fbpx
ಸಿನಿಮಾ

ಜಯಲಲಿತಾ ಸತ್ತ ಮೇಲೂ ಡಿಮ್ಯಾಂಡ್ ಕಡಿಮೆಯಾಗಿಲ್ಲ, ಜಯ ಕಥೆಗಾಗಿ ನಡೀತಿದೆ ಜಟಾಪಟಿ

ಆಗಿನ ಡರ್ಟಿ ಪಿಕ್ಚರ್ ನಿಂದ ಹಿಡಿದು ನಿನ್ನೆ ಮೊನ್ನೆ ಬಿಡುಗಡೆಯಾದ ಮಹಾನಟಿ ಸಿನಿಮಾದವರೆಗೂ ಈಗ ಬರೀ ಜೀವನ ಚರಿತ್ರೆಗಳ ಸಿನಿಮಾಗಳೇ ಬಹಳ ಫೇಮಸ್ಸು ,ಹೀಗಿರುವಾಗ ಈಗಾಗಲೇ ತೆಲುಗಿನ ಸೂಪರ್ ಸ್ಟಾರ್ ಎನ್ಟಿಆರ್ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ವೈಎಸ್ ರಾಜಶೇಖರ ರೆಡ್ಡಿ ಅವರ ಆತ್ಮಚರಿತ್ರೆಯ ಚಿತ್ರಗಳು ತೆರೆ ಕಾಣಲು ಸಿದ್ಧವಾಗುತ್ತಿವೆ ಇದರ ಬೆನ್ನಲ್ಲೇ ಅನೇಕ ನಿರ್ಮಾಪಕ ,ನಿರ್ದೇಶಕರು ಒಳ್ಳೆ ಒಳ್ಳೆ ಕಮರ್ಷಿಯಲ್ ಆತ್ಮಚರಿತ್ರೆಗಳನ್ನು ಹುಡುಕುವುದರಲ್ಲಿ ಬ್ಯುಸಿ ಯಾಗಿದ್ದಾರೆ ಇದರಿಂದ ಚೆನ್ನಾಗಿ ಕಾಸು ಕಾಮಾಯಿಸಬಹುದು ಎಂದು ಅವರ ಯೋಜನೆಯಾಗಿದೆ .

 

 

ಆದರೆ ಶಾಕಿಂಗ್ ವಿಷಯ ಏನೆಂದರೆ ತಮಿಳುನಾಡಿನ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆತ್ಮಕಥೆ ಚಿತ್ರವಾಗಿ ಬಿಡುಗಡೆಯಾಗುತ್ತದೆ ಎಂದು ಮೂರು ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿಬಿಟ್ಟಿವೆ, ಮೊದಲಿಗೆ ವಿಷ್ಣು ಇಂದೂರಿ ಎಂಬ ನಿರ್ಮಾಪಕರೊಬ್ಬರು ಜಯಲಲಿತಾ ಅವರ ಜೀವನ ಚರಿತ್ರೆ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದರು ಈ ಚಿತ್ರವನ್ನು ಖ್ಯಾತ ನಟಿ ಅಮಲಾ ಪಾಲ್ ಅವರ ಮಾಜಿ ಪತಿಯಾದ ಎಎಲ್ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂದು ಕೂಡ ಹೇಳಿಕೊಂಡಿದ್ದರು ಹಾಗೆಯೇ ಈ ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು.

ಇದಾದ ಬಳಿಕ ಖ್ಯಾತ ಸಿನಿಮಾಗಾರ್ತಿ ಪ್ರಿಯದರ್ಶಿನಿ ಜಯಲಲಿತಾ ಅವರ ಆತ್ಮಕತೆ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದರು, ಅದಾದ ಸ್ವಲ್ಪ ದಿನದ ನಂತರ ತಮಿಳಿನ ಖ್ಯಾತ ನಿರ್ದೇಶಕರಾದ ಭಾರತಿ ರಾಜಾ ಅವರು ಜಯಲಲಿತಾ ಕುರಿತಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದರು , ಒಬ್ಬ ಸಾಧಾರಣ ನಟಿಯಾಗಿ ಆನಂತರ ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿದ್ದ ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಕ್ಕಾಗಿ ಜಟಾಪಟಿ ನಡೆಸುತ್ತಿರುವ ಈ ಚಿತ್ರ ತಂಡಗಳನ್ನು ಗಮನಿಸಿದರೆ ಮುಂದೆ ಇದು ಯಾವ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾಗುತ್ತದೆ ಎಂಬ ಅನುಮಾನಗಳು ಅನೇಕ ಪ್ರೇಕ್ಷಕರಿಗೆ ಮೂಡುವುದು ಸಹಜ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top