fbpx
ಕಿರುತೆರೆ

ಬಿಗ್‌ಬಾಸ್ ಸೀಸನ್- 6 ಆರಂಭಕ್ಕೆ ಮುಹೂರ್ತ ಫಿಕ್ಸ್.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಎಂಬ ಹೆಸರು ಗಿಟ್ಟಿಸಿರುವ ಬಿಗ್’ಬಾಸ್ ಕಾರ್ಯಕ್ರಮದ ಐದನೇ ಸೀಸನ್ ಮುಗಿದು ಇನ್ನೂ ಐದಾರು ತಿಂಗಳುಗಳು ಮಾತ್ರವೇ ಸವೆದಿದೆ. ಹೀಗಿದ್ದರೂ ಅದಾಗಲೇ ಮತ್ತೊಂದು ಸೀಸನ್ನಿನ ಬಗ್ಗೆ ನಾನಾ ಗಾಸಿಪ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಒಂದಷ್ಟು ಮನರಂಜನೆಯ ಜೊತೆಗೆ ಸ್ಪರ್ಧಿಗಳ ನಡುವಿನ ರಂಪಾಟ, ಸಣ್ಣತನ, ಕಿರಿಕ್ಕುಗಳೇ ಜೀವಾಳವಾಗಿರೋ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಿಗೆ ತಕರಾರಿದೆ. ಇದು ನಮ್ಮ ಕನ್ನಡ ನೆಲಕ್ಕೆ ಒಗ್ಗದ ಕಾನ್ಸೆಪ್ಟ್ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿರುತ್ತದೆ. ಇಂಥ ನೂರೆಂಟು ತಾತ್ಸಾರದ ಮಾತುಗಳ ನಡುವೆಯೂ ಬರೋಬ್ಬರಿ ಐದು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ ಆರನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ..

 

 

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಆರನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ.. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್ ಅಂತೇ. ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತಾಣಗಳು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..

ಬಿಗ್ ಬಾಸ್ ಮನೆಯೊಳಗೇ ಕಾಲಿಡಲಿರುವ ಸಂಭಾವ್ಯರ ಪಟ್ಟಿ ಹೀಗಿದೆ.

1.ಹೇಮಲತಾ – ಖಾಸಗಿ ಟಿವಿ ನಿರೂಪಕಿ
2. ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ.
3.ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ,
4.ನಟ ಮಂಡ್ಯ ರಮೇಶ್,
5. ಡಬ್ ಸ್ಮಾಷ್ ಕುಖ್ಯಾತಿಯ ತುಳಸಿ ಪ್ರಸಾದ್.

6.ನಟಿ ಸುಮನ್​ ರಂಗನಾಥ್​​
7. ನಟಿ ಪ್ರೇಮಾ
8.ಪ್ರೇಮಕುಮಾರಿ
9.ಗುರುಕಿರಣ್​​​
10.ನವೀನ್​​ ಕೃಷ್ಣ- ನಟ

11.ಸರಿಗಮಪ ಶೋ ಮೂಲಕ ಚಾಲ್ತಿಗೆ ಬಂದಿದ್ದ ಗಾಯಕ ಚನ್ನಪ್ಪ
12. ಕಲಾಸಾಮ್ರಾಟ್ ಎಸ್.ನಾರಾಯಣ್
ಹಾಗು ಆರು ಮಂದಿ ಸಾಮಾನ್ಯ ಜನರು

ಕಳೆದ ಭಾರಿಯಂತೆ ಈ ಭಾರಿಯೂ ಸಾಮಾನ್ಯ ವ್ಯಕ್ತಿಗಳಿಗೆ ಅವಕಾಶಗಳನ್ನು ನೀಡಲು ಆಯೋಜಕರು ನಿರ್ಧರಿಸಿದ್ದು ಈಗಾಗಲೇ ಅದಕ್ಕಾಗಿ ಆಡಿಷನ್ ಅನ್ನು ಆರಂಬ್ಸಿದ್ದಾರೆ. ನೀವು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬೇಕು ಎಂಬ ಇರದೇ ಹೊಂದಿದ್ದರೇ ಅಫೀಶಿಯಲ್ voot appಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕಿದೆ. ವೋಟ್ ಆಪ್ ನಲ್ಲಿಯೇ ಅರ್ಜಿ ಅವಕಾಶ ನೀಡಲಾಗಿದ್ದು ನಿಮ್ಮ ಪ್ರತಿಭೆ ಏನೆಂಬುದನ್ನು ಗುರುತಿಸಿ ಈ ಅರ್ಜಿಯನ್ನ ವಿಡಿಯೋ ಮೂಲಕ ಭರ್ತಿ ಮಾಡಬೇಕಿದೆ. ಬಂದಿರುವ ಅರ್ಜಿಗಳಲ್ಲಿ ಅತ್ಯುತ್ತಮರನ್ನ ಬಿಗ್ ಬಾಸ್ ಮನೆಗೆ ಕಳುಹಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top