ಮನೋರಂಜನೆ

ಕೇರಳ ಪ್ರವಾಹ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳನ್ನು ಪೂರೈಸಿದ ಸನ್ನಿ ಲಿಯೋನ್ ದಂಪತಿ.

ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೇರಳ ಅಕ್ಷರಶ ಕಂಗಾಲಾಗಿ ಹೋಗಿದೆ. ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ..

 

ಕೇರಳದಲ್ಲಿ ಸಂಭವಿಸಿರುವ ಇಂಥ ಭಯಾನಕ ಪ್ರವಾಹಕ್ಕೆ ತುತ್ತಾಗಿ ನಿರಾಶ್ರಿತರಾಗಿರುವ ಜನರಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ನೆರವಿಗೆ ದಾವಿಸಿದ್ದಾರೇ. .ಮಹಾಮಳೆಗೆ ನುಲುಗಿದ ಸಂತ್ರಸ್ತರ ನೆರವಿಗೆ ಧಾವಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಪ್ರವಾಹ ಸಂತ್ರಸ್ತರ ನಿಧಿಗೆ ಇತ್ತೀಚಿಗೆ 5ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು. ದಕ್ಷಿಣದ ಅನೇಕ ನಟ ನಟಿಯರು ಕೂಡ ಕೇರಳ ಪ್ರವಾಹ ಪೀಡಿತ ಜನರಿಗೆ ಧನಸಹಾಯ ಮಾಡಿದ್ದರು. ರಜಿನಿಕಾಂತ್ ಅವರಂತ ನಟರೇ ಕೇವಲ ಹದಿನೈದು ಲಕ್ಷ ದೇಣಿಗೆ ನೀಡಿ ಕೈತೊಳೆದುಕೊಂಡಿದ್ದರು. ಕೇವಲ ಅವರು ಮಾತ್ರವಲ್ಲ ಯಾವ ಸ್ಟಾರ್ ನಟರೂ ಒಂದು ಕೋಟಿ ಮೀರಿ ಸಹಾಯ ಮಾಡಿರಲಿಲ್ಲ. ಆದರೆ ಸನ್ನಿ ಲಿಯೋನ್ ಐದು ಕೋಟಿ ನೀಡುವ ಮೂಲಕ ಇತರೆ ನಟಿ/ನಟರಿಗೂ ಮಾದರಿಯೆನಿಸಿಕೊಂಡಿದ್ದರು.

 


ಇದೀಗ ಮತ್ತೊಮ್ಮೆ ಕೇರಳ ನಿರಾಶ್ರಿತರ ನೆರವಿಗೆ ಧಾವಿಸಿರುವ ಸನ್ನಿಲಿಯೋನ್ ಮತ್ತು ಅವರ ಪತಿ ಡೇನಿಯಲ್ ಸಂತ್ರಸ್ತರಿಗೆ ಬೇಕಿರುವ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಾರೆ.. ಸುಮಾರು 1200 ಕೆಜಿಯಷ್ಟು ಅಕ್ಕಿ ಮತ್ತು ಬೇಳೆಯನ್ನು ನೀಡಿರೋ ಸನ್ನಿ ಈ ವಿಚಾರವನ್ನು ತನ್ನ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top