ಭವಿಷ್ಯ

25 ಆಗಸ್ಟ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಶನಿವಾರ, ೨೫ ಆಗಸ್ಟ್ ೨೦೧೮
ಸೂರ್ಯೋದಯ : ೦೬:೨೩
ಸೂರ್ಯಾಸ್ತ : ೧೮:೫೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಶ್ರಾವಣ

ಪಕ್ಷ : ಶುಕ್ಲ ಪಕ್ಷ
ತಿಥಿ : ಚತುರ್ದಶೀ – ೧೫:೧೬ ವರೆಗೆ
ನಕ್ಷತ್ರ : ಶ್ರವಣ – ೦೯:೪೯ ವರೆಗೆ
ಯೋಗ : ಶೋಭಾನ – ೨೦:೦೭ ವರೆಗೆ
ಸೂರ್ಯ ರಾಶಿ : ಸಿಂಹ

ಅಭಿಜಿತ್ ಮುಹುರ್ತ ೧೨:೧೫ – ೧೩:೦೫
ಅಮೃತಕಾಲ :೨೫:೦೦+ – ೨೬:೪೭+
ರಾಹು ಕಾಲ:೦೯:೩೨ – ೧೧:೦೬
ಗುಳಿಕ ಕಾಲ: ೦೬:೨೩ – ೦೭:೫೭
ಯಮಗಂಡ:೧೪:೧೪ – ೧೫:೪೮

ಮಾನಸಿಕವಾಗಿ ಸಣ್ಣಪುಟ್ಟ ಕಿರಿಕಿರಿಗಳು ಇಂದು ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ವಾಹನ ಚಾಲನಾ ವೇಳೆಯಲ್ಲಿ ರಸ್ತೆಯ ಕಡೆ ಗಮನ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಕೆಲವರಿಗೆ ಉದರ ಶೂಲೆ ಕಾಡುವುದು.

ಜಗತ್ತಿನ ಎಲ್ಲ ವೈಭವಗಳು ನಿಮ್ಮಲಿವೆ ಎಂದು ಭಾವಿಸುವಿರಿ. ದೈವ ಕೃಪೆಯಿಂದ ಅಂತಃಶಕ್ತಿಯನ್ನು ಗಳಿಸುವ ನಿಮ್ಮ ಮುಖದಲ್ಲಿ ತೇಜಸ್ಸು ಹೊರಹೊಮ್ಮುವುದು. ಸಂಗಾತಿಯ ಸಾಂಗತ್ಯ ಮುದ ನೀಡುವುದು.

ಮನೋಭಿಲಾಷೆಗಳು ಪೂರ್ಣಗೊಳ್ಳುವುದು. ಸಂಗಾತಿಯು ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುವುದರಿಂದ ಹಣ ಕೈ ಜಾರಿ ಹೋಗುವುದನ್ನು ತಪ್ಪಿಸಿಕೊಳ್ಳುವಿರಿ. ಇದರಿಂದ ಮಡದಿಯ ಮೇಲೆ ಪ್ರೀತಿ ಹೆಚ್ಚಾಗುವುದು.

ಈದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಇದರಿಂದ ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ನಿಮ್ಮ ಮನಸ್ಸಿನ ಬಯಕೆಗಳು ಈಡೇರುವುದು. ಕಚೇರಿಯಲ್ಲಿ ನಿಮ್ಮತನವನ್ನು ಕೊಂಡಾಡುವರು.

 

ಬಂಧುಮಿತ್ರರ ದರ್ಶನವು ನಿಮ್ಮಲ್ಲಿ ನವ ಚೈತನ್ಯ ತುಂಬುವುದು. ಈದಿನ ಎಲ್ಲ ಕೆಲಸ ಕಾರ್ಯಗಳನ್ನು ಸಂತೋಷದಿಂದ ಮುಗಿಸುವಿರಿ. ಸಂಬಂಧಿಕರಿಂದ ಮಹತ್ತರ ಕಾರ್ಯ ಕೈಗೂಡುವುದು.

