ಮನೋರಂಜನೆ

ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಸವಾಲು ಎಸೆದ ನಟಿ ಸಿಂಧು ಲೋಕನಾಥ್.

ಸಾಮಾಜಿಕ ಜಾಲತಾಣಗಲ್ಲಿ ಸಲೆಬ್ರೆಟಿಗಳ ದೆಸೆಯಿಂದ ಜನ್ಮ ಪಡೆದುಕೊಳ್ಳುವ ವೆರೈಟಿ ಚಾಲೆಂಜುಗಳ ಹಂಗಾಮ ಯಾವುದೇ ಅಡೆ ತಡೆಗಳಿಲ್ಲದೆ ಭರ್ಜರಿಯಾಗಿ ಮುಂದುವರೆದಿದೆ. ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡು ಅದರ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಹವ್ಯಾಸ. ಇತ್ತೀಚಿಗೆ ಕಿರಿಕಿರಿ ಉಂಟುಮಾಡಿದ್ದ ಕಿಕಿ ಡಾನ್ಸ್ ಚಾಲೆಂಜ್ ವೈರಲ್ ಆಗಿತ್ತು. ಇದೀಗ ಕನ್ನಡ ನಟಿ ಸಿಂಧು ಲೋಕನಾಥ್ ಅದಕ್ಕೆ ಸೆಡ್ಡು ಹೊಡೆದು ಟುವ್ವಿಟುವ್ವಿ ಚಾಲೆಂಜ್ ಕಂಡುಹಿಡಿದಿದ್ದಾರೆ.

 

 

ತಮ್ಮ ಇನ್​​ಸ್ಟಾಗ್ರಾಂ ಅಕೌಂಟ್ ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿರುವ ಸಿಂಧು ಲೋಕನಾಥ್ ಅವರು ಸ್ಕೂಟಿಯಿಂದ ಇಳಿದು ಶಿವರಾಜಕುಮಾರ್​ ನಟನೆಯ ಆನಂದ್​ ಚಿತ್ರದ ‘ಟುವ್ವಿ ಟುವ್ವಿ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.. ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ಮಾಡುವಂತೆ ಸಿಂಧು ಈ ಚಾಲೆಂಜ್ ಹಾಕಿದ್ದಾರೆ

“ಕಿಕಿ ಚಾಲೆಂಜ್​ಗೆ ಬದಲಾಗಿ ಇದು ಕನ್ನಡ ಟುವ್ವಿ ಟುವ್ವಿ ಚಾಲೆಂಜ್,, ​ ಶಿವಣ್ಣನ ಅಭಿಮಾನಿಗಳು ಒಳಗೊಂಡಂತೆ ಕನ್ನಡಿಗರೆಲ್ಲರೂ ಇದನ್ನು ಸ್ವೀಕರಿಸಿ ಎಂದು ಸಿಂಧು ತಿಳಿಸಿದ್ದಾರೆ. ವಿದೇಶದ ಕಿಕಿ ಹಾಡನ್ನ ಚಾಲೆಂಜ್ ಆಗಿ ಸ್ವೀಕರಿಸುವ ಜನರು ಲೋಕಲ್ ಹಾಡಿಗೆ ಮಾಡಿ ತೋರಿಸಿ ಎಂದು ಸಿಂಧು ಬರೆದುಕೊಂಡಿದ್ದ್ದಾರೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ..

 

 

View this post on Instagram

 

This is called drake ko brake lagao.. . Ok guys enuf of #kikichallenge . Let’s get local. So all u kannadiga’s out there, all #shivanna fans out there take up this #tuvituvichallenge. Tag shivanna, tag me.. I challenge @pawankumarfilms @d12thman @sauravlokesh @sathish_ninasam_official @bhavanaa_raao @eyeofvicto to take up this #tuvituvichallenge and post a video. . . #musically #shivannafans #kannadamusically #sandalwood #kannadamovies #musicallyvideo @kannadamusical.ly @kannadadubsmash #kannadaindustry #kannadigas #sandalwoodstudios #namcinema #shivarajkumar @shivarajkumar.fans #shivarajkumarabhimani #sandalwood_actorss #karnataka_filmywood #trollmava #trollanthammas @kannadacinema24 @kannada_mandhi Behind the scenes credit: @avigolecha & @thoshitha

A post shared by Sindhu Loknath (@sindhuloknath) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top