ಮನೋರಂಜನೆ

ಈ ವಿಶೇಷ ದಿನದಂದು, ಈ ಸುಂದರ ದೇಶದಲ್ಲಿ ನಡೆಯಲಿದೆ ಪಿಗ್ಗಿ- ನಿಕ್ ಮದುವೆ.

ಬಾಲಿವುಡ್’ನಲ್ಲಿ ಬಹುತೇಕ ತಾರೆಯರು ತಮ್ಮ ಸಿನಿಮಾಗಳಿಗಿಂತ ಲವ್, ಅಫೇರು, ಮದುವೆ ವಿಚಾರವಾಗಿಯೇ ಸದ್ದು ಮಾಡೋದು ಹೆಚ್ಚು. ಒಂದೆರೆಡು ಸಿನಿಮಾ ಮಾಡಿದ ಅದರಲ್ಲೂ ಬರಕತ್ತಾದ ನಟಿಯರೇ ಇಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ ಹೀಗಿರುವಾಗ ತನ್ನ ನಟನೆಯ ಖಾದರಿನ ಮೂಲಕವೇ ವಿಶ್ವದಾದ್ಯಂತ ಖ್ಯಾತಿಗಳಿಸಿರುವ ಪ್ರಿಯಾಂಕ್ ಚೋಪ್ರಾ ಈ ಪಟ್ಟಿಯಿಂದ ಹೊರಗಿಡಲು ಸಾಧ್ಯವೇ..? ಕಳೆದ ಒಂದು ತಿಂಗಳಿಂದೀಚೆಗೆ ಬಾಲಿವುಡ್ ತುಂಬಾ ಹೆಚ್ಚು ಸುದ್ದಿಯಾಗುತ್ತಿರುವುದು ನಟಿ ಪ್ರಿಯಾಂಕಾ ಚೋಪ್ರಾ ಮದುವೆಗೆ ಕುರಿತಾದ ಸುದ್ದಿಗಳು.. ಪಿಗ್ಗಿ-ನಿಕ್ ಮದುವೆಗೆ ಸಂಭಂದಿಸಿದ ಸುದ್ದಿಗಳು ದಿನಕ್ಕೊಂದರಂತೆ ಎಲ್ಲೇ ಮೀರಿ ತಿರುವುಗಳನ್ನು ಪಡೆಯುತ್ತಿವೆ.

 

 

ಹಿಟ್ ಸಿನಿಮಾಗಳ ಮೂಲಕವೇ ಸದ್ದು ಮಾಡುತ್ತಿರೋ ಪ್ರಿಯಾಂಕಾ ಚೋಪ್ರಾ ತನ್ನ ಪ್ರಣಯ ಪ್ರಸಂಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿ ಬಿಡುತ್ತಾ ಸದಾ ಚಾಲ್ತಿಯಲ್ಲಿರುತ್ತಾಳೆ. ಬಾಯ್‌ಫ್ರೆಂಡ್ ಜೊತೆಗಿನ ನಾನಾ ಭಂಗಿಗಳ ಫೋಟೋ ಹಾಕೋ ಮೂಲಕ ಚರ್ಚೆಗೆ ಗ್ರಾಸವಾಗಿರೋ ಪಿಗ್ಗಿ ಇದೀಗ ನಿಕ್ ಜೊತೆ ಸಂಬಂಧದಲ್ಲಿದ್ದ ಪ್ರಿಯಾಂಕ ಎಲ್ಲರ ಮುಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಆಗಸ್ಟ್ 18ರಂದು ನಿಕ್-ಪ್ರಿಯಾಂಕ ಎಂಗೇಜ್ಮೆಂಟ್ ಸಂಪ್ರದಾಯದಂತೆ ನಡೆದಿದೆ.

ನಿಶ್ಚಿತಾರ್ಥ ನಡೆದ ಮೇಲೆ ಪಿಗ್ಗಿ ಮದುವೆ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳು ಹರಿದಾಡತೊಡಗಿವೆ. ಅಂದಹಾಗೆ ಈ ಜೋಡಿಯೂ ಕೂಡ ಎಲ್ಲಾ ಸೆಲೆಬ್ರೆಟಿಗಳ ರೀತಿ ಮದುವೆಯನ್ನು ಭಾರತದಿಂದ ಹೊರಗೆ ಮಾಡಿಕೊಳ್ಳಲು ನಿರ್ಧರಿಸಿದೆಯಂತೆ.. ಮಾಧ್ಯಮಗಳ ಕಾಟವನ್ನು ತಪ್ಪಿಸಿಕೊಳ್ಳುವುದು ಇದರ ಹಿಂದಿರುವ ಹಿಡನ್ ಉದ್ದೇಶ. ಮಾಧ್ಯಮಗಳ ವರದಿ ಪ್ರಕಾರ, ಇಬ್ಬರೂ ಸುಂದರ ಹವಾಯಿ ದ್ವೀಪದಲ್ಲಿ ಮದುವೆಯಾಗಲಿದ್ದಾರಂತೆ. ನಿಕ್ ಮತ್ತು ಪಿಗ್ಗಿ ಸೆಪ್ಟೆಂಬರ್ 16ರಂದು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.. ಅಂದು ನಿಕ್ ಜೊನಾಸ್ ಅವರ ಇಪ್ಪತ್ತಾರನೇ ಹುಟ್ಟುಹಬ್ಬವಿದ್ದು ಅಂದೇ ಮದುವೆ ಮಾಡಿಕೊಳ್ಳಲು ಇಬ್ಬರೂ ನಿರ್ಧರಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top