ಸಿನಿಮಾ

ಕಣ್ಣು ಹೊಡೆದವಳ ಮುಂದೆ ಡಲ್ ಹೊಡೆದ ನಾಗಾರ್ಜುನ ಪುತ್ರ

ಹದಿನೆಂಟು ವರ್ಷ ವಯಸ್ಸಿನ ಪ್ರಿಯ ವಾರಿಯರ್ಸ್ ತನ್ನ ಮೊದಲ ಸಿನಿಮಾ ‘ಒರು ಆಡಾರ್ ಲವ್ ‘ ನ ಮಾಣಿಕ್ಯ ಮಲರಾಯ ಪೂವಿ ಎಂಬ ಹಾಡಿನಲ್ಲಿ

ಕಣ್ ಹೊಡೆದು ಮಿಂಚಿದ್ದೇ ಮಿಂಚಿದ್ದು ಆಕೆ ಇಂಟರ್ನೆಟ್ನಲ್ಲಿ ಏಕಾಏಕಿ ಸ್ಟಾರ್ ಆಗಿ ಬಿಟ್ಟಳು.

ಅದು ಕೇವಲ ಕೇರಳದಲ್ಲಿ ಮಾತ್ರವಲ್ಲ ಆಕೆ ಇಡೀ ಪ್ರಪಂಚದಲ್ಲಿ ಅನೇಕರಿಂದ ವೀಕ್ಷಿಸಲ್ಪಟ್ಟ ಆಕೆಯ ಕಣ್ಸನ್ನೆ ಆಸ್ಕರ್ ಅವಾರ್ಡ್ ನಲ್ಲೂ ಕೂಡ ಧ್ವನಿಸಿದ್ದಳು ಎಂಬುದು ಮಾತ್ರ ಸುಳ್ಳಲ್ಲ .

 

 

ಈಗಾಗಲೇ ಅನೇಕ ಇಂಟರ್ ನ್ಯಾಷನಲ್ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವ ಪ್ರಿಯಾ ವಾರಿಯರ್ ಇದೀಗ ಹೊಸ ಕಾಂಟ್ರಾಕ್ಟ್ ಸಹಿ ಮಾಡಿದ್ದಾಳೆ, ಈಕೆ ಸೌತ್ ಇಂಡಿಯನ್ ಶಾಪಿಂಗ್ ಮಾಲ್ನ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ .

ಆದರೆ ಇಲ್ಲಿ ವಿಷಯ ಏನಪ್ಪಾ ಅಂದರೆ ಈಗಾಗಲೇ ಸೌತ್ ಇಂಡಿಯನ್ ಶಾಪಿಂಗ್ ಮಾಲ್ ಗೆ ರಾಯಭಾರಿಯಾಗಿರುವ ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಕೇವಲ ಎಪ್ಪತ್ತೈದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರೆ ಹೊಸದಾಗಿ ಇಂಡಸ್ಟ್ರಿಗೆ ಬಂದ ಪ್ರಿಯಾ ವಾರಿಯರ್ ಒಂದು ಕೋಟಿ ರೂಪಾಯಿ ಪಡೆದುಕೊಂಡಿದ್ದಾಳೆ, ಇದರಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕರು ಕಣ್ಣರಳಿಸುವಂತಾಗಿದೆ ನಿನ್ನೆ ಮೊನ್ನೆ ಬಂದವರಿಗೆಲ್ಲ ಏನು ಕಾಲ ಬಂತು ಅಲ್ವಾ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top