ಸಿನಿಮಾ

ಈ ಕೆಲಸ ಮಾಡಿ ಗರ್ಭಿಣಿ ಹೆಂಡತಿ ಬಯಕೆ ಈಡೇರಿಸಿದ ಕಿರಾತಕ ಯಶ್ ,ರಾಧಿಕಾ ಫುಲ್ ಖುಷ್

ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಬಿಟ್ಟಿರುವ ಮಣಗಟ್ಟಲೆ ಗಡ್ಡಕ್ಕೆ ಕೊನೆಗೂ ಕತ್ತರಿ ಬಿದ್ದಿದೆ. ಕೆಜಿಎಫ್ ಚಿತ್ರಕ್ಕಾಗಿ ವರ್ಷಗಳ ಕಾಲದಿಂದಲೂ ಶೇವ್ ಮಾಡಿಸದೇ ಗಡ್ಡ ಬೆಳೆಸಿಕೊಂಡು ಬಂದಿದ್ದ ಯಶ್ ಕೆಜಿಎಫ್ ಚಿತ್ರದ ಚಿತ್ರೀಕರಣ ಮುಂದುವರಿದಷ್ಟೂ ಗಡ್ಡ ಬೆಳೆದುಕೊಳ್ಳುತ್ತಿತ್ತು. ಚಿತ್ರದ ಮೇಲಿನ ನಿರೀಕ್ಷೆ ಯಶ್ ಬಿಟ್ಟಿರೋ ಉದ್ದ ಗಡ್ಡದ ಎಸಳಿನಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ ಮಾಧ್ಯಮದವರೂ ಒಳಗೊಂಡಂತೆ ಅನೇಕರು ಗಡ್ಡ ಯಾವಾಗ ತೆಗೆಯುತ್ತೀರಾ? ಎಂಬ ಸಾಮಾನ್ಯ ಪ್ರಶ್ನೆಯನ್ನು ಯಶ್’ಗೆ ಪದೇ ಪದೇ ಕೇಳುತ್ತಿದ್ದರು. ಈಗ ಅವರೆಲ್ಲಗೂ ರಾಕಿಂಗ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ.

 

 

ಆಗಸ್ಟ್‌ 7 ರಿಂದ ಕೆಜಿಎಫ್‌ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣವಿದ್ದು, ಹಾಡಿನ ಶೂಟಿಂಗ್‌ ಮುಗಿದ ನಂತರ ಯಶ್‌ ಗಡ್ಡ ತೆಗೆಯುತ್ತೇನೆ ಎಂದಿದ್ದರು ಯಶ್. ಕೆಜಿಎಫ್‌ ನಂತರ ಆರಂಭವಾಗುವ ಕಿರಾತಕ2 ಸಿನಿಮಾದಲ್ಲಿ ಯಶ್‌ ತಮ್ಮ ಲುಕ್ಕನ್ನು ಕೊಂಚ ಬದಲಾಯಿಸಿಕೊಂಡ ಯಶ್ . ತಮ್ಮ ಉದ್ದದ ಕೂದಲಿಗೆ ಕತ್ತರಿ ಹಾಕಿಸಿ ಮೊದಲ ಕುರುಚಲು ಗಡ್ಡದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಪತ್ನಿ ರಾಧಿಕಾ ಕೂಡ ಈ ಗಡ್ಡವನ್ನು ಎರಡು ವರ್ಷದಿಂದ ನೋಡಿ ನೋಡಿ ಬೇಸತ್ತು ಹೋಗಿದ್ದು ಯಶ್ ಅವರ ಗಡ್ಡ ಹಾಗು ಕೂದಲು ತೆಗೆಸಿಕೊಂಡ ನಿರ್ಧಾರಕ್ಕೆ ಫುಲ್ ಖುಷಿಯಾಗಿದ್ದಾರೆ.

ಕೆಜಿಎಫ್ ನಂತರ ಯಶ್ ಅವರ ಚಿತ್ರಕ್ಕೆ “ಮೈ ನೇಮ್ ಇಸ್ ಕಿರಾತಕ” ಎಂದು ಹೆಸರನ್ನು ಇಡಲಾಗಿದ್ದು ಜಯಣ್ಣ ಫಿಲಂಸ್ ನಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ಇಬ್ಬರು ನಾಯಕಿಯರಿರಲಿದ್ದು ಅವರ ಆಯ್ಕೆಯೂ ಅದಾಗಲೇ ಫೈನಲ್ ಆಗಿದೆ. ಮೈಸೂರು ಸುತ್ತ ಮುತ್ತ ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದ್ರೆ ಈ ಹಿಂದೆ ರಾಜಾಹುಲಿ, ಕಿರಾತಕ ಸಿನಿಮಾಗಳಲ್ಲಿ ಮಾಡಿದ್ದಂತಹ ಮಂಡ್ಯದ ಹುಡ್ಗನ ಶೈಲಿಯ ಪಾತ್ರವನ್ನೇ ಈ ಹೊಸ ಚಿತ್ರದಲ್ಲೂ ಯಶ್ ಮಾಡಲಿದ್ದಾರಂತೆ.

ಯಶ್ ಗಡ್ಡ ಬೋಳಿಸಿಕೊಂಡ ವಿಡಿಯೋ ಜೊತೆಗೆ ಯಶ್ ಗಡ್ಡ ಬೋಳಿಸಿಕೊಂಡಾಗ ಆದ ಬೇಸರ ಮತ್ತು ರಾಧಿಕಾ ಮುಖದಲ್ಲಿನ ಖುಷಿ ಎಲ್ಲವನ್ನು ಯಶ್ ಹಂಚಿಕೊಂಡಿರುವ ವಿಡಿಯೋ ದಲ್ಲಿ ಕಾಣಬಹುದು , ನೀವು ಆ ವಿಡಿಯೋ ನೋಡ್ಬಿಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top