಟ್ಟು ಬನ್ನಿ.ಅವುಗಳನ್ನು ಪಕ್ಷಿಗಳು,ಕಾಗೆಗಳು ಬಂದು ತಿನ್ನುತ್ತವೆ ಹೀಗೆ ಪ್ರತಿದಿನ ಬೆಳಗ್ಗೆ ಈ ಸಣ್ಣ ಕೆಲಸ ಮಾಡಿ ನೋಡಿ .

ಹಳದಿ ಅಕ್ಕಿ (ಅಕ್ಷತೆ) ಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ:ನೀವು ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ.ಸ್ವಲ್ಪ ಅಕ್ಷತೆಯನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ.ಸ್ವಲ್ಪ ಅಕ್ಕಿಯನ್ನು ನೀರಿನಲ್ಲಿ ನೆನೆಸಿ ನಂತರ ಹರಿಷಿನವನ್ನು ಹಾಕಿ ಮಿಶ್ರಣ ಮಾಡಿ ಒಣಗಲು ಬಿಡಿ.ಅದರಲ್ಲಿ ಸ್ವಲ್ಪ ಅಕ್ಕಿಯನ್ನು ನಿಮ್ಮ ಪರ್ಸ್ ಅಥವಾ ವಾಲೆಟ್ ನಲ್ಲಿ ಇಟ್ಟುಕೊಳ್ಳಿ. ಆಗ ದೇವಿ ಲಕ್ಷ್ಮೀಯ ಅನುಗ್ರಹದ ಜೊತೆಗೆ ಆಶೀರ್ವಾದವು ಸಿಗುತ್ತದೆ ಎಂಬುದನ್ನು ಖಚಿತವಾಗಿ ಹೇಳಬಹುದು.ಮತ್ತು ನಿಮ್ಮ ಪರ್ಸನಲ್ಲಿ ಹಣವು ಸಹ ತುಂಬುತ್ತದೆ.

ಶಿವಲಿಂಗಕ್ಕೆ ಅಕ್ಕಿಯನ್ನು ಅರ್ಪಿಸಿ:ಶಿವಲಿಂಗಕ್ಕೆ ಸ್ವಲ್ಪ ಅಕ್ಕಿಯನ್ನು  ಪ್ರತಿ ಸೋಮವಾರ ಅರ್ಪಿಸಿ ಮತ್ತು ನಂತರ ಅಕ್ಕಿಯನ್ನು ಬಡವರಿಗೆ ದಾನ ಮಾಡಿ.ಇದು ನಿಮ್ಮ ಜೀವನದಲ್ಲಿ ನೀವು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಂತಹ ತೊಂದರೆಯನ್ನು  ನಿಮ್ಮ  ಜೀವನದಿಂದ ದೂರ ಮಾಡುತ್ತದೆ.

ಬಡವರಿಗೆ ಅಕ್ಕಿಯನ್ನು ದಾನ ಮಾಡಿ:ನಿಮ್ಮ ಅದೃಷ್ಟ ವೃದ್ಧಿಸಲು ಮತ್ತು ಉತ್ತಮಗೊಳ್ಳಲು ಅಕ್ಕಿಯನ್ನು ದಾನ  ಮಾಡಬೇಕು.ಚಂದ್ರನು ಮನಸ್ಸಿಗೆ ಸಂಬಂಧಪಟ್ಟ ಗ್ರಹ. ಜ್ಯೋತಿಶ್ಯಾಸ್ತ್ರದಲ್ಲಿ  ಚಂದ್ರನನ್ನು ತಾಯಿಯೆಂದು ಪರಿಗಣಿಸಲಾಗಿದೆ ಮತ್ತು ಸ್ತ್ರೀ ಗ್ರಹ ಎಂದೂ ಸಹ ಕರೆಯಲಾಗುತ್ತದೆ. ನಿಮ್ಮ ಜಾತಕದಲ್ಲಿ ಒಂದು ವೇಳೆ ಚಂದ್ರನು ನೀಚನಾಗಿದ್ದರೆ ಅಂದರೆ ಪಾಪ ಗ್ರಹಗಳ ಜೊತೆ ಇದ್ದರೆ. ನಿಮ್ಮ ತಾಯಿಗೆ ಅಕ್ಕಿಯನ್ನು ದಾನವಾಗಿ ನೀಡಲು ಹೇಳಿ.

ಯಾರಿಗೆ ಅಕ್ಕಿಯ ಅವಶ್ಯಕತೆ ಇರುವುದೋ ಅಂತವರಿಗೆ ಪ್ರತಿದಿನ ಒಂದು ಕೈ ಹಿಡಿ ಅಂದರೆ ನಿಮ್ಮ ಕೈ ಮುಷ್ಟಿಯಲ್ಲಿ ಹಿಡಿಯುವಷ್ಟು ಅಕ್ಕಿಯನ್ನು  ಸಹ ದಾನ ಮಾಡಿದರೆ ಸಾಕು.ನಿಮ್ಮ ಜೀವನದಲ್ಲಿ ಎಲ್ಲವೂ ವೃದ್ಧಿಯಾಗಲು  ಪ್ರಾರಂಭವಾಗುತ್ತದೆ. ನಿಮ್ಮ ಮನಸ್ಸು ಸಹ ತೀಕ್ಷ್ಣವಾಗಿ ಎಲ್ಲವನ್ನು ಗುರುತಿಸುತ್ತದೆ  ಮತ್ತು  ತೀಕ್ಷ್ಣವಾದ ಮನಸ್ಸಿನಿಂದ ನೀವು ಬಂದ  ಅವಕಾಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಮನಸ್ಸು ಕೇಂದ್ರೀಕರಿಸುತ್ತದೆ.ಹೀಗೆ ಒಳ್ಳೆಯ ನಿರ್ದಾರಗಳನ್ನು ತೆಗೆದುಕೊಳ್ಳಲು ಸಹ ಮನಸ್ಸು ಯೋಚಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top