ಸಮಾಚಾರ

ಸರ್ಕಾರಿ ಶಾಲೆ ಉಳಿಸಲು 7676444225 ನಂಬರ್‌ಗೆ ಮಿಸ್ಡ್ ಕಾಲ್ ಅಭಿಯಾನಕ್ಕೆ ಕೈಜೋಡಿಸಿದ 2 ಲಕ್ಷ ಮಂದಿ.

ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಅವರು ಆರಂಭಿಸಿದ್ದ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಎರಡು ಲಕ್ಷಕ್ಕೂ ಅಧಿಕ ಮಂದಿ ಕೈಜೋಡಿಸಿದ್ದಾರೆ. ಹೊಸ ರಾಜ್ಯ ಶಿಕ್ಷಣ ನೀತಿ ರೂಪಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮಿಸ್ಡ್ ಕಾಲ್ ಅಭಿಯಾನಕ್ಕೆ ಸದ್ಯ ಇದೀಗ ಎರಡು ಲಕ್ಷಕ್ಕಿಂತ ಅಧಿಕ ಮಂದಿ missed call ಮಾಡಿ ಬೆಂಬಲ ಸೂಚಿಸಿದ್ದಾರೆ.. ಈ ಅಭಿಯಾನವನ್ನು ಬೆಂಬಲಿಸುವವರು 7676444225 ನಂಬರ್‌ಗೆ ಮಿಸ್ಡ್‌ ಕಾಲ್‌ ನೀಡಬಹುದು..

 

 

ಸೆಪ್ಟೆಂಬರ್ 8ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಿಂದ ವಿಧಾನಸೌಧಕ್ಕೆ ಬೃಹತ್‌ ಕಾಲ್ನಡಿಗೆ ಆಂದೋಲವವನ್ನು ಆಯೋಜಿಸಲಾಗಿದೆ. ಈ ಆಂದೋಲನಕ್ಕೆ ಜನರ ಬೆಂಬಲ ಪಡೆಯುವ ಸಲುವಾಗಿ ಮಿಸ್ಡ್‌ ಕಾಲ್‌ ಅಭಿಯಾನ ನಡೆಸಲಾಗುತ್ತಿದೆ.. ಇದಕ್ಕೆ ಸಂಭಂದಿಸಿದ ಪೋಸ್ಟ್‌ಗಳು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್‌ ಆಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷ ಣ ಕ್ಷೇತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಬಜೆಟ್‌ನಲ್ಲಿ ಎಂದಿಗಿಂತ ಹೆಚ್ಚಿನ ಹಣ ಮೀಸಲಿಡಬೇಕು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿದರೆ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ ಎಂಬ ಸಂದೇಶ ಸಾರುವ ಸಲುವಾಗಿ 7676444225 ನಂಬರ್‌ಗೆ ಮಿಸ್ಡ್ ಕಾಲ್ ಆಂದೋಲವನ್ನು ಕೈಗೊಳ್ಳಲಾಗಿದೆ.

ನೀವೂ ಮಿಸ್ಡ್‌ಕಾಲ್‌ ಕೊಡಿ:
ಸರ್ಕಾರಿ ಶಾಲೆಗಳನ್ನೂ ಉಳಿಸುವ ಅಂಗವಾಗಿ ಕೆಲವು ದಿನಗಳ ಹಿಂದೆಯಷ್ಟೇ ಆರಂಭಗೊಂಡ ಮಿಸ್ಡ್‌ಕಾಲ್‌ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹೊಸ ಶಿಕ್ಷ ಣ ನೀತಿ ರೂಪಿಸಲು ಮೊ: 7676444225ಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕ ಈ ಆಂದೋಲನದ ಜತೆ ಯಾರು ಬೇಕಾದರೂ ಕೈ ಜೋಡಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top