ಹೆಚ್ಚಿನ

ನಾಳೆ ರಕ್ಷಾಬಂಧನ ರಾಖಿಯನ್ನು ಯಾವ ಸಮಯದಲ್ಲಿ ಕಟ್ಟಿದ್ರೆ ಒಳ್ಳೆಯದು,ಪಾಲಿಸಬೇಕಾದ ಮುಖ್ಯ ನಿಯಮಗಳು ಏನೇನು ಹಾಗೂ ಹೇಳಬೇಕಾದ ಮಂತ್ರ ಯಾವುದು ಅಂತ ತಿಳ್ಕೊಳ್ಳಿ.

ಇಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ 5ನೇ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಹಲವಾರು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ .ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ ಉಪಾಕರ್ಮ ಹಬ್ಬವೆಂದು ಸಹ ಆಚರಿಸುತ್ತೇವೆ.

 

 

 

ಈ ಹಬ್ಬವನ್ನು ರಕ್ಷಾಬಂಧನ ಅಥವಾ ರಾಖಿ ಹಬ್ಬ ಎಂದು ಸಹ ಕರೆಯುತ್ತಾರೆ. ಈ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಒಡಹುಟ್ಟಿದವರು ಈ ಹಬ್ಬವನ್ನು ಆಚರಿಸಿ ಕೊಳ್ಳುತ್ತಾರೆ. ಸಹೋದರ-ಸಹೋದರಿಯರ ಸಂಬಂಧವನ್ನು ಮತ್ತು ರಕ್ತ ಸಂಬಂಧವನ್ನು ಗಟ್ಟಿಗೊಳಿಸುವಂತಹ ಸುದಿನವಿದು. ಸಂಸ್ಕೃತದಲ್ಲಿ ರಕ್ಷಾಬಂಧನದ ಅರ್ಥವೇನೆಂದರೆ ರಕ್ಷಣೆಯ ಗಂಟು ಎಂದರ್ಥ.
ಈ ದಿನ ಪ್ರತಿಯೊಬ್ಬ ಸಹೋದರಿಯು ಎಲ್ಲಾ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುವ ದಿನವಿದು. ಇಂತಹ ಮಹತ್ವಪೂರ್ಣ ದಿನವನ್ನು ನಾವು ರಾಖಿ ಕಟ್ಟುವಾಗ ಕೆಲವು ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು. ಅದು ಏನು ಎಂಬುದನ್ನು ಈಗ ತಿಳಿಯೋಣ ಬನ್ನಿ .

ನಾವು ಮಾಡುವ ಪ್ರತಿ ಕೆಲಸಗಳಿಗೂ ಕರ್ಮ ಸಾಕ್ಷಿಯಾಗಿರುತ್ತದೆ. ಆ ಸೂರ್ಯನಾರಾಯಣನ ಮಧ್ಯಾಹ್ನದ ವೇಳೆಯಲ್ಲಿ ಸೂರ್ಯ ಕಿರಣಗಳ ತಾಪ ಹೆಚ್ಚಾಗಿರುತ್ತದೆ. ಇಂತಹ ತೇಜಸ್ಸು ಈ ಸಮಯಯದಲ್ಲಿ ಅಡಗಿರುತ್ತದೆಯಂತೆ. ಆದ್ದರಿಂದ ಮಧ್ಯಾಹ್ನದ ಸಮಯದಲ್ಲಿ ರಾಖಿಯನ್ನು ಕಟ್ಟಿಸಿಕೊಳ್ಳಲು ಸೂಕ್ತ ಸಮಯ ಎಂದು ಶಾಸ್ತ್ರಗಳು ಹೇಳುತ್ತವೆ.
ಶ್ರಾವಣ ಮಾಸದ ಹುಣ್ಣಿಮೆಯ ದಿನ ಬೆಳಗಿನ ಜಾವ ಬೇಗನೆ ಎಂದು ಸಹೋದರ-ಸಹೋದರಿಯರು ತಲೆ ಸ್ನಾನವನ್ನು ಮಾಡಬೇಕು. ಸಹೋದರನಿಗೆ ರಾಖಿಯನ್ನು ಕಟ್ಟುವವರೆಗೂ ಆಹಾರವನ್ನು ಸೇವಿಸದೆ ಇರುವುದು ಒಳ್ಳೆಯದು. .ಅಕ್ಕತಂಗಿಯರು ಮೊದಲಿಗೆ ಅಣ್ಣ ಅಥವಾ ತಮ್ಮನ ಹಣೆಗೆ ಕುಂಕುಮವನ್ನು ಇಡಬೇಕು. ಬಳಿಕ ನೆತ್ತಿಯ ಮೇಲೆ ಅಕ್ಷತೆಯನ್ನು ಹಾಕಬೇಕು ನಂತರ ಸಹೋದರನಿಗೆ ಆರತಿ ಬೆಳಗಿ ರಾಖಿಯನ್ನು ಕಟ್ಟುವಾಗ ಈ ಮಂತ್ರವನ್ನು ಹೇಳಿದರೆ ಒಳ್ಳೆಯದು.

ಮಂತ್ರ ಹೀಗಿದೆ “ ಶ್ರೀ ರಾಮ ರಕ್ಷಾ ಸರ್ವ ಜಗತ್ ರಕ್ಷಾ” ಎಂದು ಹೇಳಿದ ಮೇಲೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ಸಹೋದರನು ರಾಖಿ ಕಟ್ಟಿಸಿಕೊಂಡ ಮೇಲೆ ಸಹೋದರನಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಉಡುಗೊರೆಯನ್ನು ಕೊಡಬೇಕು. ಹಾಗೇ ಕಷ್ಟ ಕಾಲದಲ್ಲಿ ಕಾಪಾಡುತ್ತೇನೆ ಎಂದು ಸಹೋದರನು ಸಹೋದರಿಗೆ ವಚನ ಕೊಡಬೇಕು .
ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಿದ ನಂತರ ಸಹೋದರಿ ಆಹಾರವನ್ನು ಸೇವಿಸಬಹುದು. ತನ್ನ ಸಹೋದರನಿಗೆ ಇಷ್ಟವಾದ ಆಹಾರವನ್ನು ತಯಾರಿಸಿ ಭೋಜನವನ್ನು ಬಡಿಸಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top