ಮನೋರಂಜನೆ

“ಟೈಗರ್ ಮಲಗಿತ್ತಾ?” ವಾಜಪೇಯಿ ವಿಚಾರವಾಗಿ ಹಿಗ್ಗಾಮಗ್ಗಾ ಟ್ರೋಲ್’ಗೆ ಆಹಾರವಾದ ಸಲ್ಮಾನ್ ಖಾನ್.

ಸಿನಿಮಾ ನಟ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಇಂಥಾ ಟ್ರೋಲ್ ಗಳು ಅದೆಷ್ಟೇ ದೊಡ್ಡ ನಟನಾಗಿದ್ದರೂ ಬಿಡೋದಿಲ್ಲ, ಇದೀಗ ಟ್ರೋಲ್’ಗೆ ಆಹಾರವಾಗಿರೋದು ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್. ಅಷ್ಟಕ್ಕೂ ಸಲ್ಮಾನ್ ಖಾನ್ ಟ್ರೋಲ್ ಆಗಲು ಕಾರಣವೇನು? ಅಂಥಾ ಕೆಲಸ ಸಲ್ಲುಮಿಯಾ ಏನ್ ಮಾಡುದ್ರು? ಅಂತೀರಾ? ಮುಂದೆ ಓದಿ.

ಸಲ್ಮಾನ್ ಖಾನ್ ಅವರು ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂತಾಪ ಸೂಚಿಸಿದ್ದು ಟ್ರೋಲ್ ಮಾಡುವವರಿಗೆ ವೇದಿಕೆ ಮಾಡಿಕೊಟ್ಟಿತು. ವಾಜಪೇಯಿ ನಿಧನದ ದಿನ ಭಾರತದ ಎಲ್ಲಾ ಸೆಲೆಬ್ರೆಟಿಗಳು ತಂತಮ್ಮ ಶೋಷಿಯಲ್ ಮೀಡಿಯಾ ಮೂಲಕ ಅಗಲಿದ ನಾಯಕನಿಗೆ ಶ್ರದ್ದಾಂಜಲಿ ಅರ್ಪಿಸಿದ್ದರು. ಆದರೆ ಸಲ್ಮಾನ್ ಖಾನ್ ಮಾತ್ರ ವಾಜಪೇಯಿ ಸತ್ತು 5 ದಿನಗಳು ಕಳೆದ ನಂತ್ರ ಸಂತಾಪ ಸೂಚಿಸಿದ್ದಾರೆ.

“ಅದ್ಭುತ ನಾಯಕ, ರಾಜಕಾರಣದ ಮುತ್ಸದ್ಧಿ, ಮಾನವತಾವಾದಿಯನ್ನು ನಾವು ಕಳೆದುಕೊಂಡಿದ್ದೇವೆ.. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ಮಾಡಿದ್ದು ವಾಜಪೇಯಿ ನಿಧರಾದ 5 ದಿನದ ನಂತರ.. ವಾಜಪೇಯಿ ನಿಧನ ಹೊಂದಿದ ವಿಷಯ ಸಲ್ಲುಗೆ ಈಗ ಗೊತ್ತಾಯಿತಾ? ಟೈಗರ್ ನಿದ್ದೆ ಮಾಡುತ್ತಿತ್ತಾ? ಎಂಬಿತ್ಯಾದಿ ಟ್ರೋಲಿಗರು ಸಲ್ಮಾನ್ ಖಾನ್ ಕಾಲೆಳೆದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top