fbpx
ಹೆಚ್ಚಿನ

ವಾಸ್ತು ಪ್ರಕಾರ ನಿಮ್ಮ ಸಹೋದರನಿಗೆ ಯಾವ ಬಣ್ಣದ ರಾಖಿ ಕಟ್ಟಿದರೆ ಶ್ರೇಯಸು ಗೊತ್ತಾ

ವಾಸ್ತು ಪ್ರಕಾರ ಸಹೋದರನಿಗೆ ಹೀಗೆ ರಾಖಿ ಕಟ್ಟಿದರೆ ಉತ್ತಮ.ಯಾವ ಬಣ್ಣದ ರಾಖಿಯನ್ನು ಕಟ್ಟಿದರೆ ಉತ್ತಮ

ಸಹೋದರ ಸಹೋದರಿಯರ ಪ್ರೀತಿಯ ಹಬ್ಬ ರಕ್ಷಾ ಬಂಧನ .ಇದೇ ಆಗಸ್ಟ್ 26 ನೇ ತಾರೀಖಿನಂದು,ಭಾನುವಾರ, ಹುಣ್ಣಿಮೆಯ ದಿನ, ಈ ಬಾರಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ . ಸಹೋದರನ ಕೈಗೆ ರಕ್ಷಾ ದಾರವನ್ನು ಕಟ್ಟಿ ಆತನ ಸಂತೋಷಕ್ಕೆ ಸಹೋದರಿಯರು ಪ್ರಾರ್ಥನೆ ಮಾಡುತ್ತಾರೆ. ಇಬ್ಬರ ಮಧ್ಯೆ ಸಂತೋಷ ಪ್ರೀತಿಯನ್ನು ಹೆಚ್ಚು ಮಾಡುವ ಈ ಹಬ್ಬದಲ್ಲಿ ವಾಸ್ತು ಕೂಡ ಮಹತ್ವದ ಪಾತ್ರ ವಹಿಸುತ್ತದೆ .
ಮಾರುಕಟ್ಟೆಯಲ್ಲಿ ರಾಖಿಗಳು ವಿವಿಧ ಬಣ್ಣಗಳಲ್ಲಿ,ವಿನ್ಯಾಸಗಳಲ್ಲಿ,ಮತ್ತು ಆಕರ್ಷಕವಾಗಿ ಕಾಣುವ ಬಗೆ ಬಗೆಯ ರಾಖಿಗಳು ರಾರಾಜಿಸುತ್ತವೆ.ಅವು ನಮ್ಮನ್ನು ನಾವು ರಾಖಿಯನ್ನು ಖರೀದಿಸಲು ಹೋದಾಗ ಗೊಂದಲಕ್ಕೆ ಈಡು ಮಾಡುತ್ತವೆ. ಜನರನ್ನು ಆಕರ್ಷಿಸಲು ಕೃತಕ ವಸ್ತುಗಳನ್ನು ಬಳಸಿ ಸುಂದರವಾದ ರಾಖಿಗಳನ್ನು ಸಿದ್ದಪಡಿಸಲಾಗಿದೆ. ಆದರೆ ಸಹೋದರನ ಯಶಸ್ಸು ಬಯಸುವವರು ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿದ ರಾಖಿಯನ್ನು ಕಟ್ಟಬೇಕು.

 

 

 

ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಣ್ಣಗಳ ರಾಖಿಗಳಿರುತ್ತವೆ, ಚೆನ್ನಾಗಿದೆ ಎನ್ನುವ ಕಾರಣಕ್ಕೆ ಕಪ್ಪು ಬಣ್ಣದ ರಾಖಿಯನ್ನು ಯಾವುದೇ ಕಾರಣಕ್ಕೂ ಸಹೋದರನಿಗೆ ಕಟ್ಟುವ ತಪ್ಪು ಪ್ರಯತ್ನ ಮಾಡಬೇಡಿ , ವಾಸ್ತು ಶಾಸ್ತ್ರದ ಪ್ರಕಾರ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣದ ರಾಖಿಯನ್ನು ಕಟ್ಟಿದರೆ ಅತ್ಯಂತ ಶುಭಫಲ ನೀಡುತ್ತದೆ.
ರಾಖಿ ಕಟ್ಟುವ ವೇಳೆ ದಿಕ್ಕು ಕೂಡ ಮಹತ್ವವನ್ನು ಪಡೆಯುತ್ತದೆ. ರಾಖಿ ಕಟ್ಟುವ ವೇಳೆ ಸಹೋದರ-ಸಹೋದರಿ ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಕುಳಿತುಕೊಳ್ಳಬೇಕು . ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ರಾಕಿ ಕಟ್ಟುವ ವೇಳೆ ಕಿಟಕಿ ಹಾಗೂ ಬಾಗಿಲು ತೆರೆದಿರಲಿ. ಒಳ್ಳೆಯ ಗಾಳಿ, ಬೆಳಕು , ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಸಹೋದರರು ಅಪ್ಪಿತಪ್ಪಿಯೂ ನಕಲಿ ಆಭರಣಗಳನ್ನು ಸಹೋದರಿಯರಿಗೆ ನೀಡಬೇಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top