 

ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯವನ್ನು ಬಗೆಹರಿಸಿಕೊಳ್ಳಲು ಇಂದು ಶುಭಕಾಲ. ಸ್ನೇಹಿತರ ಮುಂದೆ ಇಲ್ಲವೇ ಆಪ್ತ ಸಂಗಾತಿಯ ಮುಂದೆ ನಿಮ್ಮ ಮನಸ್ಸಿನ ವಿಚಾರಗಳನ್ನು ಹಂಚಿಕೊಳ್ಳಿರಿ. ಇದರಿಂದ ಮನೋಲ್ಲಾಸ ಉಂಟಾಗುವುದು.

 

ಜೀವನದಲ್ಲಿ ಮುಂದೆ ಬರಲು ಸಾಕಷ್ಟು ಒಳ್ಳೆಯ ಅವಕಾಶಗಳು ನಿಮ್ಮನ್ನು ಅರಸಿಕೊಂಡು ಬರುವುದು. ಈಗಿರುವ ಕೆಲಸದಲ್ಲಿಯೇ ಮುಂದುವರಿಯುವುದು ಒಳ್ಳೆಯದು. ಶ್ರದ್ಧೆಯಿಂದ ಕಾರ್ಯಗಳನ್ನು ಮಾಡುವಿರಿ.

 

ಮನೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ದೂರದ ಊರಿನಿಂದ ಬಂಧುಗಳು / ಇಷ್ಟಮಿತ್ರರು ಬರುವ ಸಂಭವ. ವ್ಯಾಪಾರ-ವ್ಯವಹಾರಸ್ಥರಿಗೆ ಉತ್ತಮ ದಿನ. ಹಣಕಾಸಿನ ಸ್ಥಿತಿ ತಿಳಿಗೊಳ್ಳುವುದು.

 

ಸ್ನೇಹಿತರೊಂದಿಗೆ ಅತ್ಯುತ್ತಮ ಸಮಯ ಕಳೆಯುವಿರಿ. ಜೀವನಶೈಲಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕಾಗುವುದು. ಜನರು ಸಕಾರಾತ್ಮಕವಾಗಿ ಸ್ಪಂದಿಸುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಯಾಕೋ ಈದಿನ ಹಣವು ನೀರಿನಂತೆ ಖರ್ಚಾಗುವುದು. ನೂತನ ಬೆಲೆ ಬಾಳುವ ವಸ್ತುವಿನ ಖರೀದಿ ಬಗ್ಗೆ ಚಿಂತಿಸುವಿರಿ. ಇದಕ್ಕೆ ನಿಮ್ಮ ಹಿರಿಯರ ಒಪ್ಪಿಗೆಯೂ ದೊರೆಯುವುದು. ಸ್ನೇಹಿತರು ಹಣಕಾಸಿನ ನೆರವು ನೀಡುವರು.

 

ಮೇಲ್ನೋಟಕ್ಕೆ ಕೋಪಿಷ್ಟರಂತೆ ಕಾಣದಿದ್ದರೂ ಕೆಲವೊಮ್ಮೆ ನಿಮ್ಮ ಅಂತರಂಗದ ಸಿಟ್ಟು ಪ್ರಕಟಗೊಳ್ಳುವುದು. ಇದರಿಂದ ಜನ ನಿಮ್ಮೊಡನೆ ಸಲೀಸಾಗಿ ಮಾತನಾಡಲು ಹೆದರುವರು. ಕೋಪ ಅನರ್ಥಕ್ಕೆ ದಾರಿ ನೀಡುವುದು. ಎಲ್ಲರನ್ನೂ ನಗು ಮುಖದಿಂದ ಆರಾಧಿಸಿರಿ.

 

ಈದಿನ ನೀವು ಹೆಚ್ಚು ವಿಶ್ವಾಸದಿಂದ ಇರುವುದರಿಂದ ನಿಮಗೆ ಎಲ್ಲ ಕಡೆಯಿಂದಲೂ ಒಳಿತಾಗುವುದು. ಆದರೆ ಅಹಂಕಾರದಿಂದ ದೂರ ಉಳಿದು ಎಲ್ಲರೊಡನೆ ಆತ್ಮೀಯತೆಯನ್ನು ಪ್ರದರ್ಶಿಸಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top